ಶಾರ್ಟ್ ಸರ್ಕ್ಯೂಟ್, ಹೊತ್ತಿ ಉರಿದ ಮನೆ

| Published : Mar 22 2025, 02:01 AM IST

ಸಾರಾಂಶ

ಮನೆಯಲ್ಲಿ ನೀರು ಕಾಯಿಸಲು ಕಾಯಿಲ್ ಹಾಕಲಾಗಿದೆ. ಆದರೆ, ಕಾಯಿಲ್ ತೆಗೆಯುವುದನ್ನೇ ಮರೆತಿದ್ದರಿಂದ ಅದು ಅತಿಯಾಗಿ ಕಾಯ್ದು ಶಾರ್ಟ್ ಸರ್ಕ್ಯೂಟ್ ಆಗಿದೆ ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಕೊಪ್ಪಳ:

ನೀರು ಕಾಯಿಸಲು ಇಟ್ಟಿದ್ದ ಕಾಯಿಲ್ ಸ್ವಿಚ್ ತೆಗೆಯುವುದನ್ನೇ ಮರೆತಿದ್ದರಿಂದ ಶಾರ್ಟ್ ಸರ್ಕ್ಯೂಟ್ ಆಗಿ, ಮನೆಯೇ ಹೊತ್ತಿ ಉರಿದ ಘಟನೆ ಶುಕ್ರವಾರ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದೆ ಇರುವುದರಿಂದ ಪ್ರಾಣ ಹಾನಿಯಾಗಿಲ್ಲ.

ರಾಮಣ್ಣ ದ್ಯಾವನ್ನವರ ಎನ್ನುವವರ ಮನೆಯೆ ಬಹುತೇಕ ಸುಟ್ಟಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಅಕ್ಕಪಕ್ಕದ ಮನೆಗೆ ಆಗುವ ಹಾನಿ ತಪ್ಪಿಸಿದ್ದಾರೆ. ಮನೆಯಲ್ಲಿ ನೀರು ಕಾಯಿಸಲು ಕಾಯಿಲ್ ಹಾಕಲಾಗಿದೆ. ಆದರೆ, ಕಾಯಿಲ್ ತೆಗೆಯುವುದನ್ನೇ ಮರೆತಿದ್ದರಿಂದ ಅದು ಅತಿಯಾಗಿ ಕಾಯ್ದು ಶಾರ್ಟ್ ಸರ್ಕ್ಯೂಟ್ ಆಗಿದೆ ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಮನೆಯಲ್ಲಿ ಸಾಮಗ್ರಿ, ಬಟ್ಟೆ-ಬರೆ ಹಾಗೂ ಮಾಳಿಗೆ ಮನೆಯಾಗಿದ್ದರಿಂದ ಅದೆಲ್ಲವೂ ಹೊತ್ತಿಕೊಂಡು ಬೆಂಕಿಯ ಕೆನ್ನಾಲಿಗೆ ದೊಡ್ಡಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಮನೆಯವರೆಲ್ಲರೂ ಮನೆಯ ಆಚೆ ಹೋಗಿದ್ದರು. ಇದ್ದ ಮಹಿಳೆಯೋರ್ವಳು ಮನೆಯ ಮುಂದೆ ಬಟ್ಟೆ ತೊಳೆಯುವ ವೇಳೆ ಘಟನೆ ನಡೆದಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ.