ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣ ಸೆಸ್ಕಾಂ ಕಚೇರಿಯಲ್ಲಿ ಅಧೀಕ್ಷಕ ಎಂಜಿನಿಯರ್ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು, ರೈತರು ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.ಸಭೆ ಪ್ರಾರಂಭದಲ್ಲಿ ರೈತ ಕ್ಯಾತಘಟ್ಟ ರವಿಕುಮಾರ್ ಮಾತನಾಡಿ, ಗ್ರಾಹಕರು ಅಕ್ರಮ ಸಕ್ರಮ ಯೋಜನೆಯಡಿ ಸಂಪರ್ಕ ಪಡೆಯಲು ಹಣ ಪಾವತಿ ಮಾಡಿದ್ದ ರೈತರಿಗೆ ಇದುವರೆಗೂ ಸಂಪರ್ಕ ನೀಡಿಲ್ಲ ಎಂದು ಅಧಿಕಾರಿಗಳ ಗಮನಸೆ ಳೆದರು.
ಇದಕ್ಕೆ ಉತ್ತರಿಸಿದ ಎಂಜಿನಿಯರ್ ಸೋಮಶೇಖರ್, ಈ ಮೊದಲು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ನಿಯಮಿತವಾಗಿ ಕೆಲಸ ಮಾಡದ ಕಾರಣ ಅವರನ್ನು ಬ್ಲಾಕ್ ಲೀಸ್ಟ್‌ಗೆ ಸೇರಿಸಲಾಗಿದೆ. ಅನುದಾನದ ಲಭ್ಯತೆ ಹಾಗೂ ಸಂಪರ್ಕದ ಅಂತರ ಗಮನದಲ್ಲಿರಿಸಿಕೊಂಡು 500 ಮೀಟರ್ ಅಂತರದೊಳಗೆ ರೈತರಿಗೆ ಸಂಪರ್ಕ ನೀಡಲಾಗುವುದು ಎಂದರು.ಉಳಿದ ರೈತರಿಗೆ ಸೊಲಾರ್ ಪಂಪ್ ಸೆಟ್ ಅಳವಡಿಸಲು ಚೆಸ್ಕಾಂನಿಂದಲೇ ಆನ್ ಲೈನ್ ಅರ್ಜಿ ಸಲ್ಲಿಸಿದ್ದು ಎಲ್ಲರಿಗೂ ಸೊಲಾರ್ ಸಂಪರ್ಕ ಒದಗಿಸಲಾಗುವುದು ಎಂದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಚಂದೂಪುರ ಶಿವಲಿಂಗೇಗೌಡ ಮಾತನಾಡಿ, ಪಟ್ಟಣ ಸೇರಿದಂತೆ ಎಲ್ಲೆಡೆ ಟ್ರಾನ್ಸ್‌ಫಾರ್ಮರ್ ಹಾಗೂ ಕಂಬಗಳಿಗೆ ಬಳ್ಳಿ ಬೆಳೆದು, ಮರಗಳು ತಗುಲುತ್ತಿವೆ. ಇದರಿಂದ ವಿದ್ಯುತ್ ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಫೋಟೋ ಪ್ರದರ್ಶಿಸಿ ಲೈನ್ ಮನ್‌ಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ನ.ಲೀ.ಕೃಷ್ಣ ಮಾತನಾಡಿ, ಹಾಲಿ ಸಂಪರ್ಕ ಪಡೆದ ರೈತರುಗಳಿಗೆ ಒಂದು ಟಿಸಿ ಇದ್ದು, ಅಧಿಕ ಕಾರ್ಯದೊತ್ತಡ ಟಿಸಿ ಮೇಲೆ ಬಿದ್ದು ರೈತರಿಗೆ ತೊಂದರೆ ಆಗುತ್ತಿದೆ ಎಂದರು. ಕೂಡಲೇ ಸ್ಥಳಪರಿಶೀಲಿಸಿ ಕ್ರಮವಹಿಸಲು ಸೋಮಶೇಖರ್ ಸೂಚಿಸಿದರು.
