ಸಾರಾಂಶ
ಯುವಜನರು ದೇಶದ ಸಂಪತ್ತು. ಹಾಗಾಗಿ ಅವರು ಸದಾ ಜಾಗೃತ ಮನಸ್ಸಿನೊಂದಿಗೆ ದೇಶದ ವಿಕಾಸಕ್ಕೆ ಕೈಜೋಡಿಸಬೇಕೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿವೇದಿತಾ ಮುಕ್ತ ದಳದ ಗೈಡ್ ಕ್ಯಾಪ್ಟನ್ ಕಾಂಚನಮಾಲ ನುಡಿದರು. ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರ ಮತ್ತು ಶಿಸ್ತು ಬೆಳೆಸಿಕೊಳ್ಳಲೇಬೇಕು. ಆಗ ಮಾತ್ರ ಯುವಜನತೆ ದೇಶದ ನಿಜವಾದ ಸಂಪತ್ತಾಗುತ್ತಾರೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋವರ್ಸ್ ರೇಂಜರ್ಸ್‌ಗಳಿಗೆ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಯುವಜನರು ದೇಶದ ಸಂಪತ್ತು. ಹಾಗಾಗಿ ಅವರು ಸದಾ ಜಾಗೃತ ಮನಸ್ಸಿನೊಂದಿಗೆ ದೇಶದ ವಿಕಾಸಕ್ಕೆ ಕೈಜೋಡಿಸಬೇಕೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿವೇದಿತಾ ಮುಕ್ತ ದಳದ ಗೈಡ್ ಕ್ಯಾಪ್ಟನ್ ಕಾಂಚನಮಾಲ ನುಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸೇವೆ ಸಲ್ಲಿಸಿದ ಏಕಲವ್ಯ ಮುಕ್ತ ದಳದ ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ಸೇವೆಯ ಮಹತ್ವವನ್ನು ಕುರಿತು ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರ ಮತ್ತು ಶಿಸ್ತು ಬೆಳೆಸಿಕೊಳ್ಳಲೇಬೇಕು. ಆಗ ಮಾತ್ರ ಯುವಜನತೆ ದೇಶದ ನಿಜವಾದ ಸಂಪತ್ತಾಗುತ್ತಾರೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋವರ್ಸ್ ರೇಂಜರ್ಸ್‌ಗಳಿಗೆ ಸಲಹೆ ನೀಡಿದರು.
ಅಧ್ಯಯನ ಪಿಯು ಕಾಲೇಜಿನ ಉಪ ಪ್ರಾಂಶುಪಾಲ ಮೋಹನ್ ಮಾತನಾಡಿ, ಶಿಕ್ಷಣ ಪಡೆಯುವಾಗಲೇ ವಿವಿಧ ರೀತಿಯ ಸೇವೆಗಳಲ್ಲಿ ನಾವುಗಳು ತೊಡಗಿಸಿಕೊಂಡರೆ ನಮ್ಮ ಮುಂದಿನ ಬದುಕು ಉತ್ತಮವಾಗಲು ಸಹಕಾರಿಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸೇವೆ ಸಲ್ಲಿಸುವಂತಹ ಅವಕಾಶಗಳು ಬಂದಾಗ ತಪ್ಪದೆ ಸೇವೆಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.ಆರೋಗ್ಯ ಶಿಬಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ವೇಣು ಕುಮಾರ್ ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿ ಉತ್ತಮವಾಗಿ ಸೇವೆ ಸಲ್ಲಿಸಿದ 45 ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ಅಭಿನಂದನೆ ಸಲ್ಲಿಸಿದರು.