ಖಾತಾ ಬದಲಾವಣೆಗೆ ಲಂಚ ಪಡೆಯುವಾಗ ಶಿರಸ್ತೇದಾರ್ ಲೋಕಾ ಬಲೆಗೆ

| Published : Mar 08 2024, 01:54 AM IST

ಖಾತಾ ಬದಲಾವಣೆಗೆ ಲಂಚ ಪಡೆಯುವಾಗ ಶಿರಸ್ತೇದಾರ್ ಲೋಕಾ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ತಹಸೀಲ್ದಾರ ಕಚೇರಿ ಶಿರಸ್ತೇದಾರ್ ಸುರೇಶ ಅಡವಿ ಖಾತೆ ಬದಲಾವಣೆ ಮಾಡಿಕೊಡಲು ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಘಟಗಿ

ರೈತರೊಬ್ಬರ ಖಾತೆ ಬದಲಾವಣೆ ಮಾಡಿಕೊಡಲು ₹45 ಸಾವಿರ ಲಂಚ ಪಡೆಯುವಾಗ ಶಿರಸ್ತೇದಾರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ಜರುಗಿದೆ.

ತಹಸೀಲ್ದಾರ ಕಚೇರಿ ಶಿರಸ್ತೇದಾರ್ ಸುರೇಶ ಅಡವಿ ಎಂಬುವವರು ಕಲಘಟಗಿ ತಾಲೂಕಿನ ಕೂಡಲಗಿ ಗ್ರಾಮದ ರೈತರಾದ ಮಲ್ಲಿಕಾರ್ಜುನ ಮಹದೇವಪ್ಪ ಕುರುಬರ ಅವರ ಹೊಲದ ಸರ್ವೇ ನಂಬರ್ 186 ಮತ್ತು 160ರ ಭೂ ನ್ಯಾಯ ಮಂಡಳಿಯ ಆದೇಶದ ಖಾತೆ ಬದಲಾವಣೆ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದರು.

ಈ ಕುರಿತು ನೀಡಿದ ದೂರಿನ ಮೇರೆಗೆ ಧಾರವಾಡ ಲೋಕಾಯುಕ್ತ ಅಧಿಕಾರಿಗಳು ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದಾರೆ. ಜಿಲ್ಲಾ ಲೋಕಾಯುಕ್ತ ಎಸ್ಪಿ ಶಂಕರ್ ಎಂ. ರಾಗಿ ಮಾರ್ಗದರ್ಶನದಲ್ಲಿ ಸಿಪಿಐ ಬಸಗೌಡ ಪಾಟೀಲ್, ಪ್ರಭುಲಿಂಗಯ್ಯ ಹಿರೇಮಠ, ಟಿ.ಎ. ಸೊಪ್ಪಿ, ವಿ.ಎಸ್. ದೇಸಾಯಿಗೌಡ್ರ, ಎಸ್.ಇ. ಲಕ್ಕಮ್ಮನವರ, ಎಂ.ಎಂ. ಶಿವನಾಯ್ಕರ ಕಾರ್ಯಚಾರಣೆಯಲ್ಲಿ ಇದ್ದರು.