ಸಾರಾಂಶ
ಊರೂರು ತಿರುಗಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆ ಆರಂಭಿಸಿ, ಪರಿಸರ ಸಂರಕ್ಷಣೆ ಮಾಡಿದ ಪುಣ್ಯಜೀವಿ ಶ್ರೀ ಶಿವರುದ್ರ ಸ್ವಾಮೀಜಿಯವರ ಬದುಕು ಆದರ್ಶವಾದುದು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಕುದೂರಿನಲ್ಲಿ ಶಿವರುದ್ರ ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿವರುದ್ರ ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮಕುದೂರು: ಊರೂರು ತಿರುಗಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆ ಆರಂಭಿಸಿ, ಪರಿಸರ ಸಂರಕ್ಷಣೆ ಮಾಡಿದ ಪುಣ್ಯಜೀವಿ ಶ್ರೀ ಶಿವರುದ್ರ ಸ್ವಾಮೀಜಿಯವರ ಬದುಕು ಆದರ್ಶವಾದುದು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸೋಲೂರು ಹೋಬಳಿ ಕಂಚುಗಲ್ ಬಂಡೇಮಠದಲ್ಲಿ ಏರ್ಪಡಿಸಿದ್ದ ಶ್ರೀ ಶಿವರುದ್ರ ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಗದ್ದುಗೆ ಮಠದ ಶ್ರೀ ಮಹಂತ ಸ್ವಾಮೀಜಿ ಮಾತನಾಡಿ, ಐತಿಹಾಸಿಕ ಹಿನ್ನೆಲೆಯುಳ್ಳ ಕಂಚುಗಲ್ ಬಂಡೇಮಠದ ಹಿರಿಯ ಪರಂಪರೆಗೆ ಒಂದು ಸಾತ್ವಿಕ ಹಾದಿ ತೋರಿಸಿದ್ದಾರೆ. ತಾವರೆಯಂತೆ ಬದುಕು ಕಟ್ಟಿಕೊಳ್ಳುವ ಅಂದರೆ ನೀರಿನಲ್ಲಿದ್ದರೂ ನೀರನ್ನು ಅಂಟಿಸಿಕೊಳ್ಳದಂತೆ ಸನ್ಯಾಸಿ ಪರಂಪರೆ ಸಮಾಜದೊಳಗಿರಬೇಕು. ಕಮಲ ಮತ್ತು ನೀರಿನ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಕಂಚುಗಲ್ ಬಂಡೇಮಠದ ಅಧ್ಯಕ್ಷ ಶ್ರೀ ಮಹಾಲಿಂಗಸ್ವಾಮೀಜಿ ಮಾತನಾಡಿ, ಶ್ರೀ ಮಠದ ಜವಾಬ್ದಾರಿ ನನಗೆ ಗುರುತರವಾಗಿದೆ. ಸಿದ್ದಗಂಗಾ ಶ್ರೀಗಳ ಕೃಪಾಶೀರ್ವಾದ ಮತ್ತು ಭಕ್ತವೃಂದದ ಸಹಕಾರ ಹೆಚ್ಚು ಶಕ್ತಿ ನೀಡಿದೆ. ಹಿರಿಯ ಶ್ರೀಗಳು ಆರಂಭಿಸಿರುವ ಶಾಲೆ, ಸಂಸ್ಕೃತ ಪಾಠಶಾಲೆ, ಮಕ್ಕಳ ವಸತಿ ವಿದ್ಯೆ ಬೆಳವಣಿಗೆಯ ಜವಾಬ್ದಾರಿಯನ್ನು ಸಕ್ರಮವಾಗಿ ನಿರ್ವಹಿಸುತ್ತೇನೆ ಎಂದರು.ಕಂಬಾಳು ಮಠದ ಶ್ರೀ ಚನ್ನವೀರ ಸ್ವಾಮೀಜಿ, ನೆಲಮಂಗಲ ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಗುಮ್ಮಸಂದ್ರದ ಶ್ರೀ ಚಂದ್ರಶೇಖರ ಸ್ವಾಮೀಜಿ, ಪರಮಶಿವಯ್ಯ, ತಟ್ಟೇಕೆರೆ ಶರ್ಮ, ಶಿವಪ್ರಸಾದ್, ಕಾಂತರಾಜ್, ಶಿವರುದ್ರಯ್ಯ, ರಮೇಶ್, ಗಂಗಾಂಬಿಕೆ ಮಲ್ಲಿಕಾರ್ಜುನಯ್ಯ ಇದ್ದರು.