ಸಾರಾಂಶ
ವೀರಶೈವ ಲಿಂಗಾಯತ ಆಗಮೋಕ್ತ ರೀತಿಯಲ್ಲಿ ನಡೆದ ವಿಧಿ-ವಿಧಾನದಲ್ಲಿ ಪ್ರಥಮವಾಗಿ ರುದ್ರಾಕ್ಷ ಮಂತ್ರ ಪಠಣ ಮಾಡುತ್ತಾ ಪಂಚಾಮೃತಾಭಿಷೇಕ ನೆರವೇರಿಸಿದ ನಂತರ ಭಕ್ತಾದಿಗಳಿಗೆ ಪಂಚಾಮೃತ ವಿತರಣೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಶಿವೈಕ್ಯವಾದ ಬಸವಪ್ಪ 11ನೇ ದಿನದ ಶಿವರಾಧನೆ ಸಾಂಪ್ರದಾಯಕವಾಗಿ ಶನಿವಾರ ನೆರವೇರಿತು.ದೇಗುಲದಲ್ಲಿದ್ದ 20 ವರ್ಷದ ಬಸಪ್ಪ ಐಕ್ಯವಾಗಿ ಹನ್ನೂಂದನೆ ದಿನವಾದ ಶನಿವಾರ ವೀರಶೈವ ಸಂಪ್ರದಾಯ ರೀತಿಯಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಪುಣ್ಯ ಕ್ಷೇತ್ರದಲ್ಲಿ ನೆರವೇರಿಸಲಾಯಿತು. ನಂತರ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಇಲ್ಲಿನ ಸುತ್ತಮುತ್ತಲ ಹಾಗೂ ಹೊರಗಿನ ಭಕ್ತ ಜನರಿಗೆ, ಗ್ರಾಮಸ್ಥರಿಗೆ ದೈವ ಸ್ವರೂಪಿಯಾಗಿದ್ದ ಬಸಪ್ಪನ ಸಮಚಿತ್ತ ಸ್ಥಳವನ್ನು ಹಸಿರು ಚಪ್ಪರದಿಂದ ಅಲಕೃತಗೊಳಿಸಿ ಹೂವಿನಿಂದ ಅಲಂಕಾರಿಯಿತು.ವೀರಶೈವ ಲಿಂಗಾಯತ ಆಗಮೋಕ್ತ ರೀತಿಯಲ್ಲಿ ನಡೆದ ವಿಧಿ-ವಿಧಾನದಲ್ಲಿ ಪ್ರಥಮವಾಗಿ ರುದ್ರಾಕ್ಷ ಮಂತ್ರ ಪಠಣ ಮಾಡುತ್ತಾ ಪಂಚಾಮೃತಾಭಿಷೇಕ ನೆರವೇರಿಸಿದ ನಂತರ ಭಕ್ತಾದಿಗಳಿಗೆ ಪಂಚಾಮೃತ ನೀಡಲಾಯಿತು.
ಭಾರತೀ ಸಂಸ್ಕೃತಿಯಲ್ಲಿ ಗೋವುಗಳಿಗೆ ಮಹತ್ವದ ಸ್ಥಾನವಿದೆ. ಪೂಜೆ ಮಾಡಿ ಆರಾಧಿಸಲಾಗುತ್ತದೆ. ಹಸುಗಳಾಗಿದ್ದರೆ ಗೋಮಾತೆ, ಕಾಮಧೇನು ಅಂತ, ಗೂಳಿ ಆಗಿದ್ದರೆ ಅದನ್ನು ಸಾಕ್ಷಾತ್ ನಂದಿ ಅವತಾರ ಎಂದು ಪೂಜಿಸಲಾಗುತ್ತದೆ. ಅದರಂತೆ ಬಸಪ್ಪಗೆ ಪೂಜೆ ಸಲ್ಲಿಸಲಾಯಿತು.ವಿಧಾನ ಪರಿಷತ್ ಸದಸ್ಯ, ಬಿಇಟಿ ಚೇರ‍್ಮನ್ ಮಧು ಜಿ.ಮಾದೇಗೌಡರು ಪೂಜಾ ಕಾರ್ಯ ನೆರವೇರಿಸಿ ಮಾತನಾಡಿ, ನಮ್ಮ ಕುಟುಂಬ ವರ್ಗ, ಸುತ್ತಮುತ್ತಲ, ಹೊರಗಿನ ಭಕ್ತರಿಗೆ ದೈವ ಸ್ವರೂಪಿ ಬಸಪ್ಪ ಶಿವಕ್ಯವಾದ ಹಿನ್ನೆಲೆಯಲ್ಲಿ ಇಂದು ವೀರಶೈವ ಸಂಪ್ರದಾಯದಂತೆ ಸಮಾರಾಧನೆ ಕಾರ್ಯವನ್ನು ಮಾಡಲಾಗಿದೆ ಎಂದರು.
ಬಿಇಟಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಆಶಯ್ ಜಿ. ಮಧು ಪೂಜಾ ಕಾರ್ಯ ನೆರವೇರಿಸಿದರು. ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಟ್ರಸ್ಟ್ ಕಾರ್ಯದರ್ಶಿಗಳಾದ ಬಿ.ಎಂ. ನಂಜೇಗೌಡ, ಸಿದ್ದೇಗೌಡ, ಪ್ರಾಂಶುಪಾಲ ಪುಟ್ಟಸ್ವಾಮಿ, ಹನುಮಂತನಗರದ ಆಡಳಿತಾಧಿಕಾರಿ ಸಿ.ಜಗದೀಶ್, ಮಾಯಪ್ಪ, ಸಂಗೀತಾ ಕುಮಾರ್ ಮತ್ತಿತ್ತರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))