ಸಾರಾಂಶ
ಕುದೂರು: ಮಳೆಗೆ ಚರಂಡಿಯ ನೀರು ಉಕ್ಕಿ ಮನೆಯೊಳಗೆ ನುಗ್ಗಿ ಎರಡು ದಿನಗಳಿಂದ ಚರಂಡಿ ಪಕ್ಕದಲ್ಲಿ ವಾಸ ಮಾಡುತ್ತಿರುವವರು ಜನರು ನರಕಯಾತನೆ ಅನುಭವಿಸುವಂತಾಗಿದೆ.
ಕುದೂರು ಗ್ರಾಮದ ತುಮಕೂರು ರಸ್ತೆಗೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯ್ತಿಯ ಏಳನೇ ವಾರ್ಡಿನಲ್ಲಿ ಈ ಸಮಸ್ಯೆ ಉಲ್ಬಣಿಸಿದೆ. ಈ ನೀರು ಹೀಗೆ ಉಕ್ಕಲು ಕಾರಣ ಚರಂಡಿಗೆ ಹೊಂದಿಕೊಂಡಂತೆ ಇರುವ ಖಾಸಗಿ ವ್ಯಕ್ತಿ ಜಮೀನಿಗೆ ಒಡ್ಡು ಕಟ್ಟಿಕೊಂಡ ಕಾರಣ ಚರಂಡಿ ನೀರು ಮುಂದೆ ಹರಿದು ಹೋಗದೆ ಉಕ್ಕಿ ಹರಿದು ಅಲ್ಲಿನ ನಿವಾಸಿಗಳಿಗೆ ತೊಂದೆಯಾಗುತ್ತಿದೆ.ಹೀಗೆ ಚರಂಡಿಗೆ ಹೊಂದಿಕೊಂಡಿರುವ ಜಮೀನು ಗ್ರಾಮಪಂಚಾಯ್ತಿ ಸದಸ್ಯ ಅನಂತ ನಾರಾಯಣ್ ರವರಿಗೆ ಸೇರಿದ್ದು. ಕಳೆದ ಮುವತ್ತು ವರ್ಷಗಳಿಂದಲೂ ಚರಂಡಿ ನೀರು ಹರಿದು ಹೋಗುತ್ತಿತ್ತು. ಆಗ ಜಾಗ ಪಂಚಾಯ್ತಿ ಸದಸ್ಯರಿಗೆ ಸೇರಿದ್ದಾಗಿದ್ದು, ಈ ಹಿಂದೆ ಪಂಚಾಯ್ತಿಯವರಿಗೆ ನಮ್ಮದೇ ಜಾಗದಲ್ಲಿ ಚರಂಡಿ ಕಟ್ಟಿಕೊಳ್ಳಿ ಎಂದು ಪಂಚಾಯ್ತಿಯವರಿಗೆ ಹೇಳಿದ್ದರಂತೆ. ಆದರೆ ಈಗ ನಾವು ಹಾಗೆ ಹೇಳಿಯೇ ಇಲ್ಲ. ನಮ್ಮ ಜಾಗದಲ್ಲಿ ಚರಂಡಿ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ತರಕಾರು ತೆಗೆದ ಕಾರಣ ಕೊಳಚೆ ನೀರು ಮುಂದೆ ಹರಿದು ಹೋಗಲಾರದೆ ಜನವಸತಿ ಸ್ಥಳದಲ್ಲಿ ಉಕ್ಕಿ ಹರಿಯುವಂತಾಗಿದೆ.
