ಸಾರಾಂಶ
ಶಶಾಂಕ್ ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್‌ಶಿಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ಸ್ಪರ್ಧೆಯಲ್ಲಿ ಬಹುಸಂಖ್ಯೆಯ ಸ್ಪರ್ಧಿಗಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಮೂರ್ನಾಡು ಪದವಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಶಶಾಂಕ್ ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್‌ಶಿಪ್ ಗೌರವಕ್ಕೆ ಪಾತ್ರರಾಗಿದ್ದಾರೆ.ಐಎಫ್‌ಸಿಸಿ 2024 ಆಯೋಜಿಸಿದ ಫಿಲ್ಟರ್ ಕಾಫಿ ತಯಾರಿಕೆಯ ಚಾಂಪಿಯನ್ ಸ್ಪರ್ಧೆಯಲ್ಲಿ ಬಹು ಸಂಖ್ಯೆಯ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಅಗಸ್ತ್ಯ ಕಾಫಿಯಲ್ಲಿ ತನ್ನ ವಿದ್ಯಾಭ್ಯಾಸದೊಂದಿಗೆ ಅರೆಕಾಲಿಕ ಉದ್ಯೋಗ ಮಾಡುತ್ತಿರುವ ಮೂರ್ನಾಡು ಕಾಲೇಜಿನ ಅಂತಿಮ ಬಿಕಾಂನ ವಿದ್ಯಾರ್ಥಿಯಾದ ಶಶಾಂಕ್ ಪ್ರಥಮ ಸ್ಥಾನ ಪಡೆದು ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಮೂರ್ನಾಡು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರೇಖಾ ಚಿಣ್ಣಪ್ಪ ತಿಳಿಸಿದ್ದಾರೆ.
----------------------------ಟೇಬಲ್ ಟೆನ್ನಿಸ್: ವಿಶ್ವಾಸ್ ವೆಂಕಟ್‌ಗೆ ರನ್ನರ್ ಪ್ರಶಸ್ತಿ
ಮಡಿಕೇರಿ: ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಅಂತರ ಶಾಲಾ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ವಿಶ್ವಾಸ್ ವೆಂಕಟ್ ಜಿ.ಆರ್. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ. ವಿಶ್ವಾಸ್ ವೆಂಕಟ್ ಮೂಲತಃ ಮಡಿಕೇರಿಯವನಾಗಿದ್ದು, ಮೈಸೂರಿನ ಡಿಎವಿ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿ. ವಿಶ್ವಾಸ್ ಮಡಿಕೇರಿ ಗೌಳಿಬೀದಿಯ ರವಿಕುಮಾರ್ ಜಿ.ವಿ. ಹಾಗೂ ಪ್ರಿಯಾ ಸಿ.ಜೆ. ದಂಪತಿ ಪುತ್ರ.