ಶರಣರ ಸಂದೇಶಗಳು ಮನುಕುಲದ ಬೆಳವಣಿಗೆಗೆ ಮಾರ್ಗದರ್ಶಿಯಾಗಿದ್ದು, ಶರಣರ ತತ್ವಗಳು ಸರ್ವ ಸಮಾಜದಲ್ಲಿ ಸಮಾನತೆ ಮೂಡಿಸುವ ಸಂದೇಶಗಳಾಗಿವೆ. ಅದರಿಂದ ನಾಡಿನಲ್ಲಿ ಶಾಂತಿ, ನೆಮ್ಮದಿಯಿಂದ ಬದುಕು ಸಾಗಿಸುವಂತಾಗಿದೆ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಶಿಗ್ಗಾಂವಿ: ಶರಣರ ಸಂದೇಶಗಳು ಮನುಕುಲದ ಬೆಳವಣಿಗೆಗೆ ಮಾರ್ಗದರ್ಶಿಯಾಗಿದ್ದು, ಶರಣರ ತತ್ವಗಳು ಸರ್ವ ಸಮಾಜದಲ್ಲಿ ಸಮಾನತೆ ಮೂಡಿಸುವ ಸಂದೇಶಗಳಾಗಿವೆ. ಅದರಿಂದ ನಾಡಿನಲ್ಲಿ ಶಾಂತಿ, ನೆಮ್ಮದಿಯಿಂದ ಬದುಕು ಸಾಗಿಸುವಂತಾಗಿದೆ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ನಡೆದ ತಾಲೂಕು ಘಟಕದ ಪದಾಧಿಕಾರಿಗಳ ಸೇವಾ ಸ್ವೀಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪುರ ಮಾತನಾಡಿ, ಶರಣರ ವಚನಗಳು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಇಡೀ ಮನುಕುಲವನ್ನೇ ಬೆಳಗುವ ಶಕ್ತಿಯಾಗಿವೆ. ಅವರ ಸಂದೇಶಗಳನ್ನು ಇಂದಿನ ಜನತೆ ನಮ್ಮ ಮನುಕುಲಕ್ಕೆ ಸಾಹಿತ್ಯದ ಪ್ರಚಾರ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ಪ್ರೊ. ಶಶಿಕಾಂತ ರಾಠೋಡ ಮಾತನಾಡಿ, ಭಾವೈಕ್ಯ ಸಂದೇಶ ಸಾರಿದ ಈ ಕ್ಷೇತ್ರದಲ್ಲಿ ಶರಣರ ಸಂದೇಶ ತಲುಪಿಸುವ ಕಾರ್ಯವನ್ನು ಶರಣ ಸಾಹಿತ್ಯ ಪರಿಷತ್ತು ಮಾಡಲಿದೆ. ಕ್ಷೇತ್ರದ ಜನರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಶರಣರ ಸಂದೇಶಗಳನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸುವಂತಾಗಲಿ ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ತಿನ ಶಹರ ಘಟಕದ ಅಧ್ಯಕ್ಷ ಚನ್ನಪ್ಪ ಕೆ.ಬಿ. ಚನ್ನಪ್ಪ ಮಾತನಾಡಿದರು. ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಲ್ಲಪ್ಪ ರಾಮಗೇರಿ ಅಧ್ಯಕ್ಷತೆ ವಹಿಸಿದ್ದರು. ವಚನ ನಿಧಿ ವನಿತಾ ಸಂಘದ ಅಧ್ಯಕ್ಷೆ ಡಾ.ಲತಾ ನಿಡಗುಂದಿ, ಫಕ್ಕೀರೇಶ ಮಾಸ್ತರ್ ಕೊಂಡಾಯಿ, ಜಿ.ಎನ್. ಯಲಿಗಾರ, ಮಹಾಲಿಂಗಪ್ಪ ಹಡಪದ, ಪ್ರಭುಗೌಡ ತೆಂಬದಮನಿ, ಸಿ.ಎನ್. ಕುಂಬಾರ, ವಿಶ್ವನಾಥ ಬಂಡಿವಡ್ಡರ, ಶಿಕ್ಷಕ ರಮೇಶ ಹರಿಜನ, ಮಹಾಂತೇಶ ನಾಯ್ಕೋಡಿ, ಶಂಭು ಕೇರಿ, ರವಿ ಕಡಕೋಳ ಮುಂತಾದವರು ಭಾಗವಹಿಸಿದ್ದರು.