ಮುನಿಶ್ವರ ದೇವಾಲಯದಲ್ಲಿ ನೋಟಿನಲ್ಲಿ ಮೂಡಿದ ಶಿವಲಿಂಗ!

| Published : Feb 27 2025, 12:35 AM IST

ಸಾರಾಂಶ

ಮಡಿಕೇರಿಯ ಮುನೀಶ್ವರ ದೇವಾಲಯದಲ್ಲಿ ವಿವಿಧ ಪೂಜೆಗಳು ನಡೆಯಿತು. ರುದ್ರಾಭಿಷೇಕ, ರುದ್ರಹೋಮ ವಿವಿಧ ಪೂಜೆಗಳು ಜರುಗಿದವು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಾಡಿನಾದ್ಯಂತ ಶಿವರಾತ್ರಿ ಹಬ್ಬದ ಸಂಭ್ರಮ, ಮಂಜಿನ ನಗರಿ ಮಡಿಕೇರಿಯಲ್ಲೂ ಓಂ ನಮಃ ಶಿವಾಯ ಘೋಷ ಮೊಳಗಿತ್ತು. ನಾಡಿನ ವಿವಿಧ ದೇವಾಲಯಗಳಲ್ಲೂ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು ಮಡಿಕೇರಿಯ ಜನತೆ ಕೂಡಾ ದೇವರ ದರ್ಶನ ಪಡೆದುಕೊಂಡರು. ಅದರಲ್ಲೂ ಮುಖ್ಯವಾಗಿ ಮಡಿಕೇರಿಯ ಮುನೀಶ್ವರ ದೇವಾಲಯದಲ್ಲಿ ವಿವಿಧ ಪೂಜೆಗಳು ನೆರವೇರಿದವು. ನೀಲಕಂಠ ನಿಗೆ ಬೆಳಗಿನಿಂದಲೆ ರುದ್ರಾಭಿಷೇಕ, ರುದ್ರಹೋಮ, ಸೇರಿದಂತೆ ವಿವಿಧ ಪೂಜೆಗಳು ಜರುಗಿದವು. ಈ ಪುರಾತನ ದೇವಾಲಯದ ಮತ್ತೊಂದು ವಿಶೇಷ ಅಂದ್ರೆ ನೋಟಿನಲ್ಲಿ ಮೂಡಿದ ಶಿವಲಿಂಗ ಪ್ರತಿವರ್ಷ ಕೂಡ ಇಲ್ಲಿನ ಶಿವಲಿಂಗಕ್ಕೆ ವಿವಿಧ ಅಲಂಕಾರಗಳಿಂದ ಸಿಂಗಾರ ಮಾಡುತ್ತಾರೆ. ನವಧಾನ್ಯಗಳು, ರುದ್ರಾಕ್ಷಿ, ಶಂಖ ಹೀಗೆ ನಾನಾ ರೀತಿಯಲ್ಲಿ ಸಿಂಗಾರ ಮಾಡಲಾಗುತ್ತೆ. ಈ ಬಾರಿ ಸಾವಿರ ನೋಟುಗಳಿಂದ ಶಿವಲಿಂಗ ಮೂಡಿದ್ದು, ಇದನ್ನ ನೋಡಲು ಹೆಚ್ಚಿನ ಭಕ್ತಾದಿಗಳು ಆಗಮಿಸಿ ವೀಕ್ಷಿಸುವುದರೊಂದಿಗೆ ವಿವಿಧ ಪೂಜೆಯಲ್ಲಿ ಭಾಗಿಯಾಗಿದರು.