ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಕುರುಬರು ಎನ್ನುವುದು ಒಂದು ಜಾತಿಯಲ್ಲ, ಬದಲಿಗೆ ಸಮುದಾಯವೆಂಬ ಸತ್ಯ ಕುರುಬ ಜನಾಂಗಕ್ಕೆ ಅರ್ಥವಾಗಿದೆ. ದೇಶದೆಲ್ಲೆಡೆ ಧನಗರ್, ಕುರುಮನ್, ಗಡಾರಿಯಾ, ಪಾಲಕ್ಷತ್ರೀಯ, ಗದ್ವಿ, ದಿವಾಸಿ ಹಾಗೂ ಇತರೆ ಹೆಸರುಗಳಿಂದ ಗುರುತಿಸಿಕೊಂಡಿರುವ ಕುರುಬ ಸಮುದಾಯವನ್ನು ಒಂದೇ ಹೆಸರಿನಡಿ ತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಶೆಫರ್ಡ್ ಇಂಡಿಯಾ ಇಂಟರ್ ನ್ಯಾಶನಲ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಮಂತ್ರಿ ಎಚ್.ವಿಶ್ವನಾಥ ಹೇಳಿದರು.ಪಟ್ಟಣದಲ್ಲಿ ಶೆಫರ್ಡ ಇಂಡಿಯಾ ಇಂಟರನ್ಯಾಷನಲ್ ಬಾಗಲಕೋಟೆ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಯಾವತ್ತು ಜಾತಿ ಮಾಡುವವನಲ್ಲ, ಸಾಮಾಜಿಕ ನ್ಯಾಯ ನನ್ನ ಉಸಿರು. ಅವಕಾಶ ವಂಚಿತ ಜಾತಿಗಳ ಜನ ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಸಮಾವೇಶ ನಡೆಸುವುದು ತಪ್ಪಲ್ಲ. ಮುಂದಿನ ದಿನಮಾನಗಳಲ್ಲಿ ವಿಜಯಪುರ-ಬಾಗಲಕೋಟೆ ಯಾವುದೇ ಸ್ಥಳದಲ್ಲಿ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.
ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನೂತನ ಜಿಲ್ಲಾಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿ, ಪ್ರತಿ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆದರೆ ಮಾತ್ರ ಸಮಸಮಾಜದ ನಿರ್ಮಾಣ ಸಾಧ್ಯ. ಎಲ್ಲರಿಗೂ ಅವರವರ ಪಾಲಿನ ಅಧಿಕಾರ, ಅವಕಾಶ ಸಿಗಬೇಕು. ನಮ್ಮ ಸಮಾಜಕ್ಕೆ ಅವಕಾಶಗಳ ಹಂಚಿಕೆಯಲ್ಲೂ ತಾರತಮ್ಯ ಇರುತ್ತದೆ. ಇವೆನ್ನಲ್ಲಾ ಸರಿದೂಗಿಸಬೇಕಾದರೆ ಸಂಘಟನೆ, ಸಮಾವೇಶಗಳು ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಸಂಗಣ್ಣ ಹಂಡಿ, ತಾಲೂಕು ಕುರುಬ ಸಮಾಜದ ಮಾಜಿ ಅಧ್ಯಕ್ಷ ಭೀಮಶಿ ಸರಕಾರಕುರಿ, ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಜಿಪಂ ಮಾಜಿ ಸದಸ್ಯ ಅರ್ಜುನ ದಳವಾಯಿ, ಜಿಲ್ಲಾ ಉಪಾಧ್ಯಕ್ಷ ಸಂಗಪ್ಪ ಒಡೆಯರ, ರಬಕವಿ ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದುಂಡಪ್ಪ ಕರಿಗಾರ, ವೆಂಕಣ್ಣಾ ಹೊರಕೇರಿ, ಲಕ್ಷ್ಮಣ ಹುದ್ದಾರ, ಮಾನಿಂಗ ಮುಧೋಳ, ನೀಲಪ್ಪ ತಪೆಲಿ, ಸಿದ್ದೂ ಹೂಗಾರ, ಶಿರಾಜ ಹೊರಟ್ಟಿ, ಶಶಿಧರ ಬೆಳಗಲಿ, ಹಸನ್ ಡಂಗಿ, ಚಮನ ಚೌಧರಿ, ತಿಪ್ಪಣ್ಣ ಜಡಗಪ್ಪನವರ, ಸಿಂಗಾಡೆಪ್ಪ ಗಡ್ಡದವರ, ನಿಂಗಪ್ಪ ಹರಕಂಗಿ, ಮುಪ್ಪಣ್ಣ ಪರಮೇಶ್ವರ, ಲಕ್ಷ್ಮಣ ಮಸಗೊಪ್ಪಿ, ಅರುಣ ಇಮ್ಮಡಿ, ಕೃಷ್ಣಾ ಮುಧೋಳ, ಶಂಕರಗೌಡ ಪಾಟೀಲ, ನಿಂಗನಗೌಡ ಮಂಟೂರ, ಮಂಜು ಮಂಟೂರ, ಕರೆಯಪ್ಪ ಹರಕಂಗಿ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಶನಲ್ ನೂತನ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಇದ್ದರು.