ಶಾದೀಪೂರದಲ್ಲಿ ಚರಂಡಿ ಸ್ವಚ್ಚತೆ ಕಾರ್ಯ ನಡೆಸಲಾಗುತ್ತಿದೆ: ಭಾರತಿ ಪವಾರ

| Published : Jul 02 2024, 01:44 AM IST

ಶಾದೀಪೂರದಲ್ಲಿ ಚರಂಡಿ ಸ್ವಚ್ಚತೆ ಕಾರ್ಯ ನಡೆಸಲಾಗುತ್ತಿದೆ: ಭಾರತಿ ಪವಾರ
Share this Article
  • FB
  • TW
  • Linkdin
  • Email

ಸಾರಾಂಶ

ಗಡಿಪ್ರದೇಶದ ಶಾದೀಪೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮ ಮತ್ತು ತಾಂಡಾಗಳಲ್ಲಿನ ಜನರ ಆರೋಗ್ಯಕರ ಜೀವನಕ್ಕಾಗಿ ಸೊಳ್ಳೆಗಳ ಕಾಟ ತಪ್ಪಿಸುವುದಕ್ಕಾಗಿ ಸಾರ್ವಜನಿಕ ಚರಂಡಿಗಳನ್ನು ಶುಚಿಗೊಳಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಗಡಿಪ್ರದೇಶದ ಶಾದೀಪೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮ ಮತ್ತು ತಾಂಡಾಗಳಲ್ಲಿನ ಜನರ ಆರೋಗ್ಯಕರ ಜೀವನಕ್ಕಾಗಿ ಸೊಳ್ಳೆಗಳ ಕಾಟ ತಪ್ಪಿಸುವುದಕ್ಕಾಗಿ ಸಾರ್ವಜನಿಕ ಚರಂಡಿಗಳನ್ನು ಶುಚಿಗೊಳಿಸಲಾಗುತ್ತಿದೆ ಎಂದು ಶಾದೀಪೂರ ಗ್ರಾಪಂ ಅಧ್ಯಕ್ಷೆ ಭಾರತಿ ರಾಜಕುಮಾರ ರಾಠೋಡ ತಿಳಿಸಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾದೀಪೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಳೆಗಾಲದಲ್ಲಿ ವ್ಯಾಪಕ ಮಳೆ ಆಗುತ್ತಿರುವ ಕಾರಣ ಮಲೇರಿಯಾ, ಡೆಂಘೀ, ಚಿಕೂನ್‌ ಗೂನ್ಯಾ, ರೋಗಗಳು ತಡೆಗಟ್ಟುವುದಕ್ಕಾಗಿ ಚಾಪಲಾ ನಾಯಕ, ಶಾದೀಪೂರ, ಜವಾಹರ ನಗರ ತಾಂಡಾ, ಭಿಕ್ಕುನಾಯಕ, ಸೇವುನಾಯಕ, ಚಂದುನಾಯಕ, ಚಿಂದಾನೂರ, ಜಿಲವರ್ಷ ತಾಂಡಾ, ಜಿಲವರ್ಷ, ಚಿಕ್ಕನಿಂಗದಳ್ಳಿ ಗ್ರಾಮಗಳಲ್ಲಿ ಸಾರ್ವಜನಿಕ ಚರಂಡಿಗಳಲ್ಲಿ ಇರುವ ಕಸಕಡ್ಡಿಗಳನ್ನು ತೆಗೆದು ಹಾಕಲಾಗುತ್ತಿದೆ ಮತ್ತು ಹೊಲಸು ನೀರು ನಿಲ್ಲದಂತೆ ಅಗತ್ಯಕ್ರಮಗಳನ್ನು ಕೈಕೊಳ್ಳಲಾಗಿದೆ. ಶಾದೀಪೂರ ಗ್ರಾಮದಲ್ಲಿ ಸ್ಚಚ್ಚತೆ ಕ್ರಮಗಳನ್ನುಕೈಕೊಳ್ಳಲಾಗಿದೆ ಬ್ಲಿಚಿಂಗ ಪೌಡರ, ಫಾಗಿಂಗ್ ಸಿಂಪರಣೆ ಮಾಡಲಾಗಿದೆ. ಹಳ್ಳಿಗಳಲ್ಲಿ ಜನರು ಒಳ್ಳೆಯ ವಾತಾವರಣದಲ್ಲಿ ಜೀವನ ಸಾಗಿಸಬೇಕೆಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಶಾದೀಪೂರ ಗ್ರಾಪಂಕ್ಕೆ ಸರಕಾರದಿಂದ ಬರುವ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷೆ ಭಾರತಿ ರಾಜೂ ರಾಠೋಡ ತಿಳಿಸಿದ್ದಾರೆ.