ತೋಟಗಾರಿಕೆಗೆ ಡಾ.ಎಂ.ಎಚ್.ಮರೀಗೌಡ ಕೊಡುಗೆ ಅಪಾರ: ಶ್ರೀ ಕೃಷ್ಣ

| Published : Aug 09 2024, 12:37 AM IST

ತೋಟಗಾರಿಕೆಗೆ ಡಾ.ಎಂ.ಎಚ್.ಮರೀಗೌಡ ಕೊಡುಗೆ ಅಪಾರ: ಶ್ರೀ ಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿ ಹೊಸ ಆಯಾಮ ನೀಡಿದ ತೋಟಗಾರಿಕಾ ಪಿತಾಮಹ ಡಾ.ಎಂ.ಎಚ್.ಮರೀಗೌಡರು ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀ ಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿ ಹೊಸ ಆಯಾಮ ನೀಡಿದ ತೋಟಗಾರಿಕಾ ಪಿತಾಮಹ ಡಾ.ಎಂ.ಎಚ್.ಮರೀಗೌಡರು ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀ ಕೃಷ್ಣ ಹೇಳಿದರು.

ಪಟ್ಟಣದ ಆನೆಗುಂದ ತೋಟಾಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ, ಆದರ್ಶ ರೈತಮಿತ್ರಕೂಟ, ರೋಟರಿ ಸಂಸ್ಥೆ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ.ಎಂ.ಎಚ್.ಮರೀಗೌಡ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಅವರು ನಾಡಿನಲ್ಲಿ ತೋಟಗಾರಿಕೆ ಉನ್ನತಿಗೆ ಶ್ರಮಿಸಿದ್ದರು ಎಂದರು.

ಲಂಡನ್ ನಲ್ಲಿ ತೋಟಗಾರಿಕೆಯಲ್ಲಿ ಉನ್ನತ ಶಿಕ್ಷಣ ಪಡೆದರು. ಹಾರ್ವರ್ವ್ ವಿವಿಯಿಂದ ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ವಿದೇಶಗಳಲ್ಲಿ ತೋಟಗಾರಿಕೆ ವಿಷಯದ ಅಧ್ಯಯನ ನಡೆಸಿದರು. ಹೊಸ ಬೆಳೆ ಪರಿಚಯಿಸಿ ರೈತರಿಗೆ ಆದಾಯ ಹೆಚ್ಚುವಂತೆ ಮಾಡಿದರು. ಹೊಸ ಹೊಸ ತೊಟಗಾರಿಕೆ ಬೆಳೆಗಳನ್ನು ಪರಿಚಯಿಸಿದರು. ಗುಣಮಟ್ಟದ ಸಸ್ಯ,ಸಸಿ , ಬೀಜಗಳು ರೈತರಿಗೆ ಸಿಗುವಂತೆ ಮಾಡಿದರು. ತೋಟಗಾರಿಕೆ ಸಮಗ್ರ ಕೃಷಿ ಅಭಿವೃದ್ಧಿಗೆ ಶ್ರಮಿಸಿದರು.

ವೈಜ್ಞಾನಿಕ ತೋಟಗಾರಿಕೆ ಅಭಿವೃದ್ಧಿಗೆ ಒತ್ತು ನೀಡಿದರು. ಒಣ ತೋಟಗಾರಿಕೆ ಪ್ರವರ್ತಕ ಎಂಬ ಹೆಸರನ್ನು ಗಳಿಸಿದ್ದರು. ತೋಟಗಾರಿಕೆ ಇಲಾಖೆಯಲ್ಲಿ ಸುಸಜ್ಜಿತ ಮಣ್ಣು, ನೀರು, ಪ್ರಯೋಗಶಾಲೆ, ಸಸ್ಯ ಸಂರಕ್ಷಣೆ ಪ್ರಯೋಗ ಶಾಲೆ ಸ್ಥಾಪಿಸಿದರು. ತೋಟಗಾರಿಕೆ ತರಬೇತಿ ಕೇಂದ್ರ, ನಿರುದ್ಯೋಗಿಗಳಿಗೆ ತೋಟಗಾರಿಕೆ ನರ್ಸರಿ ಸ್ಥಾಪಿಸಲು ಸಲಹೆ ನೀಡಿದರು. ಹೀಗೆ ತೋಟಗಾರಿಕೆ ಕ್ಷೇತ್ರದಲ್ಲಿ ಹೊಸ ಹೊಸ ವೈಜ್ಞಾನಿಕ ಪ್ರಯೋಗಗಳ ಮೂಲಕ ಆರ್ಥಿಕ ಸುಧಾರಣೆಗೆ ಪ್ರಯತ್ನ ಮಾಡಿ ಮಹತ್ತರ ಕೊಡುಗೆ ನೀಡಿದರೂ ಸಹ ಸನ್ಮಾನ ಪ್ರಶಸ್ತಿಗಳಿಂದ ದೂರ ಉಳಿದಿದ್ದರು ಎಂದರು.

ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬೆಳೆ ತಂತ್ರಾಂಶ 2024 ಕುರಿತ ಮಾಹಿತಿ ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ನಾಗೇಶ್, ಆದರ್ಷ ರೈತ ಮಿತ್ರ ಕೂಟದ ಭರತ್ ಕೆರೆಮನೆ ಮತ್ತಿತರರು ಇದ್ದರು.

8 ಶ್ರೀ ಚಿತ್ರ 2-

ಶೃಂಗೇರಿ ಆನೆಗುಂದ ತೋಟಗಾರಿಕಾ ಇಲಾಖೆ ಆವರಣದಲ್ಲಿ ನಡೆದ ತೋಟಗಾರಿಕಾ ಪಿತಾಮಹಾ ಡಾ.ಎಂ.ಎಚ್.ಮರೀಗೌಡ ಜನ್ಮ ದಿನಾಚರಣೆಯನ್ನು ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಉದ್ಘಾಟಿಸಿದರು. ಶ್ರೀಕೃಷ್ಣ,ನಾಗೇಶ್, ಭರತ್ ಮತ್ತಿತರರು ಇದ್ದರು.