ಸರ್ವಜನಾಂಗವನ್ನು ತನ್ನ ಬಳಗದಂತೆ ಕಂಡ ಮಹಾಪುರುಷ ಶಿರಸಂಗಿ ಲಿಂಗರಾಜ ಅವರು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ನವಲಗುಂದ: ಸರ್ವಜನಾಂಗವನ್ನು ತನ್ನ ಬಳಗದಂತೆ ಕಂಡ ಮಹಾಪುರುಷ ಶಿರಸಂಗಿ ಲಿಂಗರಾಜ ಅವರು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಅವರು ಶನಿವಾರ ಪಟ್ಟಣದಲ್ಲಿರುವ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಬಿಜೆಪಿ ಮುಖಂಡ ದೇವರಾಜ ದಾಡಿಭಾವಿ ಮಾತನಾಡಿ, ಲಿಂಗರಾಜರು ಸಮಾಜದ ಉದ್ಧಾರಕ್ಕಾಗಿ ತಮ್ಮ ಆಸ್ತಿಯನ್ನು ದಾನ ನೀಡಿದ ಶಿರಸಂಗಿ ಸಂಸ್ಥಾನದ ಕೀರ್ತಿ ಇಂದಿಗೂ ಉಳಿದಿದೆ. ಜತೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆರಂಭಿಸಿ ಶಿರಸಂಗಿ ದೇಸಾಯಿ ಅವರು ಇಡೀ ಸಮಾಜಕ್ಕೆ ಶಿಕ್ಷಣ ನೀಡಿ ಜಾಗೃತಗೊಳಿಸಿದರು. ಇದರಿಂದಾಗಿ ಇಂದಿನ ಈ ಬದಲಾವಣೆ ಸಾಧ್ಯವಾಗಿದೆ ಎಂದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಲಿಂಗರಾಜರ ಭಾವಚಿತ್ರ ಮೆರವಣಿಗೆ ನಡೆಯಿತು.

ಗವಿಮಠದ ಬಸವಲಿಂಗ ಸ್ವಾಮೀಜಿ, ತಹಸೀಲ್ದಾರ್ ಸುಧೀರ್ ಸಾಹುಕಾರ್,ಲಿಂಗರಾಜ ಸರದೇಸಾಯಿ, ನಿಂಗಪ್ಪ ಹಳ್ಳದ, ಸದುಗೌಡ ಪಾಟೀಲ, ಬಸವರಾಜ ಹಳ್ಳದ, ನಾಗಪ್ಪ ಸಂಗಟಿ, ಬಸವರಾಜ ಸೋಮಗೊಂಡ, ಶಂಕರಗೌಡ ಪಾಟೀಲ, ಶಂಕ್ರು ಸಂಗಟಿ, ಈರಪ್ಪ ಪುಗಶೆಟ್ಟಿ, ಅಪ್ಪಣ್ಣ ಹಳ್ಳದ, ಎಮ್ ಬಿ ಬಿರಾದಾರ, ಲಕ್ಷ್ಮಣ ಹಳ್ಳದ ಸೇರಿ ಹಲವರಿದ್ದರು.