ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ - ದೇಶದ 2ನೇ ಅತಿ ಉದ್ದದ ಕೇಬಲ್ ಸೇತುವೆ

| N/A | Published : Jul 14 2025, 05:23 AM IST

brdige 1
ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ - ದೇಶದ 2ನೇ ಅತಿ ಉದ್ದದ ಕೇಬಲ್ ಸೇತುವೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿಯೇ 2ನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶರಾವತಿ ಹಿನ್ನೀರು ಭಾಗದ ನಾಗರಿಕರ ದಶಕಗಳ ಕನಸಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಸೇತುವೆ ಇಂದು ಲೋಕಾರ್ಪಣೆಗೊಳ್ಳಲಿದೆ.

ಶಿವಮೊಗ್ಗ : ದೇಶದಲ್ಲಿಯೇ 2ನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶರಾವತಿ ಹಿನ್ನೀರು ಭಾಗದ ನಾಗರಿಕರ ದಶಕಗಳ ಕನಸಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಸೇತುವೆ ಇಂದು ಲೋಕಾರ್ಪಣೆಗೊಳ್ಳಲಿದೆ.

ರಾಜ್ಯದ ಅತಿ ದೊಡ್ಡ ತೂಗು ಸೇತುವೆ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ. ₹473 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿರಲಿದ್ದಾರೆ. ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸಾಗುವ ಹಾದಿಗೆ ಈ ಸೇತುವೆ ನಿರ್ಮಿಸಲಾಗಿದೆ.

ಬೆಳಗ್ಗೆ 10.30ಕ್ಕೆ ಸೇತುವೆ ಉದ್ಘಾಟನೆಯಾಗಲಿದೆ. ನಂತರ, ಸಚಿವ ನಿತಿನ್ ಗಡ್ಕರಿ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆದು ಮಧ್ಯಾಹ್ನ 12ಕ್ಕೆ ಸಾಗರದ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳದ್ದಾರೆ. ಈ ಸಭೆಯಲ್ಲಿ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಈ ಭಾಗದ ಜನರ ಆರು ದಶಕಗಳ ಹೋರಾಟದ ಕನಸು ನನಸಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣ‌ ಮಾಡುವ ಕುರಿತು ತಮ್ಮ‌ ಬಜೆಟ್ ಭಾಷಣದಲ್ಲಿ‌ ಘೋಷಿಸಿದ್ದರು.‌ ಆದರೆ, ಅವರು ಸಿಎಂ‌ ಆಗಿದ್ದ ಅವಧಿಯಲ್ಲಿ ಅದು ಸಾಧ್ಯವಾಗಿರಲಿಲ್ಲ.‌ ಯಡಿಯೂರಪ್ಪನವರು ಸಂಸದರಾದಾಗ ಕೇಂದ್ರದಿಂದ ಸೇತುವೆ ಮಂಜೂರು ಮಾಡಿಸಿಕೊಂಡು ಬಂದರು. ಸೇತುವೆಗಾಗಿ ಗ್ರಾಮೀಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಯಿತು.‌ ನಂತರ ಸೇತುವೆಗಾಗಿ ₹423.15 ಕೋಟಿಗಳನ್ನು ಬಿಡುಗಡೆ ಮಾಡಲಾಯಿತು.

ಆಗ ಕೇಂದ್ರ ಭೂಸಾರಿಗೆ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರು ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ಧರು‌. ಅಂದು ಶರಾವತಿ ಹಿನ್ನೀರಿನ ಸಿಗಂದೂರು ಭಾಗಕ್ಕೆ ಶಂಕುಸ್ಥಾಪನೆ ಮಾಡಿದ್ದರು.‌ ಈಗ ಅವರೇ ಬಂದು ಈ ಸೇತುವೆ ಉದ್ಘಾಟನೆ ಮಾಡುತ್ತಿರುವುದು ವಿಶೇಷ.

ದೇಶದ 2ನೇ ಅತಿ ಉದ್ದದ ಕೇಬಲ್ ಬ್ರಿಡ್ಜ್‌:

