ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲಿಂಗನಮಕ್ಕಿ ಜಲಾಶಯದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಮುಪ್ಪಾನೆ ಮತ್ತು ಹಲ್ಕೆ ನಡುವಿನ ಲಾಂಚ್ ಸೇವೆ ಪುನಾರಂಭಗೊಂಡಿದೆ. ಲಿಂಗನಮಕ್ಕಿ ಡ್ಯಾಂ ಹಿನ್ನೀರು ಕನಿಷ್ಠ ಮಟ್ಟಕ್ಕೆ ಇಳಿದ ಪರಿಣಾಮ ನೀರಿನ ಆಳದಲ್ಲಿನ ಮರದ ಕಾಂಡಗಳು ಲಾಂಚ್ ತಳಭಾಗಕ್ಕೆ ತಗಲುವ ಸಾಧ್ಯತೆ ಹಾಗೂ ವಾಹನ ಇಳಿಸುವ ಪ್ಲಾಟ್‌ಫಾರ್ಮ್ ಜಾಗದಲ್ಲಿ ಲಾಂಚ್ ಅಡಿ ಭಾಗ ನೆಲಕ್ಕೆ ತಾಗುವ ಹಿನ್ನೆಲೆ, ಜನರ ಸುರಕ್ಷತೆಯ ಹಿನ್ನೆಲೆ ಕಳೆದ ಜೂನ್ 2 ರಂದು ತಾತ್ಕಾಲಿಕವಾಗಿ ಮುಪ್ಪಾನೆ- ಹಲ್ಕೆ ಲಾಂಚ್ ಸೇವೆ ಸ್ಥಗಿತಗೊಂಡಿತ್ತು.ಈಗ ಹಿನ್ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ಸೋಮವಾರದಿಂದ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಲಾಂಚ್ ಸೇವೆಯನ್ನು ಪುನಾರಂಭ ಮಾಡಿದೆ. ಕರೂರು ಮತ್ತು ಭಾರಂಗಿ ಹೋಬಳಿಯ ಸಂಪರ್ಕದ ಅತಿ ಮುಖ್ಯ ಮಾರ್ಗವಾಗಿರುವ ಮುಪ್ಪಾನೆ ಲಾಂಚ್ ತುಮರಿ, ಸಿಗಂದೂರು ಮತ್ತು ಭಾರಂಗಿ ಹೋಬಳಿ ಜನರಿಗೆ ಅನುಕೂಲ ಕಲ್ಪಿಸುತ್ತದೆ.
----------ಪೊಟೋ: 13ಎಸ್‌ಎಂಜಿಕೆಪಿ03