ಸಾರಾಂಶ
ತಿಪಟೂರು ಸರ್ಕಾರಿ ಕಾಲೇಜಿನಲ್ಲಿ ಶೇಕ್ಸ್‌ಪಿಯರ್ ನಾಟಕಗಳ ಕುರಿತ ಉಪನ್ಯಾಸ
ಕನ್ನಡಪ್ರಭ ವಾರ್ತೆ ತಿಪಟೂರು
ಶೇಕ್ಸ್‌ಪಿಯರ್ ನಾಟಕಗಳು ಮಾನವೀಯ ನೆಲೆಯ ಸ್ಪರ್ಶದಿಂದ ಜಗತ್ತಿನ ಗಮನಸೆಳೆದು ಇಂದಿಗೂ ನಮಗೆ ಪ್ರಸ್ತುತವಾಗಿವೆ ಎಂದು ಪ್ರಾಧ್ಯಾಪಕ ಪ್ರೊ. ಲೋಕೇಶ್ವರಯ್ಯ ತಿಳಿಸಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ಆಯೋಜಿಸಿದ್ದ ವಿಲಿಯಂ ಶೇಕ್ಸ್‌ಫಿಯರ್‌ನ ಜೂಲಿಯಸ್ ಸೀಸರ್ ನಾಟಕ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೂಲಿಯಸ್ ನಾಟಕವು ಒಂದು ರಾಜಕೀಯ ನಾಟಕವಾಗಿದೆ. ಇಲ್ಲಿ ಒಂದು ತಾವು ನಂಬಿದ್ದ ಸಿದ್ಧಾಂತಕ್ಕಾಗಿ ಹೋರಾಟ ಮಾಡಿದ ಮೋಹನ್ ನಾಯಕರ ನಡುವಿನ ಹೋರಾಟವಾಗಿದೆ. ಶೇಕ್ಸ್‌ಫಿಯರ್‌ನ ಸ್ತ್ರೀ ಪಾತ್ರಗಳು ಕೂಡ ಭಾರತೀಯ ನಾರಿಯರನ್ನ ಹೋಲುತ್ತಿದ್ದು ಸ್ಮರಣಿಯವಾಗಿದೆ ಎಂದರು.
ಐಕ್ಯೂಎಸಿ ಸಂಯೋಜಕ ಡಾ. ವೆಂಕಟಾಚಲಯ್ಯ ಅವರು ವಿದ್ಯಾರ್ಥಿಗಳಿಗೆ ಶೇಕ್ಸ್‌ಫಿಯರ್‌ನ ಕವಿತೆ ಮತ್ತು ನಾಟಕಗಳ ಬಗ್ಗೆ ತಿಳಿಸಿಕೊಟ್ಟರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಎಚ್.ಬಿ. ಕುಮಾರಸ್ವಾಮಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಜಿ. ಜ್ಯೋತಿ, ಡಾ.ಕೆ.ಬಿ. ಸರಸ್ವತಿ, ಪ್ರೊ. ಸುಭದ್ರಮ್ಮ, ಪ್ರೊ. ಜಯಸಿಂಹ ಮತ್ತಿತರರಿದ್ದರು. ನಂತರ ಜ್ಯೂಲಿಯಸ್ ಸೀಸರ್ ಚಿತ್ರವನ್ನು ಪ್ರದರ್ಶಿಸಲಾಯಿತು.