ದೇಶ ಹಾಗೂ ಧರ್ಮದ ಮೇಲಾಗುತ್ತಿರುವ ಆಘಾತಗಳು ಕೇವಲ ಗಡಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅವು ನೇರವಾಗಿ ನಮ್ಮ ಮನೆ ಬಾಗಿಲಿಗೆ ಬಂದು ತಲುಪಿವೆ. ಹಿಂದೂಗಳನ್ನು ಯೋಜನಾಬದ್ಧವಾಗಿ ಗುರಿಯಾಗಿಸಲಾಗುತ್ತಿದೆ. ಇದರ ಮೂಲಕ ದೇಶದ ಭೂ-ರಾಜಕೀಯ ನಕ್ಷೆ ಮತ್ತು ಜನಸಂಖ್ಯಾ ಸ್ಫೋಟದ ಗಣಿತವನ್ನು ಬದಲಾಯಿಸುವ ಭೀಕರ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಜನಜಾಗೃತಿ ಸಮಿತಿ ಪ್ರಮುಖರಾದ ಗುರುರಾಜ್ ಅಭಿಪ್ರಾಯಪಟ್ಟರು.

ಕುಶಾಲನಗರ: ದೇಶ ಹಾಗೂ ಧರ್ಮದ ಮೇಲಾಗುತ್ತಿರುವ ಆಘಾತಗಳು ಕೇವಲ ಗಡಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅವು ನೇರವಾಗಿ ನಮ್ಮ ಮನೆ ಬಾಗಿಲಿಗೆ ಬಂದು ತಲುಪಿವೆ. ಹಿಂದೂಗಳನ್ನು ಯೋಜನಾಬದ್ಧವಾಗಿ ಗುರಿಯಾಗಿಸಲಾಗುತ್ತಿದೆ. ಇದರ ಮೂಲಕ ದೇಶದ ಭೂ-ರಾಜಕೀಯ ನಕ್ಷೆ ಮತ್ತು ಜನಸಂಖ್ಯಾ ಸ್ಫೋಟದ ಗಣಿತವನ್ನು ಬದಲಾಯಿಸುವ ಭೀಕರ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಜನಜಾಗೃತಿ ಸಮಿತಿ ಪ್ರಮುಖರಾದ ಗುರುರಾಜ್ ಅಭಿಪ್ರಾಯಪಟ್ಟರು.

ಕುಶಾಲನಗರದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಅಂಗವಾಗಿ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಮುಖರಾದ ಚಂದನ ಉಪಾಧ್ಯಾಯ ಮಾತನಾಡಿ, ಧರ್ಮದಲ್ಲಿ ತಿಳಿಸಲಾದ ಅನುಷ್ಠಾನಗಳನ್ನು ಹಾಗೂ ಧರ್ಮದ ಕಾರ್ಯಗಳನ್ನು ಪೂರೈಸಲು ಹಿಂದೂಗಳೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು. ಶ್ರೀ ವ್ಯಾಸಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ವಾಚನ, ರಾಮ ರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ, ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸತ್ಕಾರ, ರಾಷ್ಟ್ರಭಕ್ತ ಮತ್ತು ಧರ್ಮನಿಷ್ಠ ಗಣ್ಯರ ಮಾರ್ಗದರ್ಶನ, ಸ್ವರಕ್ಷಣೆಯ ಸುಲಭ ಪದ್ಧತಿಗಳ ಪ್ರತ್ಯಕ್ಷ ಪ್ರದರ್ಶನ ನಡೆಯಿತು. ವಿವಿಧ ವಿಷಯಗಳ ಮೇಲಿನ ಗ್ರಂಥ-ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮ ವಿಷಯದ ಫಲಕ-ಪ್ರದರ್ಶನ ಏರ್ಪಡಿಸಲಾಗಿತ್ತು.