ಸಾರಾಂಶ
ಕಾಯಕ ತತ್ವದ ಮೂಲಕ ಬಸವಣ್ಣನವರ ಮನಸ್ಸು ಗೆದ್ದ ಹೂಗಾರ ಮಾದಯ್ಯ ಅವರ ಆದರ್ಶಗಳನ್ನು ಯುವಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಹೂಗಾರ ಸಮಾಜದ ತಾಲೂಕಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.
ಗಜೇಂದ್ರಗಡ: ಕಾಯಕ ತತ್ವದ ಮೂಲಕ ಬಸವಣ್ಣನವರ ಮನಸ್ಸು ಗೆದ್ದ ಹೂಗಾರ ಮಾದಯ್ಯ ಅವರ ಆದರ್ಶಗಳನ್ನು ಯುವಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಹೂಗಾರ ಸಮಾಜದ ತಾಲೂಕಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.
ಸಮೀಪದ ಕೊಡಗಾನೂರ ಗ್ರಾಮದಲ್ಲಿ ತಾಲೂಕು ಹೂಗಾರ ಸಮಾಜ ವತಿಯಿಂದ ನಡೆದ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆಯಲ್ಲಿ ಮಾದಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.೧೨ನೇ ಶತಮಾನದ ಬಸವಾದಿ ಶರಣರಲ್ಲಿ ಹೂವಿನ ಕಾಯಕ ಮಾಡಿಕೊಂಡಿದ್ದ ಹೂಗಾರ ಮಾದಯ್ಯನವರು ಅನುಭವ ಮಂಟಪದಲ್ಲಿ ಬಹಳ ಪ್ರಮುಖ ಪಾತ್ರವಹಿಸಿ ಅನುಭಾವದ ವಚನಗಳನ್ನು ರಚಿಸಿದರು. ಬಸವಾದಿ ಶರಣರ ಮನೆಗಳಿಗೆ ಹೂವು, ಪತ್ರೆಗಳನ್ನು ತಲುಪಿಸುವ ಕಾಯಕ ಮಾಡಿಕೊಂಡಿದ್ದ ಮಾದಯ್ಯನವರೆ ಹೂವಿನ ವೃತ್ತಿಯ ಜನರಿಗೆ ಇಂದಿನ ಲಿಂಗಾಯತ ಹೂಗಾರ ಸಮಾಜಕ್ಕೆ ಮೂಲ ಪುರುಷರಾಗಿದ್ದಾರೆ ಎಂದರು.ಮುಖಂಡ ನಿಂಗಪ್ಪ ಹೂಗಾರ, ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು. ಹೂವು ಬಾಡುತ್ತದೆ, ಆದರೆ ಹೂಗಾರ ಸಮಾಜದವರ ಮನಸ್ಸು ಬಾಡದೆ, ಸಮಾಜವನ್ನು ಅರಳಿಸುವ ಕೆಲಸ ಮಾಡುತ್ತಿದೆ. ೧೨ನೇ ಶತಮಾನದಲ್ಲಿ ರಾಜನಾದ ಸಕಲೇಶ ಮಾದರಸ, ಹೂಗಾರ ಮಾದಯ್ಯನವರು, ಕಾಯಕದಲ್ಲಿ ಮುಕ್ತಿ ಮಾರ್ಗವಿದೆ ಎಂದು ಜಗತ್ತಿಗೆ ಸಾರಿದ್ದಾರೆ ಎಂದರು. ಮುಖಂಡ ರಾಮಣ್ಣ ಹೂಗಾರ ಮಾತನಾಡಿ, ಶಿವಶರಣ ಹೂಗಾರ ಮಾದಯ್ಯ ಅವರು ರಚಿಸಿದ ಕೆಲವು ವಚನಗಳ ಪೈಕಿ ಲಭ್ಯವಾಗಿರುವ ವಚನಗಳಲ್ಲಿ ಸಾಮಾಜಿಕ ಸಮಾನತೆ, ಮೂಢನಂಬಿಕೆ, ಅಂಧ ಶ್ರದ್ಧೆಯ ಬಗ್ಗೆ ಉಲ್ಲೇಖಿಸಿದ್ದಾರೆ ಎಂದರು. ನಾಗಯ್ಯ ಹಿರೇಮಠ, ಪ್ರಕಾಶ ಹೂಗಾರ, ರಾಘು ಹೂಗಾರ, ಶರಣಪ್ಪ ಹೂಗಾರ, ಕೊಟ್ರೇಶ ಹೂಗಾರ, ಭೀಮಪ್ಪ ಹೂಗಾರ, ರವಿ ಹೂಗಾರ, ಈರಪ್ಪ ಹೂಗಾರ, ಮಂಜು ಹೂಗಾರ, ಮಲ್ಲಪ್ಪ ಹೂಗಾರ, ಶಿವಾನಂದ ಹುಯಿಲಗೊಳ, ಪ್ರಭಯ್ಯ ಹಿರೇಮಠ, ರೇಣುಕಯ್ಯ ಹಿರೇಮಠ, ಪಂಚಯ್ಯ ಹಿರೇಮಠ, ಕಲ್ಲಪ್ಪ ಸೊಲಬಗೌಡ್ರ ಸೇರಿ ಇತರರು ಇದ್ದರು.