ರೈತರ ಆತ್ಮಹತ್ಯ ಪ್ರಕರಣಕ್ಕೆ ಪರಿಹಾರ ಇತ್ಯರ್ಥ

| Published : Oct 07 2024, 01:41 AM IST

ಸಾರಾಂಶ

ಇಂಡಿ: ಇಂಡಿ ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಒಂದು ರೈತ ಆತ್ಮಹತ್ಯ ಪ್ರಕರಣ ಮತ್ತು 3 ಆಕಸ್ಮಿಕ ಮರಣ ಪ್ರಕರಣಗಳ ಬಗ್ಗೆ, ಸಿಂದಗಿ ತಾಲ್ಲೂಕಿನಲ್ಲಿ 3 ಆತ್ಮಹತ್ಯ ಪ್ರಕರಣಗಳ ಬಗ್ಗೆ ಚರ್ಚೆ ಮಾಡಿ ಆತ್ಮಹತ್ಯ ಪ್ರಕರಣಕ್ಕೆ ತಲಾ 5 ಲಕ್ಷದಂತೆ ಮತ್ತು ಆಕಸ್ಮಿಕ ಮರಣಕ್ಕೆ ತಲಾ 2 ಲಕ್ಷದಂತೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಂಡಿ: ಇಂಡಿ ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಒಂದು ರೈತ ಆತ್ಮಹತ್ಯ ಪ್ರಕರಣ ಮತ್ತು 3 ಆಕಸ್ಮಿಕ ಮರಣ ಪ್ರಕರಣಗಳ ಬಗ್ಗೆ, ಸಿಂದಗಿ ತಾಲ್ಲೂಕಿನಲ್ಲಿ 3 ಆತ್ಮಹತ್ಯ ಪ್ರಕರಣಗಳ ಬಗ್ಗೆ ಚರ್ಚೆ ಮಾಡಿ ಆತ್ಮಹತ್ಯ ಪ್ರಕರಣಕ್ಕೆ ತಲಾ 5 ಲಕ್ಷದಂತೆ ಮತ್ತು ಆಕಸ್ಮಿಕ ಮರಣಕ್ಕೆ ತಲಾ 2 ಲಕ್ಷದಂತೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸರ್ಕಾರ ರೈತರಿಗೆ ನೀಡುವ ಪರಿಹಾರದ ಹಣ ಬಿಡುಗಡೆ ಮಾಡಿದ ತಕ್ಷಣವೇ ಸಂಬಂಧಪಟ್ಟ ರೈತ ಕುಟುಂಬಗಳಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವದು ಎಂದು ಎಸಿ ಅಬೀದ ಗದ್ಯಾಳ ತಿಳಿಸಿದರು.

ಎಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ತಹಸೀಲ್ದಾರ್‌ ಬಿ.ಎಸ್.ಕಡಕಭಾವಿ ಸೇರಿದಂತೆ ತಾಲ್ಲೂಕಿನ ಇನ್ನಿತರ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.