ಸಾರಾಂಶ
ನರಗುಂದ: ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಗುರುಬಸವ ಶ್ರೀಗಳು ಲಿಂಗೈಕ್ಯರಾದ ಪ್ರಯುಕ್ತ ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳ ಆಶಯದಂತೆ ಹಾಗೂ ಶಿರೋಳ ಗ್ರಾಮದ ಭಕ್ತರ ಇಚ್ಛೆಯಂತೆ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳಿಗೆ ಜವಾಬ್ದಾರಿ ವಹಿಸಿಕೊಡಲಾಗಿದೆ.
ಜ. 19ರಂದು ಶಿರೋಳ ಗ್ರಾಮದ ಭಕ್ತರು ಪುರಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಗುರುವಾರ ಶಿರೋಳ ಗ್ರಾಮದ ಭಕ್ತ ಸಮೂಹ ಭೈರನಹಟ್ಟಿ ಗ್ರಾಮಕ್ಕೆ ಆಗಮಿಸಿ ಶಾಂತಲಿಂಗ ಶ್ರೀಗಳ ಮತ್ತು ಭೈರನಹಟ್ಟಿ ಗ್ರಾಮದ ಗುರು ಹಿರಿಯರ ಅಪ್ಪಣೆ ಪಡೆದುಕೊಂಡು ಶ್ರೀಗಳನ್ನು ತೋಂಟದಾರ್ಯ ಮಠದ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.ಗದಗಿನ ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು, ಡಂಬಳ-ಗದಗ ತೋಂಟದಾರ್ಯಮಠದ ಎಡೆಯೂರು ಜಗದ್ಗುರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ ಉಪಸ್ಥಿತರಿದ್ದರು. ಜ. 19ರಂದು ಗ್ರಾಮದಲ್ಲಿ ಮೆರವಣಿಗೆಯೊಂದಿಗೆ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳ ಪುರಪ್ರವೇಶ ಹಾಗೂ ಶಿರೋಳ ಶ್ರೀ ತೋಂಟದಾರ್ಯಮಠದ ಉತ್ತರಾಧಿಕಾರತ್ವ ಕಾರ್ಯಕ್ರಮ ನಡೆಯುವುದು. ಆನಂತರ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.ಗದಗ ತೋಂಟದಾರ್ಯಮಠದ ಭಕ್ತರು, ಚನ್ನಪ್ಪ ಕಂಠಿ, ವಿ.ಎನ್. ಕೊಳ್ಳಿವರ, ಬಾಬುಗೌಡ್ರ ತಿಮ್ಮನಗೌಡ್ರ, ಬಿ.ಬಿ. ಐನಾಪುರ, ಚಂದ್ರಶೇಖರ ದಂಡಿನ, ಧರ್ಮರಾಜಪ್ಪ ತೆಗ್ಗಿನಮನಿ, ವಿರೂಪಾಕ್ಷಪ್ಪ ನರಸಾಪುರ, ಲಕ್ಷ್ಮಣ ಐನಾಪುರ, ಅರ್ಜುನ ಬಾದಮಿ, ನಿವೃತ್ತ ಶಿಕ್ಷಕ ಎಸ್.ಬಿ. ದಂಡಿನ, ವಿ.ಕೆ. ಮರಿಗುದ್ದಿ, ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ಶೇಖರಯ್ಯ ನಾಗಲೋಟಿಮಠ, ಲಾಲಸಾಬ್ ಅರಗಂಜಿ, ದ್ಯಾಮಣ್ಣ ಕಾಡಪ್ಪನವರ, ದೇವೇಂದ್ರಪ್ಪ ಶಾಂತಗೇರಿ, ಮಾಂತಪ್ಪ ಶೆಟ್ಟರ, ಮಹಾಬಳೇಶ್ವರ ಕೋಡಬಳಿ, ಗುರುಬಸವ ಶೆಲ್ಲಿಕೇರಿ, ಹನುಮಂತ ಕಾಡಪ್ಪನವರ, ಶಿವಶರಣಗೌಡ ತಿರಕನಗೌಡ್ರ, ಲಾಲಸಾಬ ಅರಗಂಜಿ, ಶರಣಪ್ಪ ಕಾಡಪ್ಪನವರ, ವೀರಯ್ಯ ದೊಡಮನಿ, ಉಮೇಶ ಮರಿಗುದ್ದಿ, ಬಸವರಾಜ ಗಡ್ಡಿ, ಶರಣಯ್ಯ ನಾಗಲೋಟಿಮಠ, ಸಂಗಣ್ಣ ಕಿತ್ತಲಿ, ತಿಪ್ಪಣ್ಣ ಕೊಣ್ಣೂರ, ಮಲ್ಲನಗೌಡ ತಿರಕನಗೌಡ್ರ, ಚಂದ್ರಶೇಖರ ಸೊಬರದ, ಹುಸೇನಸಾಬ್ ನದಾಫ್, ವೀರಯ್ಯ ಮಠದ, ಪ್ರವೀಣ ಶೆಲ್ಲಿಕೇರಿ, ಬಸಣ್ಣ ಕುಪ್ಪಸ್ತ, ಬಸವರಾಜ ಕೋಡಬಳಿ, ಯಂಕಪ್ಪ ಶಾಂತಗೇರಿ, ಲೋಕಪ್ಪ ಕರಕೀಕಟ್ಟಿ, ರಮಜಾನಸಾಬ್ ನದಾಫ್, ಗೂಡುಸಾಬ್ ಯಲಿಗಾರ, ಸುಭಾಸ ಚಿಕ್ಕನರಗುಂದ, ದ್ಯಾಮಣ್ಣ ತೆಗ್ಗಿ, ತಿಪ್ಪಣ್ಣ ಕೊಣ್ಣೂರ, ಮುದಿವೀರಪ್ಪ ಕರಕಿಕಟ್ಟಿ, ದ್ಯಾಮಣ್ಣ ಶಾಂತಗೇರಿ, ಶಿರೋಳ-ಭೈರನಹಟ್ಟಿ, ಹದಲಿ, ಖಾನಾಪುರ, ಗಂಗಾಪುರ, ರಡ್ಡೇರನಾಗನೂರ, ಬೋಪಳಾಪುರ, ಮೆಣಸಗಿ, ಕರ್ಕಿಕಟ್ಟಿ, ಗುಳಗಂದಿ, ಕಪ್ಪಲಿ, ಕಲ್ಲಾಪುರ, ಕೊಣ್ಣೂರ, ಕಿತ್ತಲಿ, ಸುಳ್ಳ ಗಾಮಗಳ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.