ಸಾರಾಂಶ
ತುಳು ಭಾಷೆಯಲ್ಲಿ ಉತ್ತಮ ಗುಣಮಟ್ಟದ ಕಾದಂಬರಿಗಳು ರಚನೆ, ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ಮತ್ತು ತುಳು ಚಳುವಳಿಗೆ ಚಾಲನೆ ನೀಡಿದ ತುಳುವಿನ ಮೊದಲ ಕಾದಂಬರಿಕಾರ ಎಸ್.ಯು. ಪಣಿಯಾಡಿ ಅವರ ಸಾಧನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸದುದ್ದೇಶದಿಂದ ಕಳೆದ 30 ವರ್ಷಗಳಿಂದ ತುಳುಕೂಟ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ತುಳುಕೂಟ ಉಡುಪಿ ಇದರ ದಿ. ಎಸ್.ಯು. ಪಣಿಯಾಡಿ ಸ್ಮರಣಾರ್ಥ ತುಳು ಕಾದಂಬರಿ ವಾರ್ಷಿಕ ಪ್ರಶಸ್ತಿಗೆ ಈ ವರ್ಷದಲ್ಲಿ ಮುಂಬೈಯ ಶಾರದಾ ವಿ. ಅಂಚನ್ ಕೊಡವೂರು ಅವರ ‘ಅಕೇರಿದ ಎಕ್ಕ್’ ಕಾದಂಬರಿ ಆಯ್ಕೆಯಾಗಿದೆ.ತುಳು ಭಾಷೆಯಲ್ಲಿ ಉತ್ತಮ ಗುಣಮಟ್ಟದ ಕಾದಂಬರಿಗಳು ರಚನೆ, ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ಮತ್ತು ತುಳು ಚಳುವಳಿಗೆ ಚಾಲನೆ ನೀಡಿದ ತುಳುವಿನ ಮೊದಲ ಕಾದಂಬರಿಕಾರ ಎಸ್.ಯು. ಪಣಿಯಾಡಿ ಅವರ ಸಾಧನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸದುದ್ದೇಶದಿಂದ ಕಳೆದ 30 ವರ್ಷಗಳಿಂದ ತುಳುಕೂಟ ಈ ಪ್ರಶಸ್ತಿಯನ್ನು ನೀಡುತ್ತಿದೆ.ಈ ಸಲ ತೀರ್ಪುಗಾರರಾಗಿ ನಿತ್ಯಾನಂದ ಪಡ್ರೆ, ಸುಲೋಚನಾ ಪಚ್ಚಿನಡ್ಕ ಹಾಗು ಪುತ್ತಿಗೆ ಪದ್ಮನಾಭ ರೈ ಸಹಕರಿಸಿದರು.ಪ್ರಶಸ್ತಿಗೆ ಆಯ್ಕೆಯಾಗಿರುವ ಬರಹಗಾರ್ತಿ ಶಾರದಾ ಮೂಲತಃ ಉಡುಪಿ ಜಿಲ್ಲೆಯ ಕೊಡವೂರಿನವರು. ಸಾಹಿತ್ಯ ವಲಯದಲ್ಲಿ ಚಿರಪರಿಚಿತರು. ಬಿಎಸ್ಸಿ ಹಾಗೂ ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ವ್ಯಾಸಂಗ ಮಾಡಿದ ಅವರು ನವೀ ಮುಂಬಯಿಯ ಎಂ.ಜಿ.ಎಂ. ಮೆಡಿಕಲ್ ಕಾಲೇಜಿನಲ್ಲಿ ರಕ್ತನಿಧಿ ತಂತ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತುಳು ಹಾಗೂ ಕನ್ನಡದಲ್ಲಿ 18 ಕೃತಿಗಳು ಈಗಾಗಲೇ ಪ್ರಕಟಗೊಂಡು ಹಲವು ಪ್ರತಿಷ್ಠಿತ ಪುರಸ್ಕಾರಗಳು ಇವರ ಮಡಿಲು ಸೇರಿವೆ.ಪಣಿಯಾಡಿ ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್‌ನಲ್ಲಿ ನಡೆಯಲಿದೆ ಎಂದು ಪಣಿಯಾಡಿ ಪ್ರಶಸ್ತಿಯ ಸಂಚಾಲಕಿ ಶಿಲ್ಪಾ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.