ಸಾರಾಂಶ
ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ವಿವೇಕಾನಂದ ಗಿರಿಜನ ಪ್ರೌಢ ಶಾಲೆಯ ಹಿಂದಿ ಸಹ ಶಿಕ್ಷಕ ಅರುಣ್ ಕುಮಾರ ಆದಿವಾಸಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘವು ಖಂಡಿಸಿದೆ.
ಚಾಮರಾಜನಗರ : ಬಿಳಿಗಿರಿ ರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ವಿವೇಕಾನಂದ ಗಿರಿಜನ ಪ್ರೌಢ ಶಾಲೆಯ ಹಿಂದಿ ಸಹ ಶಿಕ್ಷಕ ಅರುಣ್ ಕುಮಾರ ಆದಿವಾಸಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘವು ಖಂಡಿಸಿದೆ.
ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ವತಿಯಿಂದ ಯಳಂದೂರು ತಾಲೂಕಿನ ಬಿಳಿಗಿರಿ ರಂಗನಬೆಟ್ಟದ ಯರಕನಗದ್ದೆ ಕಾಲೋನಿಯ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮುಖಂಡರು ಮಾತನಾಡಿ, ಅರುಣ್ ಕುಮಾರ ಇದೆ ರೀತಿ ಹಿಂದೆಯು ಸಹ ಮಾಡಿದ್ದು ಅದನ್ನು ಸಂಸ್ದೆಯಲ್ಲಿ ಸರಿಪಡಿಸಿಕೊಂಡಿರುತ್ತಾರೆ. ಈ ಶಾಲೆಯಲ್ಲಿ ಸೋಲಿಗರು ಮತ್ತು ಇತರೆ ಆದಿವಾಸಿ ಸಮುದಾಯಗಳಿಗೆ ಸೇರಿದ ಹೆಣ್ಣು ಮತ್ತು ಗಂಡುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳಿಗೆ ವಿದ್ಯೆ ಕಲಿಸುವ ಶಿಕ್ಷಕರು ಬಾಲಕನನ್ನು ಬಳಸಿಕೊಳ್ಳುವುದು ತಪ್ಪು. ಹಾಗಾಗಿ ಸಂಸ್ಧೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿ ಈ ಶಿಕ್ಷಕರನ್ನು ಸಂರ್ಪೂಣವಾಗಿ ಕೆಲಸದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಅವರನ್ನು ಕೆಲಸದಿಂದ ತೆಗೆದು ಹಾಕದಿದ್ದರೆ ಸಂಸ್ಥೆಯ ಎದುರು ಆದಿವಾಸಿ ಜನರೆಲ್ಲಾ ಸೇರಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತೀರ್ಮಾನಿಸಲಾಯಿತು. ಆದಿವಾಸಿ ಮಕ್ಕಳ ರಕ್ಷಣೆಯ ನೀಡುವ ಬಗ್ಗೆ ಸಂಸ್ಥೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯ ಸೋಲಿಗ ಅಭಿವೃದ್ದಿ ಸಂಘ ಅಧ್ಯಕ್ಷ ಎಂ.ಜಡೇಸ್ವಾಮಿ, ಜಿಲ್ಲಾ ಸಂಘದ ಅಧ್ಯಕ್ಷ ಯು.ರಂಗೇಗೌಡ, ಮುಖಂಡರಾದ ಮಹದೇವಯ್ಯ, ಕಾರನ ಕೇತೇಗೌಡ, ಜಿಪಂ ಮಾಜಿ ಉಪಾಧ್ಯಕ್ಷೆ ಕೇತಮ್ಮ ,ಸಣ್ಣ ತಾಯಮ್ಮ, ಕೇತಮ್ಮ, ಪುಟ್ಟಮ್ಮ, ಸಿ, ಮಹದೇವ, ಶಿವಣ್ಣ, ರಾಜಪ್ಪ, ಕಮಲ, ಮಾದೇಶ್, ಸಣ್ಣ ರಂಗೇಗೌಡ ಬಸವರಾಜು, ಮಹದೇವಮ್ಮ, ಮಹದೇವಸ್ವಾಮಿ, ರುದ್ರೇಗೌಡ ನಾಗರಾಜು, ಸಿದ್ದೇಗೌಡ ಮತ್ತು ತಾಲ್ಲೊಕು ಸಂಘಗಳ ಅಧ್ಯಕ್ಷರಾದ ಎಂ, ರಂಗೇಗೌಡ, ದಾಸೇಗೌಡ, ನಂಜೇಗೌಡ, ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
)
;Resize=(128,128))
;Resize=(128,128))
;Resize=(128,128))
;Resize=(128,128))