ಶನಿವಾರಸಂತೆ: ಹುಟ್ಟಿದ ಮನೆಯಲ್ಲಿ ಫೀ.ಮಾ.ಕಾರ್ಯಪ್ಪ ಜನ್ಮದಿನಾಚರಣೆ

| Published : Jan 29 2024, 01:35 AM IST

ಶನಿವಾರಸಂತೆ: ಹುಟ್ಟಿದ ಮನೆಯಲ್ಲಿ ಫೀ.ಮಾ.ಕಾರ್ಯಪ್ಪ ಜನ್ಮದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಪ್ರಥಮ ಮಹಾದಂಡ ನಾಯಕ ಫಿ.ಮಾ.ಕೆ.ಎಂ.ಕಾರ್ಯಪ್ಪ ಅವರ ಶನಿವಾರಸಂತೆ ಹುಟ್ಟಿದ ಮನೆಯಲ್ಲಿ ಅಭಿಮಾನಿಗಳು ಜನ್ಮದಿನವನ್ನು ಆಚರಿಸಿದರು. ಈ ವೇಳೆ ಈ ಮನೆಯನ್ನು ಸ್ಮಾರಕ ಹಾಗೂ ಪುತ್ಥಳಿ ಸ್ಥಾಪಿಸುವ ಬಗ್ಗೆ ನಿರ್ಧರಿಸಲಾಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಭಾರತದ ಪ್ರಥಮ ಮಹಾದಂಡ ನಾಯಕ ಫಿ.ಮಾ. ಕೆ.ಎಂ.ಕಾರ್ಯಪ್ಪ ಅವರು ಶನಿವಾರಸಂತೆಯಲ್ಲಿ ಜನಿಸಿದ್ದು, ಇಂತಹ ಮಹಾನ್ ಸೇನಾನಿ ನಮ್ಮೂರಿನಲ್ಲಿರುವುದು ಜನಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ.ಜಯಕುಮಾರ್ ಅಭಿಪ್ರಾಯಪಟ್ಟರು.ಭಾರತದ ಪ್ರಥಮ ಮಹಾದಂಡ ನಾಯಕ ಫಿ.ಮಾ.ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನದ ಅಂಗವಾಗಿ ಭಾನುವಾರ ಕಾರ್ಯಪ್ಪ ಅವರು ಶನಿವಾರಸಂತೆಯಲ್ಲಿ ಜನಿಸಿದ ಮನೆ (ಈಗ ಸಾರ್ವಜನಿಕ ಗ್ರಂಥಾಲಯ)ಯಲ್ಲಿ ಕಾರ್ಯಪ್ಪ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರ ವತಿಯಿಂದ ಸರಳವಾಗಿ ನಡೆದ ಕಾರ್ಯಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫಿ.ಮಾ.ಜನರಲ್ ಕಾರ್ಯಪ್ಪ ಅವರು ದೇಶ ಮತ್ತು ವಿದೇಶ ಕಂಡ ಮಹಾನ್ ಸೇನಾನಿಯಾಗಿದ್ದು, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರವು ಅವರು ಭಾರತದ ಮಹಾನ್ ಸೇನಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹುಟ್ಟಿದ ಈ ಮನೆಯನ್ನು ಸ್ಮಾರಕವನ್ನಾಗಿ ಮಾಡುವುದು ಮತ್ತು ಅವರ ಪ್ರತಿಮೆ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಈ ಮನೆಯನ್ನು ಸ್ಮಾರಕವನ್ನಾಗಿ ಮಾಡಲು ಹಾಗೂ ಅವರ ಪುತ್ಥಳಿ ನಿರ್ಮಾಣ ಮಾಡಲು ಸರ್ಕಾರ ಮತ್ತು ಜನ ಪ್ರತಿನಿಧಿಗಳ ಗಮನಕ್ಕೆ ತರಬೇಕಾಗಿದೆ ಎಂದು ಸಲಹೆ ನೀಡಿದರು.ಫಿ.ಮಾ.ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅವರ ಅಭಿಮಾನಿಗಳು ಗ್ರಂಥಾಲಯ ಮುಂಭಾಗದ ಧ್ವಜಸ್ತಂಭದಲ್ಲಿ ಕಾರ್ಯಪ್ಪ ಅವರ ಭಾವಚಿತ್ರವನ್ನು ಪೂಜಿಸಿ ಪಷ್ಪ ನಮನ ಸಲ್ಲಿಸಿದರು. ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಗೀತ ಹರೀಶ್, ಸದಸ್ಯ ಎಸ್.ಸಿ.ಶರತ್‍ಶೇಖರ್, ಪ್ರಮುಖರಾದ ಮಹಮ್ಮದ್ ಪಾಷ, ನಿವೃತ್ತ ಸೈನಿಕರಾದ ಬೆಳ್ಳಿಯಪ್ಪ, ನಾಗರಾಜ್ ಕಾರ್ಯಕ್ರಮದ ಆಯೋಜಕರಾದ ಬಿಲಾಲ್, ಮೋಹನ್‍ಲಾಲ್ ಚೌಧರಿ ಕುಬೇರ್ ಪುರೋಹಿತ್ ಮುಂತಾದವರಿದ್ದರು.