ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಸಂದರ್ಭ ಲಕ್ಷಾಂತರ ಮಂದಿಗೆ ಅನ್ನಪ್ರಸಾದ ವಿತರಣೆಯ ಅಂಗವಾಗಿ ಉಡುಪಿ ಜಿಲ್ಲೆಯ ಮೂಲೆಮೂಲೆಗಳಿಂದ ಹಸಿರು ಹೊರೆಕಾಣಿಕೆ

ಉಡುಪಿ: ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಸಂದರ್ಭ ಲಕ್ಷಾಂತರ ಮಂದಿಗೆ ಅನ್ನಪ್ರಸಾದ ವಿತರಣೆಯ ಅಂಗವಾಗಿ ಉಡುಪಿ ಜಿಲ್ಲೆಯ ಮೂಲೆಮೂಲೆಗಳಿಂದ ಹಸಿರು ಹೊರೆಕಾಣಿಕೆ ಹರಿದು ಬರುತ್ತಿದೆ.

ಬುಧವಾರ ಕಾಪು ,ಬೆಳ್ಮಣ್ ಮತ್ತು ಅಲೆವೂರು ವಲಯದ ವತಿಯಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಇದರ ಜೊತೆ ವಿಶ್ವಕರ್ಮ‌ ಸಮಾಜ, ಹಾಲು ಮತ ಸಭಾ ಉಡುಪಿ ಜಿಲ್ಲೆಯ ವತಿಯಿಂದಲೂ ಹೊರೆ‌ಕಾಣಿಕೆ ಸಮರ್ಪಿಸಲಾಯಿತು.ನಗರದ ಜೋಡುಕಟ್ಟೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ, ಗೌರವ ಸಂಚಾಲಕರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ, ಹೊರೆಕಾಣಿಕೆ‌‌ ಮೆರವಣಿಗೆಗೆ ಚಾಲನೆ‌ ನೀಡಿದರು.ವಿವಿಧ ಸಂಘಟನೆಗಳ ಪ್ರಮುಖರಾದ ಯೋಗೀಶ್ ಶೆಟ್ಟಿ ಬಾಲಾಜಿ, ಗೀತಾಂಜಲಿ ಸುವರ್ಣ, ವೀಣಾ ಎಸ್. ಶೆಟ್ಟಿ, ಶ್ರೀಕಾಂತ್ ನಾಯಕ್, ಕಾರ್ಯದರ್ಶಿ ಮೋಹನ್ ಭಟ್ , ವಿವಿಧ ವಲಯಗಳ, ವಿವಿದ ಸಮುದಾಯದ ಭಕ್ತರು ಸೇರಿದಂತೆ ಅನೇಕರು ಭಾಗಿಯಾದರು