ಎಸ್‌ಜೆಎಂ ಕಲಾ, ವಾಣಿಜ್ಯ ಕಾಲೇಜಿನಲ್ಲಿ ಆಯೋಜನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2025-26ನೇ ಸಾಲಿನ ಅಂತಿಮ ವರ್ಷದ ಬಿಎ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಂಶಿಕ ಕಿರು ಪ್ರಬಂಧ ಮೌಖಿಕ ಪರೀಕ್ಷೆಯನ್ನು ಸೋಮವಾರ ನಡೆಸಲಾಯಿತು.ಮೌಖಿಕ ಪರೀಕ್ಷೆಯ ಬಾಹ್ಯ ಮೌಲ್ಯ ಮಾಪಕರಾಗಿ ಆಗಮಿಸಿದ್ದ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ.ಟಿ.ಗಾಯಿತ್ರಮ್ಮ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಸಂಶೋಧನ ಅಧ್ಯಯನಗಳು ನಡೆಯಲಿ ಎಂದು ಸಲಹೆ ನೀಡಿದರು.
ಡಾ.ರಮೇಶ.ಕೆ ಮಾತನಾಡಿ, ನೀವು ರಚಿಸಿದ ಕಿರು ಪ್ರಬಂಧ ಮುಂದೊಂದು ದಿನ ನೆನಪಿನಲ್ಲಿ ಉಳಿವಂತಹುದು. ಕಿರು ಪ್ರಬಂಧಗಳ ರಚನೆ ಓದಿನ ಪ್ರಾಥಮಿಕ ಮಾಹಿತಿ ನೀಡುತ್ತವೆ. ಬರವಣಿಗೆಯ ಸ್ಪಷ್ಟತೆ, ವಿಷಯದ ಗ್ರಹಿಕೆ ಸಿಗುತ್ತದೆ. ಯಾವುದಾದರೂ ಒಂದು ವಸ್ತು ವಿಷಯದ ಬಗ್ಗೆ ಅಳವಾದ ಜ್ಞಾನ ಪಡೆಯಲು ಸಹಾಯಕವಾಗುತ್ತದೆ, ಮುಂದೆ ಸಂಶೋಧನಾ ಅಧ್ಯಯನಗಳನ್ನು ಮಾಡುವಾಗ ಈ ಪ್ರಬಂಧಗಳು ಅನುಕೂಲವಾಗುತ್ತವೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಎಲ್.ಈಶ್ವರಪ್ಪ ಮಾತನಾಡಿ, ವಿದ್ಯಾರ್ಥಿಗಳು ಈಗಾಗಲೇ ಕೊನೆಯ ಮೆಟ್ಟಿಲ ಮೇಲೆ ನಿಂತಿದ್ದೀರಿ. ಮುಂದೆ ಉನ್ನತವಾದ ಶಿಕ್ಷಣ ಪಡೆದು ಸಮಾಜಕ್ಕೂ ನಿಮ್ಮ ತಂದೆ ತಾಯಿಗೂ ಒಳ್ಳೆಯ ಹೆಸರು ತನ್ನಿ ಎಂದರು. ಕನ್ನಡದ ವಿಭಾಗದ ಮುಖ್ಯಸ್ಥ ಡಾ.ಸಿ.ಟಿ ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದ ಶಿಸ್ತುನ್ನು ಮೈಗೂಡಿಸಿಕೊಳ್ಳಬೇಕು. ಎಷ್ಟೋ ವಿಷಯಗಳು ಅಧ್ಯಯನಗಳು ಅಗದೇ ಅಜ್ಞಾತವಾಗಿವೆ. ಮುಂದಿನ ದಿನಗಳಲ್ಲಿ ಇಂತಹ ನಿರ್ಲಕ್ಷಕ್ಕೆ ಒಳಪಟ್ಟ ಕ್ಷೇತ್ರಗಳಲ್ಲಿ ನಿಮ್ಮ ಸಂಶೋಧನಾ ಅಧ್ಯಯನಗಳು ನಡೆದು ಸಮಾಜಕ್ಕೆ ಸಿಗಲಿ ಎಂದು ಹೇಳಿದರು. ಡಾ. ಸುಧಾರಾಣಿ, ಡಾ ಪುಷ್ಪ.ಕೆ ಉಪಸ್ಥಿತರಿದ್ದರು.