Sharanar's messages are still universa

ಕನ್ನಡಪ್ರಭ ವಾರ್ತೆ ಆನಂದಪುರ

ವಚನಗಳು ಜಾತಿ, ಮತ, ಪಂಥಗಳ ಎಲ್ಲೇ ಮೀರಿ ಮಾನವೀಯ ಮೌಲ್ಯಗಳು ಎಚ್ಚರಿಸುತ್ತವೆ ಎಂದು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿ ತಿಳಿಸಿದರು.

ಅವರು ಇಲ್ಲಿಗೆ ಸಮೀಪದ ಮುರುಘಾಮಠದಲ್ಲಿ ನಡೆದ 1171 ನೇ ಮಾಸಿಕ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿ ವೃತ್ತಿ ಮತ್ತು ಪ್ರವೃತ್ತಿಯನ್ನು ಒಂದಾಗಿಸಿಕೊಂಡು ಬದುಕಿನ ಶಿಸ್ತನ್ನು ಸಮಾಜಕ್ಕೆ ನೀಡಿದ ಶರಣರ ಸಂದೇಶಗಳು ಇಂದಿಗೂ ಸರ್ವಕಾಲಿಕವಾಗಿವೆ.

12ನೇ ಶತಮಾನದಲ್ಲಿ ಬಸವಾದಿ ಶಿವಶರಣರ ಸಂಪರ್ಕಕ್ಕೆ ಬಂದವರೆಲ್ಲರೂ ಶರಣರೇ ಆದರು. ತಳವರ್ಗದಿಂದ ಬಂದ ಕಾಯಕಜೀವಿಗಳು ಸಹ ಬಸವಣ್ಣ, ಅಲ್ಲಮ, ಅಕ್ಕ, ಚನ್ನಬಸವಣ್ಣನವರಂತೆ ಅನುಭಾವಿಗಳಾದರು. ಜಗತ್ತಿನ ಯಾವ ಧಾರ್ಮಿಕ ಪರಂಪರೆಯಲ್ಲೂ ಇಂಥ ಪರಿವರ್ತನೆ ಕಾಣಲು ಸಾಧ್ಯವಿಲ್ಲ. ಶಿವಶರಣರು ರಚಿಸಿದ ವಚನ ಸಾಹಿತ್ಯ ಮನುಷ್ಯನ ಬದುಕಿಗೆ ಪೂರಕವಾಗಿವೆ ಎಂದರು.

ಮನುಷ್ಯನ ನಿತ್ಯ ಬದುಕಿಗೆ ಹತ್ತಿರವಾದ ಸಂಗತಿಗಳು ವಚನಗಳಲ್ಲಿ ಒಂದಾಗಿದೆ. ಶರಣರ ಬದುಕು ನಡೆನುಡಿ ಒಂದಾಗಿದ್ದರಿಂದಲೇ ವಚನಗಳ ಮೂಲಕ ಒಳ್ಳೆಯದನ್ನು ಸಮಾಜಕ್ಕೆ ನೀಡಲು ಸಾಧ್ಯವಾಗಿದೆ. ಸಂಸ್ಕೃತ ಮತ್ತು ವಚನ ಸಾಹಿತ್ಯದ ನಡುವಿನ ಸಂಬಂಧವು ಭಾಷೆ ತತ್ವಜ್ಞಾನ ಮತ್ತು ಸಾಮಾಜಿಕ ಚಿಂತನೆಗೆ ಸಂಬಂಧಿಸಿದ ಆಳವಾದ ವಿಷಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ದಾಸೋಹ ಮತ್ತು ಕಾಯಕವನ್ನು ಮಾಡಬೇಕೆಂದು ತಿಳಿಸಿದರು.

ನಂತರ ಸಾಗರ ಸಂಸ್ಕೃತ ಪಾಠಶಾಲೆಯ ಗಜಾನನ ಭಟ್ ರೇವಣ್ಣ ಕಟ್ಟಾಆಚಾರ್ಯ ಉಪನ್ಯಾಸ ನೀಡಿ ಸಂಸ್ಕೃತ ಸಪ್ತಾಹ ಕನ್ನಡ ಭಾಷೆಯ ಜೊತೆಗೆ ಸಂಸ್ಕೃತ ಪದವು ಸೇರಿಕೊಂಡಿದೆ. ಪ್ರತಿಯೊಬ್ಬ ವ್ಯಕ್ತಿಯು ಧನಾತ್ಮಕ ಚಿಂತನೆ ಮಾಡಬೇಕು ನಕರಾತ್ಮಕ ಚಿಂತನೆಗಳನ್ನು ಮಾಡಿದರೆ ನಮ್ಮನ್ನು ಮತ್ತು ಸಮಾಜವನ್ನು ಹಾಳು ಮಾಡುತ್ತವೆ ಎಂದರು.

ವಿದ್ಯಾರ್ಥಿಗಳು ತಂದೆ, ತಾಯಿ, ಗುರು ಹಿರಿಯರಿಗೆ ಗೌರವ ನೀಡುವಂತಹ ನಮಸ್ಕಾರವನ್ನು ಕಲಿಯಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಬರಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

---------------------

ಫೋಟೋ 11 ಎ, ಎನ್, ಪಿ 1 ಆನಂದಪುರ ಸಮೀಪದ ಮುರುಘಾಮಠದಲ್ಲಿ ನಡೆದ 1171ನೇ ವಾರ್ಷಿಕ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.