ಗುಜರಾತ್ ನ ಓಖಾ ಮುಖ್ಯಪ್ರದೇಶದಿಂದ ಬೇಯ್ತ್ ಧ್ವಾರ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸುದರ್ಶನ ಸೇತು, ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್‌ ಆಗಿದೆ. ಇದು ₹980 ಕೋಟಿ ವೆಚ್ಚದಲ್ಲಿ 2024ರಲ್ಲಿ ಅನಾವರಣಗೊಂಡಿದ್ದು 2.32 ಕಿ.ಮೀ. ಚತುಷ್ಪಥ ಹೊಂದಿದೆ. ₹423.15 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆ, 2.44 ಕಿ.ಮೀ.ಉದ್ದ (ಇದರಲ್ಲಿ 740 ಮೀಟರ್ ಮಾತ್ರ ಕೇಬಲ್ ಸೇತುವೆ), ದ್ವಿಪಥ ಹೊಂದಿದೆ. 3 ಕಡೆ 1.5 ಮೀಟರ್ ಅಗಲದ ಪುಟ್ ಪಾತ್ ಕೂಡ ಇದೆ. 140 ಮೀಟರ್ ಅಂತರವನ್ನು 4 ಫೌಂಡೇಶನ್ ಮೇಲೆ ಕವರ್ ಮಾಡಲಾಗಿದೆ. ಪ್ರತಿ ಪಿಲ್ಲರ್ ಫೌಂಡೇಶನ್ 177 ಮೀಟರ್ ಅಂತರವಿದೆ. ಈ ಸೇತುವೆಗೆ 30 ಮೀಟರ್ ಅಂತರದಲ್ಲಿ 80 ಪಿಲ್ಲರ್ ಫೌಂಡೇಷನ್ ಹಾಕಬೇಕಿತ್ತು. ಆದರೆ, ಇದನ್ನು 19 ಫಿಲ್ಟರ್ ಫೌಂಡೇಷನ್‌ ನಲ್ಲಿ ಮುಗಿಸಲಾಗಿದೆ. 177, 105, 93 ಮೀಟರ್ ಅಂತರದಲ್ಲಿ ಪಿಲ್ಲರ್‌ಗಳಿವೆ.

ಪ್ರಮುಖ ಮಾರ್ಗಗಳ ಸಂಪರ್ಕ ಕೊಂಡಿ:

ಇದರಿಂದಾಗಿ ಪ್ರಮುಖವಾಗಿ ಶರಾವತಿ ಕಣಿವೆಯ ಜನರ ಸಂಚಾರ ಸುಗಮವಾಗಲಿದೆ. ಜೊತೆಗೆ, ಪ್ರವಾಸೋದ್ಯಮದ ಚಿತ್ರಣ ಬದಲಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಸಾಧ್ಯವಾಗುವುದರಿಂದ ಈ ಭಾಗದ ಆರ್ಥಿಕ ಚಟುವಟಿಕೆ ಸ್ವರೂಪ ಬದಲಾಗುವ ಭರವಸೆ ಮೂಡಿದೆ. ಇದು ರಾಷ್ಟ್ರೀಯ ಹೆದ್ದಾರಿ 17 ಮತ್ತು 206ರ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಸುಮಾರು 25 ಕಿ.ಮೀ.ನಷ್ಟು ದೂರ ಕಡಿಮೆಯಾಗುತ್ತದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಹೋಗಲು ಇನ್ನು ಮುಂದೆ ಲಾಂಚ್ ಅವಲಂಬಿಸುವ ಅಗತ್ಯವಿಲ್ಲ. ಸೇತುವೆ ಬಳಸಿ ಯಾವಾಗ ಬೇಕಾದರೂ ತೆರಳಬಹುದಾಗಿದೆ. ಲಾಂಚ್ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಕಾರ್ಯಾಚರಣೆ ನಡೆಸುತ್ತಿತ್ತು. ಈ ಸೇತುವೆಯಿಂದ ಶಿವಮೊಗ್ಗ ಸಾಗರ ಮತ್ತು ಭಟ್ಕಳ, ಬೈಂದೂರು, ಕೊಲ್ಲೂರುಗಳ ಅಂತರ ಕಡಿಮೆಯಾಗಲಿದೆ. ಮುಂದೆ ಘಟ್ಟದ ಮೇಲೆ-ಕೆಳಗಿನ ಓಡಾಟಕ್ಕೆ ಇದೇ ಮಾರ್ಗವಾಗಲಿದೆ.

ಗುಜರಾತ್ ನ ಓಖಾ ಮುಖ್ಯಪ್ರದೇಶದಿಂದ ಬೇಯ್ತ್ ಧ್ವಾರ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸುದರ್ಶನ ಸೇತು, ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್‌ ಆಗಿದೆ. ಇದು 980 ಕೋಟಿ ರು.ವೆಚ್ಚದಲ್ಲಿ 2024ರಲ್ಲಿ ಅನಾವರಣಗೊಂಡಿದ್ದು 2.32 ಕಿ.ಮೀ. ಚತುಷ್ಪಥ ಹೊಂದಿದೆ. 423.15 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆ, 2.44 ಕಿ.ಮೀ.ಉದ್ದ (ಇದರಲ್ಲಿ 740 ಮೀಟರ್ ಮಾತ್ರ ಕೇಬಲ್ ಸೇತುವೆ), ದ್ವಿಪಥ ಹೊಂದಿದೆ. 3 ಕಡೆ 1.5 ಮೀಟರ್ ಅಗಲದ ಪುಟ್ ಪಾತ್ ಕೂಡ ಇದೆ. 140 ಮೀಟರ್ ಅಂತರವನ್ನು 4 ಫೌಂಡೇಶನ್ ಮೇಲೆ ಕವರ್ ಮಾಡಲಾಗಿದೆ. ಪ್ರತಿ ಪಿಲ್ಲರ್ ಫೌಂಡೇಶನ್ 177 ಮೀಟರ್ ಅಂತರವಿದೆ. ಈ ಸೇತುವೆಗೆ 30 ಮೀಟರ್ ಅಂತರದಲ್ಲಿ 80 ಪಿಲ್ಲರ್ ಫೌಂಡೇಷನ್ ಹಾಕಬೇಕಿತ್ತು. ಆದರೆ, ಇದನ್ನು 19 ಫಿಲ್ಟರ್ ಫೌಂಡೇಷನ್‌ ನಲ್ಲಿ ಮುಗಿಸಲಾಗಿದೆ. 177, 105, 93 ಮೀಟರ್ ಅಂತರದಲ್ಲಿ ಪಿಲ್ಲರ್‌ಗಳಿವೆ.

