ಸಾರಾಂಶ
ಉತ್ತಮ ಗುಣಮಟ್ಟದ ಹೋರಿಗಳು ಮೂರರಿಂದ ನಾಲ್ಕು ಲಕ್ಷ ರು. ಗೆ ಮಾರಾಟವಾಗುತ್ತಿದ್ದರೆ, ಅಲ್ಪಸ್ವಲ್ಪದ ಗುಣಮಟ್ಟದ ಹೋರಿಗಳು 60 ಸಾವಿರದಿಂದ 70 ಸಾವಿರ ರು. ಗಳಿಗೆ ಮಾರಾಟವಾಗುತ್ತಿವೆ. ಗ್ರಾಪಂನಿಂದ ಕುಡಿಯುವ ನೀರು ಮತ್ತು ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಪಶು ಸಂಗೋಪನೆ ಇಲಾಖೆ ವತಿಯಿಂದ ಜಾನುವಾರಿಗೆ ಔಷದ ಮತ್ತು ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಪಂ ಪಿಡಿಒ ಮಂಜುನಾಥ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ತಾಲೂಕಿನ ಬೆಟ್ಟದಪುರದ ಶಿಡ್ಲು ಮಲ್ಲಿಕಾರ್ಜುನಸ್ವಾಮಿ ಜಾನುವಾರು ಜಾತ್ರೆಯು ವಿಜೃಂಭಣೆಯಿ ನಡೆಯುತ್ತಿದ್ದು, ಹಳ್ಳಿಕಾರ್ ತಳಿಯ ಜಾನುವಾರಿಗೆ ಬೇಡಿಕೆ ಹೆಚ್ಚಿದೆ.ಜಾನುವಾರು ಜಾತ್ರೆಗೆ ಮೈಸೂರು, ಹಾಸನ, ಕೊಡಗು ಜಿಲ್ಲೆಯ ಗಡಿ ಭಾಗದಿಂದ ರೈತರು ತಮ್ಮ ಜಾನುವಾರುಗಳನ್ನು ಮಧುವನಗಿತ್ತಿಯಂತೆ ಶೃಂಗಾರ ಮಾಡಿಕೊಂಡು, ಧ್ವನಿವರ್ಧಕಗಳನ್ನು ಹಾಕಿಕೊಂಡು ರೈತರು ಜಾನಪದ ನೃತ್ಯಗಳನ್ನು ಮಾಡುತ್ತ ಸಂತೋಷ ಆಗುಮಿಸುತ್ತಿದ್ದಾರೆ.
ಜಾತ್ರೆಗೆ ಈಗಾಗಲೇ ಸಾವಿರಾರು ಜೊತೆ ಜಾನುವಾರು ಆಗಮಿಸಿದ್ದು, ಉತ್ತಮ ಗುಣಮಟ್ಟದ ಎರಡು ಹಲ್ಲಿನ ಹೋರಿ, ನಾಲ್ಕು ಹಲ್ಲಿನ ಹೋರಿ ಸೇರಿದಂತೆ ಹಲವಾರು ಬಗೆಯ ಗುಣಮಟ್ಟದ ಹೋರಿಗಳನ್ನು ಇಲ್ಲಿ ಜನರು ಖರೀದಿ ಮಾಡುತ್ತಿದ್ದಾರೆ.ಉತ್ತಮ ಗುಣಮಟ್ಟದ ಹೋರಿಗಳು ಮೂರರಿಂದ ನಾಲ್ಕು ಲಕ್ಷ ರು. ಗೆ ಮಾರಾಟವಾಗುತ್ತಿದ್ದರೆ, ಅಲ್ಪಸ್ವಲ್ಪದ ಗುಣಮಟ್ಟದ ಹೋರಿಗಳು 60 ಸಾವಿರದಿಂದ 70 ಸಾವಿರ ರು. ಗಳಿಗೆ ಮಾರಾಟವಾಗುತ್ತಿವೆ.
ಗ್ರಾಪಂನಿಂದ ಕುಡಿಯುವ ನೀರು ಮತ್ತು ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಪಶು ಸಂಗೋಪನೆ ಇಲಾಖೆ ವತಿಯಿಂದ ಜಾನುವಾರಿಗೆ ಔಷದ ಮತ್ತು ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಪಂ ಪಿಡಿಒ ಮಂಜುನಾಥ್ ಹೇಳಿದ್ದಾರೆ.