ಸಾರಾಂಶ
ಶ್ರೀ ಶಾರದಾಂಬೆಗೆ ಮಹಾಭಿಷೇಕ । ಜಗತ್ ಪ್ರಸೂತಿಕ ಅಲಂಕಾರ । ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ । ಜಗದ್ಗುರುಗಳ ರಾತ್ರಿ ದರ್ಬಾರ್.
ಕನ್ನಡಪ್ರಭ ವಾರ್ತೆ, ಶೃಂಗೇರಿದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ಅ. 2 ರಿಂದ 13 ರವರೆಗೆ ನಡೆಯಲಿದ್ದು, ಅ. 2 ರ ಬುಧವಾರ ಪೀಠದ ಅಧಿದೇವತೆ ಶ್ಪೀ ಶಾರದಾಂಬೆಗೆ ಮಹಾಭಿಷೇಕ, ಜಗತ್ ಪ್ರಸೂತಿಕಾ ಅಂಲಂಕಾರ ಮಾಡಲಾಗುವುದು.ಇದರೊಂದಿಗೆ ಶರನ್ನವರಾತ್ರಿ ಕಾರ್ಯ ಕ್ರಮಗಳು ಆರಂಭಗಗೊಳ್ಳಲಿದೆ.
ನವರಾತ್ರಿ ಒಂಬತ್ತು ದಿನಗಳ ಕಾಲ ಪ್ರತಿದಿನ ಶಾರದೆಗೆ ವಿಶೇಷ ಅಂಲಂಕಾರ ನಡೆಯಲಿದ್ದು, ಸಂಜೆ ಬೀದಿ ಉತ್ಸವ ನಡೆಯಲಿದೆ. ಸಂಜೆ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ. ಪ್ರತಿದಿನ ರಾತ್ರಿ ಜಗದ್ಗುರುಗಳ ರಾತ್ರಿ ದರ್ಬಾರ್ ಸಹಿತ ಧಾರ್ಮಿಕ ನಡೆಯಲಿದೆ. ಕೊನೆಯ ದಿನ ಶ್ರೀ ಶಾರದಾಂಬಾ ಮಹಾ ರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ಜಗದ್ಗುರುಗಳ ಹಗಲು ದರ್ಬಾರ್ ನಡೆಯಲಿದೆ.ಅ. 3 ರಂದು ಹಂಸವಾಹಿನಿ ಅಲಂಕಾರ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡುಗಾರಿಕೆ, ಸಂಜೆ ಬೀದಿ ಉತ್ಸವದಲ್ಲಿ ಅಡ್ಡಗದ್ದೆ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಅ 4 ರ ಶುಕ್ರವಾರ ಬ್ರಾಹ್ಮಿ ಅಲಂಕಾರ, ಸಂಜೆ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಐಶ್ವರ್ಯ ಮಹೇಶ್ ತಂಡದವರಿಂದ ಹಾಡುಗಾರಿಕೆ, ಸಂಜೆ ಬೀದಿ ಉತ್ಸವದಲ್ಲಿ ಶೃಂಗೇರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಅ 5 ರಂದು ವೃಷಭ ವಾಹಿನಿ ಯಲಂಕಾರ, ಸಂಜೆ ವಿದೂಷಿ ರಾಮನಾಥ ಭಾಗವತ್ ತಂಡದವರಿಗೆ ಹಾಡುಗಾರಿಕೆ ನಡೆಯಲಿದೆ. ಸಂಜೆ ಬೀದಿ ಉತ್ಸವದಲ್ಲಿ ಕೂತಗೋಡು ಗ್ರಾಮಸ್ಥರು ಪಾಲ್ಗೊಳ್ಲಲಿದ್ದಾರೆ.
ಅ.6ರ ಭಾನುವಾರ ಮಯೂರ ವಾಹನಾಲಂಕಾರ, ಸಂಜೆ ಸಿಕ್ಕಿಲ್ ಮಾಲಾಚಂದ್ರಶೇಖರ್ ತಂಡದವರಿಂದ ಕೊಳಲುವಾದನ, ಸಂಜೆ ಬೀದಿ ಉತ್ಸವದಲ್ಲಿ ಮೆಣಸೆ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಅ 7 ರ ಸೋಮವಾರ ಗರುಡ ವಾಹನಾಲಂಕಾರ, ಶತಚಂಡೀಯಾಗದ ಸಂಕಲ್ಪ, ಪುರಶ್ಚರಣಾರಂಭ, ಸಂಜೆ ರುದ್ರಪಟ್ನ ಸಹೋದರರಿಂದ ಹಾಡುಗಾರಿಕೆ ನಡೆಯಲಿದೆ. ಅ 8 ರ ಮಂಗಳವಾರ ಶಾರದೆಗೆ ಮೋಹಿನಿ ಅಲಂಕಾರ, ಸಂಜೆ ಶಂಕರ್ ನಂಬೂದರಿ ತಂಡದವರಿಂದ ಹಾಡುಗಾರಿಕೆ, ಸಂಜೆ ಬೀದಿ ಉತ್ಸವದಲ್ಲಿ ಧರೆಕೊಪ್ಪ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.ಅ 9 ರ ಬುಧವಾರ ಶಾರದೆಗೆ ವೀಣಾ ಶಾರದಾಲಂಕಾರ, ಸಂಜೆ ಆರ್.ಕೆ.ಶಂಕರ್ ತಂಡದವರಿಂದ ವೀಣಾವಾದನ, ಸಂಜೆ ಬೀದಿ ಉತ್ಸವದಲ್ಲಿ ನೆಮ್ಮಾರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಅ. 10 ರ ಗುರುವಾರ ಶಾರದೆಗೆ ರಾಜರಾಜೇಶ್ವರಿ ಅಲಂಕಾರ, ಸಂಜೆ ಜ್ಞಾನೋದಯ ಶಾಲಾ ವಿದ್ಯಾರ್ಥಿಗಳಿಂದ ಹಾಡುಗಾರಿಕೆ. ಸಂಜೆ ಬೀದಿ ಉತ್ಸವದಲ್ಲಿ ಬೇಗಾರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಅ.11 ರ ಶುಕ್ರವಾರ ಶಾರದೆಗೆ ಸಿಂಹ ವಾಹಿನಿಯಲಂಕಾರ, ಮಹಾನವಮಿ ,ಶತಚಂಡಿಕಾಯಾಗದ ಪೂರ್ಣಾಹುತಿ, ಗಜಾಶ್ವಪೂಜೆ ನಡೆಯಲಿದೆ. ಸಂಜೆ ಬೀದಿ ಉತ್ಸವದಲ್ಲಿ ಮರ್ಕಲ್ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.
ಅ 12 ರ ಶನಿವಾರ ಶಾರದೆಗೆ ಗಜಲಕ್ಷ್ಮಿ ಅಲಂಕಾರ, ವಿಜಯ ದಶಮಿ, ವಿಜಯೋತ್ಸವ, ಶಮೀಪೂಜೆ ನಡೆಯಲಿದೆ. ಅ 13 ರ ಭಾನುವಾರ ಶಾರದಾಂಬೆಗೆ ಗಜಲಕ್ಷ್ಮಿ ಅಲಂಕಾರ, ಶ್ರೀ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ , ಜಗದ್ಗುರುಗಳ ಹಗಲು ದರ್ಬಾರ್ ನಡೆಯಲಿದೆ.30 ಶ್ರೀ ಚಿತ್ರ 1-ಶ್ರೀ ಶಾರದಾ ಪೀಠ.
;Resize=(128,128))
;Resize=(128,128))