ಸಾರಾಂಶ
ಹೊಳೆನರಸೀಪುರ ಪಟ್ಟಣದ ಹಾಸನ-ಮೈಸೂರು ಹೆದ್ದಾರಿಯ ದೇವಾಂಗ ಶ್ರೀರಾಮಮಂದಿರ ತಿರುವಿನ ಸಮೀಪದ ದುರ್ಗಾಶ್ರೀ ಟಿಫನ್ ಸೆಂಟರ್‌ನಲ್ಲಿ ಗುರುವಾರ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ನಡೆದಿದೆ. ಗುರುವಾರ ನಡೆದ ಅಗ್ನಿ ದುರಂತದಲ್ಲಿ ಹೊಟೇಲ್ ಸುಟ್ಟು ಕರಕಲಾಗುವ ಜತೆಗೆ ಮಾಳೀಕವೆಂಕಟೇಶ್ ಅವರ ಬದುಕು ಸಹ ಕರಕಲಾಗಿದ್ದು, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಾಲೂಕು ಆಡಳಿತ ಅಗತ್ಯ ನೆರವು ನೀಡಿ, ಅವರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದು ನಾಗರಿಕರು ವಿನಂತಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ಹಾಸನ-ಮೈಸೂರು ಹೆದ್ದಾರಿಯ ದೇವಾಂಗ ಶ್ರೀರಾಮಮಂದಿರ ತಿರುವಿನ ಸಮೀಪದ ದುರ್ಗಾಶ್ರೀ ಟಿಫನ್ ಸೆಂಟರ್‌ನಲ್ಲಿ ಗುರುವಾರ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ನಡೆದಿದೆ.
ಬೆಂಕಿ ಅವಘಡದಲ್ಲಿ ಬೆಳಗ್ಗಿನ ವ್ಯಾಪಾರಕ್ಕೆ ಸಿದ್ಧಪಡಿಸಿಟ್ಟಿದ್ದ ಇಡ್ಲಿ, ಚಣ್ನಿ, ಪಲಾವ್ ಪದಾರ್ಥಗಳು, ಕಾಫಿ ಹಾಗೂ ಟೀ ಪುಡಿ, ಹಾಲು, ಫ್ರಿಡ್ಜ್ ಹಾಗೂ ಪಿಠೋಪಕರಣಗಳು ಸುಟ್ಟು ಕರಕಲಾಗಿದೆ. ಕಾರ್ಮಿಕರಿಗೆ ಸಂಬಳ ನೀಡುವಷ್ಟೂ ಸ್ಥಿತಿವಂತರಲ್ಲದ ದುರ್ಗಾಶ್ರೀ ಟಿಫನ್ ಸೆಂಟರ್‌ನ ಮಾಲೀಕ ವೆಂಕಟೇಶ್ ಅವರು ಜೀವನೋಪಾಯಕ್ಕೆ ಚಿಕ್ಕ ಮಳಿಗೆ ಬಾಡಿಗೆ ಪಡೆದು, ಒಬ್ಬರೇ ಹೋಟೇಲ್ ನಡೆಸುತ್ತಿದ್ದರು. ಜೀವನೋಪಾಯಕ್ಕೆ ನೆರವಾಗಲಿ ಎಂದು ಇದ್ದ ಬದ್ದ ಹಣವನ್ನೆಲ್ಲ ಹೋಟೆಲ್‌ಗೆ ಬಂಡವಾಳ ಹಾಕಿದ್ದರು. ಗುರುವಾರ ನಡೆದ ಅಗ್ನಿ ದುರಂತದಲ್ಲಿ ಹೊಟೇಲ್ ಸುಟ್ಟು ಕರಕಲಾಗುವ ಜತೆಗೆ ವೆಂಕಟೇಶ್ ಅವರ ಬದುಕು ಸಹ ಕರಕಲಾಗಿದ್ದು, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಾಲೂಕು ಆಡಳಿತ ಅಗತ್ಯ ನೆರವು ನೀಡಿ, ಅವರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದು ನಾಗರಿಕರು ವಿನಂತಿಸಿದ್ದಾರೆ.ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸೋಮಶೇಖರ್ ಮಾರ್ಗದರ್ಶನದಲ್ಲಿ ಪ್ರಮುಖ ಅಗ್ನಿಶಾಮಕ ಉಮಾಮಹೇಶ್ ಹಾಗೂ ಅಗ್ನಿಶಾಮಕರಾದ ಜಗದೀಶ್, ರೋಹಿತ್ ಹಿಂಬಾಳೆ ಮತ್ತು ಚಾಲಕ ರಂಗಸ್ವಾಮಿ ಹೆಚ್ಚಿನ ಅನಾಹುತ ನಡೆಯದಂತೆ ಬೆಂಕಿ ನಂದಿಸಿದರು.