ಸಾರಾಂಶ
ಕನ್ನಡಪ್ರಭ ವಾರ್ತೆ ಕಾಳಗಿ
ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ರೇವಗ್ಗಿ (ರಟಕಲ್) ಗ್ರಾಮದ ಜಗದ್ಗುರು ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ನಿಮಿತ್ತ ಒಂದು ತಿಂಗಳ ಪರ್ಯಂತ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಸದಾಶಿವ ವಗ್ಗೆ ಮಾಹಿತಿ ನೀಡಿದರು.ಪ್ರತಿನಿತ್ಯ ರಾತ್ರಿ 8 ಗಂಟೆಗೆ ಪ್ರಾರಂಭದ ಪುರಾಣ ಕಾರ್ಯಕ್ರಮಕ್ಕೆ ರಟಕಲ್ ನಡುವಿನ ಮಠದ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ, ಕಲಬುರಗಿ ಶರಣಬಸವೇಶ್ವರರು ಪ್ರಪಂಚ ಮಾಡಿ ಪರಮಾತ್ಮನನ್ನು ಒಲಿಸಿಕೊಂಡ ಮಹಾನ ಶರಣರು, ಬದುಕಿನುದ್ದಕ್ಕೂ ತ್ರಿಕಾಲ ಲಿಂಗಪೂಜೆ ಗೈದ ಕಾಯಕದ ಜೀವಿಗಳು, ಕೆವಲ ಎರಡು ಎಕರೆ ಭೂಮಿಯಲ್ಲಿ ದನಕರುಗಳು ಪ್ರಾಣಿ-ಪಕ್ಷಿಗಳು ಸೇವನೆಯ ನಂತರ ಮಿಕ್ಕುಳಿದ ಜಮಿನಲ್ಲಿ 101 ಮೂಟೆ ಜೋಳ ರಾಸಿ ಪವಾಡ ಮಾಡಿದ ಶ್ರೇಷ್ಠ ಶರಣಬಸವೇಶ್ವರು, ಇವರ ಲೀಲೆಗಳು ಅಗಣಿತವಾಗಿವೆ ಹಿಂತಹ ಶರಣಬಸವೇಶ್ವರ ಪುರಾಣ ಆಲಿಸುವುದು ಇಂದಿನ ವಿದ್ಯಮಾನಕ್ಕೆ ಅವಶ್ಯಕವಾಗಿದೆ ಎಂದರು.
ದೇವಸ್ಥಾನದಲ್ಲಿ ಶ್ರಾವಣ ಬಂದರೆ ಸಾಕು ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದ ಪುರಾಣ ಕಾರ್ಯಕ್ರಮ ಕರೋನ ಸಮಯದಲ್ಲಿ ನಿಂತು ಹೋಗಿತ್ತು, ಹೀಗಾಗಿ ಮತ್ತೆ ಪುರಾಣ ಪ್ರಾರಂಭ ಮಾಡಿದ್ದು ಭಕ್ತರಿಗೆ ಸಂತೋಷ ನೀಡಿದೆ ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಆಲಿಸಬೇಕು ಎಂದು ಆಶೀರ್ವವಚನ ನೀಡಿದರು.ಗುರುಶಾಂತಯ್ಯ ಸ್ಥಾವರಮಠ ಪ್ರಾರ್ಥಿಸಿದರು, ಶಿವಕುಮಾರ ಸ್ವಾಮಿ ತಬಲಾ ನುಡಿಸಿದರು, ವೇದಮೂರ್ತಿ ಮಲ್ಲಯ್ಯ ಶಾಸ್ತ್ರೀ ಐನಾಪೂರ ಪುರಾಣ ಹೇಳಿದರು. ರೈತ ಸೇನಾಧ್ಯಕ್ಷ ವೀರಣ್ಣ ಗಂಗಾಣಿ ನೀರೂಪಿಸಿ ವಂದಿಸಿದರು. ದೇವಸ್ಥಾನ ಕಾರ್ಯದರ್ಶಿ ಸದಾಶಿ ವಗ್ಗೆ, ಚನ್ನಬಸಪ್ಪ ದೇವರಮನಿ, ಶಿವರಾಜ ಚೌಕ, ಸಂಗಣ್ಣ ಅರಣಕಲ, ಸಿದ್ದಣ್ಣ ಭೀಮನಳ್ಳಿ ಬೆಡಸೂರು, ಅಪ್ಪಣ್ಣ ದೊಡ್ಡಮನಿ ಮಾವಿನಸೂರ ಇದ್ದರು.