ಅಲ್ಲಿನ ನಿವಾಸಿಗಳು ಗ್ರಾಮ ಪಂಚಾಯ್ತಿ ಸದಸ್ಯರನ್ನು ಸ್ವಲ್ಪ ಜಾಗ ಅನುವು ಮಾಡಿಕೊಡಿ ಚರಂಡಿ ನೀರು ಹರಿದು ಹೋಗಲು ನಮಗೆ ಊಟತಿಂಡಿ ಸೇರುತ್ತಿಲ್ಲ, ಉಸಿರಾಡಲು ಕಷ್ಟವಾಗುತ್ತಿದೆ ಎಂದರೂ ಒಡ್ಡು ಹಾಕಿಕೊಂಡಿರುವ ಗ್ರಾಮಪಂಚಾಯ್ತಿ ಸದಸ್ಯರ ಮನ ಕರಗಲಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಜನರಿಗೆ ಅನುಕೂಲ ಮಾಡಿಕೊಡಿ ಎಂದು ಪಂಚಾಯ್ತಿ ಅಧಿಕಾರಿಗಳು ಮನವಿ ಮಾಡಿದರೂ ಕೂಡಾ ಚರಂಡಿ ಹರಿದು ಹೋಗುವ ಜಾಗದ ಮಾಲೀಕರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಆದ ಅನಂತನಾರಾಯಣ್ ಯಾರ ಮಾತಿಗೂ ಕೇರ್ ಮಾಡುತ್ತಿಲ್ಲ.ಚರಂಡಿಯ ನೀರು ಹರಿದು ಹೋಗುತ್ತಿರುವ ಜಾಗ ನಮ್ಮದು ಎಂದು ಒಡ್ಡು ಹಾಕಿಕೊಂಡಾಗ ಪಂಚಾಯ್ತಿ ಮುಖ್ಯಸ್ಥರು ನಮಗೆ ಮೂರು ತಿಂಗಳು ಅವಕಾಶ ಕೊಡಿ ಅಷ್ಟರೊರಳಗೆ ಎಂಜಿನಿಯರ್ ಪ್ಲಾನ್ ಮಾಡಿಸಿ ಚರಂಡಿ ನಿರ್ಮಾಣ ಮಾಡಿಕೊಳ್ಳುತ್ತೇವೆ ಎಂದು ಮನವಿ ಮಾಡಿಕೊಂಡರು ಒಪ್ಪದೆ ಚರಂಡಿಗೆ ಒಡ್ಡು ಕಟ್ಟಿಯೇ ಬಿಟ್ಟರು.
ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮುಂದೆ ನಿಂತು ಸಮಸ್ಯೆಗಳನ್ನು ಪರಿಹರಿಸಬೇಕೆಂಬ ಮನಸು ಹೊಂದಿರಬೇಕಾದ ಗ್ರಾಮಪಂಚಾಯ್ತಿ ಸದಸ್ಯರೇ ಹೀಗೆ ಜನರಿಗೆ ತೊಂದರೆ ಕೊಟ್ಟರೆ ನಾವು ನ್ಯಾಯಕ್ಕಾಗಿ ಯಾರ ಬಳಿ ಹೋಗುವುದು ಎಂದು ಚರಂಡಿ ಸಮಸ್ಯೆಯನ್ನು ಅನುಭವಿಸುತ್ರಿರುವ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.ಕೋಟ್...........ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುತ್ತೇವೆ. ಚುನಾವಣೆ ಬಂದ ಕಾರಣ ಚರಂಡಿ ನಿರ್ಮಾಣ ತಡವಾಯಿತು. ಬರುವ ವಾರದಲ್ಲಿ ಎಂಜಿನಿಯರ್ ಕರೆಸಿ ಯೋಜನೆ ರೂಪಿಸಿ ಅದಕ್ಕೆ ಶಾಶ್ವತ ಪರಿಹಾರ ಕೊಡಿಸುತ್ತೇನೆ.
-ಕೆ.ಟಿ.ವೆಂಕಟೇಶ್, ಸದಸ್ಯರು, ಗ್ರಾಮ ಪಂಚಾಯಿತಿ10ಕೆಆರ್ ಎಂಎನ್ 5,6.ಜೆಪಿಜಿಕುದೂರು ಗ್ರಾಮದ ತುಮಕೂರು ರಸ್ತೆಯಲ್ಲಿ ಚರಂಡಿ ನೀರು ಉಕ್ಕಿ ರಸ್ತೆ ಹಾಗು ಮನೆಯ ಮುಂದೆ ದುರ್ನಾತದ ಕೆಸರು.