ಉಪ್ಪಿನಕೆರೆ ಶಿವರಾಮ್ ಅವರು, ಗೃಹಜ್ಯೊತಿಯಡಿ ಮಿನಿಮಮ್ ಬಳಕೆ ಗುರುತಿಸುವಲ್ಲಿ 12 ತಿಂಗಳ ಬಿಲ್ ಲಭ್ಯ ಇಲ್ಲ ಎಂದು ನಮಗೆ ಯೊಜನೆ ಸೌಲಭ್ಯ ಸಿಗುತ್ತಿಲ್ಲ ಎಂದು ದೂರು ಸಲ್ಲಿಸಿದರು. ಸಾಫ್ಟ್ ವೇರ್ ಸಮಸ್ಯೆಯಾಗಿದೆ. ಅಜ್ಜಹಳ್ಳಿಯಲ್ಲಿ ಹೈ ಟೆನ್ಸನ್ ತಂತಿ ಸಾಮಾನ್ಯ ವೋಲ್ಟೆಜ್ ನ ಸಂಪರ್ಕ ಇದ್ದ ಕಂಬಕ್ಕೆ ಅಳವಡಿಕೆ ಮಾಡಿ ಹೊಸಕಂಬ ಹಾಕದೆ ಅಧಿಕಾರಿಗಳು ಲೊಪ ಎಸಗಿದ್ದಾರೆ. ಇದರಿಂದ ಎರಡು ಲೈನ್‌ಗಳು ಪರಸ್ಪರ ತಾಗಿ ಅವಘಡ ವಾಗುವ ಸಾಧ್ಯತೆ ಇದೆ ಎಂದು ಗಮನ ಸೆಳೆದರು. ಈ ಬಗ್ಗೆ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.ಸೋಮನಹಳ್ಳಿ ಬಳಿ ವಿದ್ಯುತ್ ವಿತರಣೆ ಕೇಂದ್ರ ಶೀಘ್ರ ಪ್ರಾರಂಭವಾಗಲಿದೆ. ಇದರಿಂದ ಬೇಸಿಗೆಯಲ್ಲಿ ವಿದ್ಯುತ್ ಸರಬರಾಜಿನ ಕೊರತೆ ನೀಗಲಿದೆ. ಅಲ್ಲದೇ, ಸೊಲಾರ್ ಪ್ಲಾಂಟ್ ಖಾಸಗಿಯವರ ಜಮೀನಿನನ್ನು ವಾರ್ಷಿಕ 25 ಸಾವಿರ ರು. ಬಾಡಿಗೆ ಪಡೆದು ಅಳವಡಿಸಲು ತಿರ್ಮಾನಿಸಲಾಗಿದೆ. ರೈತರ ಅನುಪಯುಕ್ತ ಬೇಸಾಯದ ಜಮೀನು ಇದ್ದಲ್ಲಿ ಪಟ್ಟಣದ ಸಮೀಪ ಕನಿಷ್ಠ 5 ಎಕರೆ ಜಮೀನು ಇದ್ದಲ್ಲಿ ಇಲಾಖೆ ಸಂಪರ್ಕಿಸುವಂತೆ ಕೊರಿದರು.
ಗ್ರಾಹಕರು ತುರ್ತು ಸಮಸ್ಯೆ ಇದ್ದಲ್ಲಿ ಗ್ರಾಹಕ ಸಹಾಯವಾಣಿ 112 ಗೆ ಕರೆ ಮಾಡಬೇಕು. ಇದು ತ್ರೈಮಾಸಿಕ ಗ್ರಾಹಕರ ಕುಂದು ಕೊರತೆ ಸಭೆ. ಪ್ರತಿ ತಿಂಗಳು ಮೂರನೇ ಶನಿವಾರ ಅಯಾ ತಾಲೂಕು ಕೇಂದ್ರ ಕಚೇರಿಯಲ್ಲಿ ಕುಂದುಕೊರತೆ ಸಭೆ ನಡೆಯಲಿದೆ. ಇದರ ಪ್ರಯೊಜನ ಪಡೆಯುವಂತೆ ಅಧೀಕ್ಷಕ ಎಂಜಿನಿಯರ್ ಸೊಮಶೇಖರ್ ಮಾಹಿತಿ ನೀಡಿದರು.ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಮೇಶ್. ಮೊಹನ್ ಎ.ಓ.ಶ್ರೀನಿವಾಸ್ ಇದ್ದರು.