ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿ

| Published : Apr 11 2024, 12:52 AM IST

ಸಾರಾಂಶ

ತುರ್ವಿಹಾಳ ಪಟ್ಟಣದಲ್ಲಿ ಶ್ರೀ ಶಂಕರಲಿಂಗೇಶ್ವರ ತಾತನವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಮತ್ತು ರಥೋತ್ಸವವೂ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ತುರ್ವಿಹಾಳ

ಪಟ್ಟಣದ ಲಕ್ಷಾಂತರ ಭಕ್ತರ ಹೊಂದಿದ ಆರಾಧ್ಯದೈವ ಹಾಗೂ ಪುರಾತನ ಮಠದಲ್ಲೊಂದಾದ ಶ್ರೀ ಶಂಕರಲಿಂಗೇಶ್ವರ ತಾತನವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಮತ್ತು ರಥೋತ್ಸವವೂ ವಿಜೃಂಭಣೆಯಿಂದ ನಡೆಯಿತು.

ಯುಗಾದಿ ಹಬ್ಬದ ಬಲಿಪಾಡ್ಯಮಿಯ ಮರುದಿನ ಬೆಳಗ್ಗೆ ಮಹಾರುದ್ರಾಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿಸಿ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ದೂರಿಯಾಗಿ ಶ್ರೀ ಶಂಕರಲಿಂಗೇಶ್ವರ ತಾತನವರ ಮಠದಿಂದ ಬಸವಣ್ಣನ ಕಟ್ಟೆವರೆಗೆ ರಥವು ಬೀದಿಯಲ್ಲಿ ಸಾಗುವಲ್ಲಿ ಅಪಾರ ಭಕ್ತ ಸಮೂಹವೂ ಉತ್ತತ್ತಿ, ಬಾಳೆಹಣ್ಣು, ಕಲ್ಲು ಸಕ್ಕರೆ ಎಸೆದು ಭಕ್ತಿ ಮೆರೆದರು.

ಕೊಂಡೋತ್ಸವ:ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಮುಂದೆ ಬುಧವಾರ ಸಂಜೆ ಉಪ್ಪಾರ ಸಮಾಜದವರು ಸಂಭ್ರಮದಿಂದ ಕೊಂಡೋತ್ಸವ ಆಚರಿಸಿದರು. ನಾಯಕ ಜನಾಂಗದವರು ಬೇಟೆಯಾಡಿ ತಂದ ಬೇಟೆಯನ್ನು ಕೊಂಡೋತ್ಸವದಲ್ಲಿ ಪ್ರದರ್ಶನ ಮಾಡುವುದು. ಕುಂಬಾರ ಮನೆಯಿಂದ ಐರಾಣಿ ತರುವುದು, ಕಬ್ಬೇರರು ಊರ ಸುತ್ತ ಹಾಲು ಎರೆಯುವ ವಾಡಿಕೆ. ಊರಿಗೆ ಒಳಿತಾಗಲಿ ಎನ್ನುವುದೇ ಗ್ರಾಮಸ್ಥರ ಅಪಾರ ನಂಬಿಕೆಯಾಗಿದೆ. ಇದು ಈ ಭಾಗದಲ್ಲಿನ ವಿಶೇಷ ಆಚರಣೆಯಾಗಿದೆ.

ಶ್ರೀ ಶಂಕರಲಿಂಗೇಶ್ವರ ತಾತನವರ ಜಾತ್ರಾ ಮಹೋತ್ಸವದ ಅಂಗವಾಗಿ ಸತತ 10ನೇ ವರ್ಷದ ಭಜರಂಗದಳ ಇವರ ನೇತೃತ್ವದಲ್ಲಿ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಊರಿನ ಹಿರಿಯರು, ಹಾಗೂ ಸಾವಿರಾರು ಭಕ್ತಾದಿಗಳು ಭಾಗಿಯಾಗಿದ್ದರು.