ಮಾರುತಿ ಮಾಡಗೆಂಡಪ್ಪ ಕುರಿ(22) ಎಂಬವರೇ ಮೃತಪಟ್ಟ ಕುರಿಗಾಹಿ. ಸಿಡಿಲಿಗೆ ಸಾವಿಗೀಡಾದ ಯುವಕ ರಾಮದುರ್ಗ ತಾಲೂಕಿನ ಹಿರೇಮೂಲಂಗಿ ಗ್ರಾಮದವವರು ಎಂದು ತಿಳಿದುಬಂದಿದೆ.
ನರಗುಂದ: ಪಟ್ಟಣಕ್ಕೆ ಹೊಂದಿಕೊಂಡಿರುವ ಜಗಾಪುರ ರಸ್ತೆಯ ಪಠಾಣ ಎಂಬವರ ಹೊಲದಲ್ಲಿ ಬುಧವಾರ ಸಂಜೆ ಸಿಡಿಲು ಬಡಿದು ಕುರಿಗಾಹಿಯೊಬ್ಬರು ಸಾವಿಗೀಡಾಗಿದ್ದು, ರೈತರೊಬ್ಬರು ಗಾಯಗೊಂಡಿದ್ದಾರೆ.
ಮಾರುತಿ ಮಾಡಗೆಂಡಪ್ಪ ಕುರಿ(22) ಎಂಬವರೇ ಮೃತಪಟ್ಟ ಕುರಿಗಾಹಿ. ಸಿಡಿಲಿಗೆ ಸಾವಿಗೀಡಾದ ಯುವಕ ರಾಮದುರ್ಗ ತಾಲೂಕಿನ ಹಿರೇಮೂಲಂಗಿ ಗ್ರಾಮದವವರು ಎಂದು ತಿಳಿದುಬಂದಿದೆ.ಘಟನೆಯಲ್ಲಿ ರೈತರಾದ, ಪಟ್ಟಣದ ಹಾಲಬಾವಿ ಕೆರೆ ಓಣಿ ನಿವಾಸಿ ನಿಂಗಪ್ಪ ಶಿಂಗಾಡೆಪ್ಪ ಮಜ್ಜಗಿ ಗಾಯಗೊಂಡಿದ್ದಾರೆ. ಅವರನ್ನು ಹುಬ್ಬಳ್ಳಿಯ ಕೆಎಂಸಿಆರ್ ಐಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನರಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುಗಿಯದ ಸಿಲಿಂಡರ್ ರಗಳೆ
ನರಗುಂದ: ಮಧ್ಯಪ್ರಾಚ್ಯ ದೇಶಗಳಲ್ಲಿ ಕಳೆದ 1 ತಿಂಗಳಿಂದ ನಿರಂತರವಾಗಿ ನಡೆದ ಯುದ್ಧದಿಂದ ಅಡುಗೆ ಅನಿಲ ಸರಿಯಾಗಿ ಪೂರೈಕೆ ಆಗದ್ದರಿಂದ ಗ್ರಾಹಕರು ಸರದಿ ಸಾಲಿನಲ್ಲಿ ನಿಂತರೂ ಸಿಲಿಂಡರ್ ಸಿಗದೆ ಒದ್ದಾಡುತ್ತಿದ್ದಾರೆ.ಪ್ರತಿ ಕುಟುಂಬಕ್ಕೆ ಆಹಾರ ತಯಾರಿಸಲು ಬೇಕಾಗಿರುವ ಸಿಲಿಂಡರ್ ಗಳನ್ನು ಖರೀದಿ ಮಾಡಲು ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಿಂದ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಪಟ್ಟಣದ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿ ಮುಂದೆ ಸರದಿ ಸಾಲಿನಲ್ಲಿ ಉಟ, ನಿದ್ದೆ, ಬಿಟ್ಟು ಸಿಲಿಂಡರಗಾಗಿ 300ರಿಂದ 400 ಮೀಟರವರೆಗೆ ಸರದಿ ಸಾಲಿನಲ್ಲಿ ನಿಂತರೂ ಸಿಗುತ್ತಿಲ್ಲ.ತಾಲೂಕಿನ ಕೊಣ್ಣೂರಿನಲ್ಲಿ ಭಾರತ ಅನಿಲ ಗ್ಯಾಸ್ ಏಜೆನ್ಸಿಗೆ ಬುಧವಾರ 325 ಸಿಲಿಂಡರಗಳು ಪೂರೈಕೆಯಾಗಿದ್ದವು. ಅದರಲ್ಲಿ 306 ವಿತರಣೆ ಮಾಡಿದ್ದವೆಂದು ಭಾರತ ಗ್ಯಾಸ್ ಏಜೆನ್ಸಿ ಮಾಲೀಕ ಮಹೇಶ ಬಿಜಾಪೂರ ತಿಳಿಸಿದರು.ನರಗುಂದ ಪಟ್ಟಣದ ಸಿದ್ದಲಿಂಗೇಶ್ವರ ಗ್ರಾಸ ಏಜೆನ್ಸಿಯಲ್ಲಿ ಗ್ರಾಹಕರು 2 ಸಾವಿರ ಸಿಲಿಂಡರಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಬುಧವಾರ ಇಂಡಿಯನ್ ಗ್ಯಾಸ್ ಕಂಪನಿಯಿಂದ ಬಂದ 360 ಸಿಲಿಂಡರಗಳನ್ನು ವಿತರಣೆ ಮಾಡಲಾಗಿದೆ. ಆದರೆ ನಮ್ಮ ಏಜೆನ್ಸಿಗೆ ಗ್ರಾಹಕರ ಬೇಡಿಕೆ ಅನುಸಾರವಾಗಿ ಸಿಲಿಂಡರಗಳು ಪೂರೈಕೆ ಆಗುತ್ತಿಲ್ಲವೆಂದು ಗ್ಯಾಸ್ ಏಜೆನ್ಸಿ ಮಾಲೀಕ ಚನ್ನಬಸಪ್ಪ ಕೋರಿ ತಿಳಿಸಿದರು.