ಶಂಕರಾಚಾರ್ಯರರ ಧರ್ಮ ನಿಷ್ಠೆ, ಶ್ರದ್ಧೆ ಅನನ್ಯ: ಉಮೇಶಭಟ್ಟ

| Published : May 13 2024, 12:07 AM IST

ಶಂಕರಾಚಾರ್ಯರರ ಧರ್ಮ ನಿಷ್ಠೆ, ಶ್ರದ್ಧೆ ಅನನ್ಯ: ಉಮೇಶಭಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

Adi Shankaracharya, Shankaracharya Jayanti, Jewargi, Jewargi news, umesh bhatta, ಜೇವರ್ಗಿ, ಉಮೇಶಭಟ್ಟ, ಆದಿಶಂಕರಾಚಾರ್ಯರ ಜಯಂತಿ

ಕನ್ನಡಪ್ರಭ ವಾರ್ತೆ ಜೇವರ್ಗಿ

ಅಳಿವಿನ ಅಂಚಿನಲ್ಲಿದ್ದ ಸನಾತನ ಹಿಂದೂ ಧರ್ಮ ಪತಾಕೆಯನ್ನು ಎತ್ತಿ ಹಿಡಿದು ಹಲವಾರು ದೇಗುಲಗಳನ್ನು ನಿರ್ಮಿಸಿ ಧರ್ಮರಕ್ಷಣೆ ಮಾಡಿದ ಅವತಾರ ಪುರುಷ ಜಗದ್ಗುರು ಆದಿ ಶಂಕರಾಚಾರ್ಯರರ ಧರ್ಮ ನಿಷ್ಠೆ, ಶ್ರದ್ಧೆ ಅನನ್ಯವಾದುದು ಎಂದು ಉಮೇಶಭಟ್ಟ ಜೋಶಿ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ 1236 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮ ರಕ್ಷಣೆಗೆ ಜಗದ್ಗುರು ಆದಿಶಂಕರಾಚಾರ್ಯರ ಕೊಡುಗೆ ಅಪಾರವಾಗಿದ್ದು, ಆ ನಿಟ್ಟಿನಲ್ಲಿ ಸಮಾಜದಲ್ಲಿನ ಪ್ರತಿಯೊಬ್ಬರು ಅವರ ತತ್ವಾದರ್ಶಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಕೇರಳದ ಕಾಲಡಿ ಗ್ರಾಮದಲ್ಲಿ ಜನಿಸಿದ ಶಂಕರರು. ಇಡೀ ಜಗತ್ತಿಗೆ ಕೊಡುಗೆ ನೀಡಿದ್ದು ಅಪರಿಮಿತವಾಗಿದೆ ಎಂದು ಹೇಳಿದರು.

ಆದಿ ಶಂಕರಾಚಾರ್ಯರ ವಿಚಾರಗಳು, ಸ್ಥಾಪಿಸಿದ ಪೀಠಗಳು ಇಂದಿಗೂ ಜೀವಂತವಾಗಿದ್ದು ಮೇರು ಮಟ್ಟದಲ್ಲಿವೆ. ಹಿಂದೂ ಧರ್ಮವನ್ನು ಪ್ರಚಾರ ಮಾಡಲು ದೇಶದ ನಾಲ್ಕೂ ದಿಕ್ಕೂಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಪೂರ್ವದಲ್ಲಿ ಗೋವರ್ಧನ ಮಠ, ಪಶ್ಚಿಮದಲ್ಲಿ ದ್ವಾರಕಾ ಪೀಠ, ಉತ್ತರದಲ್ಲಿ ಜ್ಯೋತೀರ್ ಮಠ(ಜ್ಯೋಶಿಮಠ) ಮತ್ತು ದಕ್ಷಿಣದಲ್ಲಿ ಕರ್ನಾಟಕದ ಶೃಂಗೇರಿ ಶಾರದಾ ಪೀಠಗಳನ್ನು ಸ್ಥಾಪಿಸುವ ಮೂಲಕ ಆದಿ ಶಂಕರಾಚಾರ್ಯರ ಕೊಡುಗೆಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಮಲ್ಲಣ್ಣ ಯಲಗೋಡ, ವಿಪ್ರ ಸಮಾಜದ ಅಧ್ಯಕ್ಷ ರಮೇಶಬಾಬು ವಕೀಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹಳ್ಳೇಪಾಚಾರ್ಯ ಜೋಶಿ, ದತ್ತಾತ್ರೇಯರಾವ ಕುಲಕರ್ಣಿ, ಶಾಮರಾವ್ ರೇವನೂರ, ಚನ್ನಮಲ್ಲಯ್ಯ ಹಿರೇಮಠ, ಚಂದ್ರಶೇಖರ ಸೀರಿ, ಹಣಮಂತರಾವ್ ಕುಲಕರ್ಣಿ, ಸುಬ್ಬಾರಾವ್ ಸುಬೇದಾರ, ವಿನೋದ ಕುಲಕರ್ಣಿ, ಕಿಶನರಾವ ಹೇಮನೂರ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ದತ್ತಾತ್ರೇಯರಾವ ರೇವನೂರ, ಸುದರ್ಶನ ಆಲಬಾಳ, ಸುದೀಂದ್ರ ವಕೀಲ, ರಾಘವೇಂದ್ರ ಜವಳಗಿ, ವೆಂಕಟೇಶ ಪೆಶ್ವೆ, ಪಾಡುರಂಗ ಅವರಾದ, ಶ್ರೀನಿವಾಸ ಮಳ್ಳಿ, ನಟರಾಜ ಚನ್ನೂರ, ಗುರುರಾಜ ಪೋದ್ದಾರ, ವಿಜಯಕುಮಾರ ಪೋದ್ದಾರ, ಭೀಮಸೇನ ಕಾಳಗಿ, ಪ್ರಕಾಶ ಆಲಬಾಳ, ರವೀಂದ್ರ ವಕೀಲ್, ಪುನೀತ ಕುಲಕರ್ಣಿ, ಅನಂತ ಹರವಾಳ, ಎನ್.ಆರ್.ಕುಲಕರ್ಣಿ, ಶಶಿಕಾಂತ ಕುಲಕರ್ಣಿ, ರಾಜು ರದ್ದೇವಾಡಗಿ, ಕೃಷ್ಣ ಕುರುಡೇಕರ್, ನಾರಾಯಣ ನಿಲೂರ, ಗ್ರೇಡ್ -೨ ತಹಸೀಲ್ದಾರ್‌ ಪ್ರಸನ್ನಕುಮಾರ ಮೋಘೆಕರ್, ಶ್ರೀನಿವಾಸ ಕುಲಕರ್ಣಿ, ಪ್ರಶಾಂತ ಆಲಮೇಕರ್, ಸಾಯಬಣ್ಣ ಕಲ್ಯಾಣಕರ್ ಸೇರಿದಂತೆ ವಿಪ್ರ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.