ಪ್ರಮುಖ ಮಾರ್ಗಗಳ ಸಂಪರ್ಕ ಕೊಂಡಿ:

ಇದರಿಂದಾಗಿ ಪ್ರಮುಖವಾಗಿ ಶರಾವತಿ ಕಣಿವೆಯ ಜನರ ಸಂಚಾರ ಸುಗಮವಾಗಲಿದೆ. ಜೊತೆಗೆ, ಪ್ರವಾಸೋದ್ಯಮದ ಚಿತ್ರಣ ಬದಲಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಸಾಧ್ಯವಾಗುವುದರಿಂದ ಈ ಭಾಗದ ಆರ್ಥಿಕ ಚಟುವಟಿಕೆ ಸ್ವರೂಪ ಬದಲಾಗುವ ಭರವಸೆ ಮೂಡಿದೆ. ಇದು ರಾಷ್ಟ್ರೀಯ ಹೆದ್ದಾರಿ 17 ಮತ್ತು 206ರ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಸುಮಾರು 25 ಕಿ.ಮೀ.ನಷ್ಟು ದೂರ ಕಡಿಮೆಯಾಗುತ್ತದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಹೋಗಲು ಇನ್ನು ಮುಂದೆ ಲಾಂಚ್ ಅವಲಂಬಿಸುವ ಅಗತ್ಯವಿಲ್ಲ. ಸೇತುವೆ ಬಳಸಿ ಯಾವಾಗ ಬೇಕಾದರೂ ತೆರಳಬಹುದಾಗಿದೆ. ಲಾಂಚ್ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಕಾರ್ಯಾಚರಣೆ ನಡೆಸುತ್ತಿತ್ತು. ಈ ಸೇತುವೆಯಿಂದ ಶಿವಮೊಗ್ಗ ಸಾಗರ ಮತ್ತು ಭಟ್ಕಳ, ಬೈಂದೂರು, ಕೊಲ್ಲೂರುಗಳ ಅಂತರ ಕಡಿಮೆಯಾಗಲಿದೆ. ಮುಂದೆ ಘಟ್ಟದ ಮೇಲೆ-ಕೆಳಗಿನ ಓಡಾಟಕ್ಕೆ ಇದೇ ಮಾರ್ಗವಾಗಲಿದೆ.

2.44 ಕಿ.ಮೀ.: ಸೇತುವೆಯ ಉದ್ದ. ವಿಜಯಪುರ ಕೊರ್ತಿ-ಕೊಲ್ಹಾರ (3 ಕಿ.ಮೀ.) ನಂತರ ರಾಜ್ಯದ 2ನೇ ಅತಿ ಉದ್ದದ ಸೇತುವೆ.

740 ಮೀ.: ಕೇಬಲ್‌ ಬ್ರಿಜ್‌ ಉದ್ದ. ಇದು ರಾಜ್ಯದ ಅತಿ ಉದ್ದದ ಒಳನಾಡ ತೂಗು ಸೇತುವೆ. ದೇಶದಲ್ಲೇ 2ನೆಯದ್ದು

473 ಕೋಟಿ ರು.: ಸೇತುವೆ ನಿರ್ಮಾಣಕ್ಕೆ ಆಗಿರುವ ಒಟ್ಟಾರೆ ವೆಚ್ಚ

ಪ್ರಯೋಜನ

ಸಾಗರದಿಂದ ತುಮರಿ ಅಥವಾ ಯಾತ್ರಾ ಸ್ಥಳ ಸಿಗಂದೂರಿಗೆ ತೆರಳಲು ರಸ್ತೆ ಮಾರ್ಗವಾಗಿ 80 ಕಿ.ಮೀ. ಸುತ್ತಿ ಬಳಸಿ ಹೋಗಬೇಕಿತ್ತು. ಇಲ್ಲವೇ ಲಾಂಚ್‌ ಮೂಲಕ ತೆರಳಬೇಕಿತ್ತು. ಹೊಸ ಸೇತುವೆಯಿಂದ ಅಂತರ ಅರ್ಧದಷ್ಟು ತಗ್ಗಲಿದೆ. ಶರಾವತಿ ಹಿನ್ನೀರ ಪ್ರದೇಶದ ಜನರ ದಶಕಗಳ ಬವಣೆ ತಪ್ಪಲಿದೆ.

Read more Articles on