ಕೊಲಕಾಡಿ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ರಾಮನವಮಿ ಉತ್ಸವ

| Published : Apr 18 2024, 02:16 AM IST

ಕೊಲಕಾಡಿ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ರಾಮನವಮಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಧಾನ ಅರ್ಚಕ ಸಂತೋಷ್ ಶಾಂತಿ ಕುದ್ರೋಳಿ ಹಾಗೂ ಅರ್ಚಕ ಪ್ರದೀಪ್ ಸಾಲ್ಯಾನ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಕಾಕಡ ಆರತಿ ಹಾಗೂ ಪೂಜೆ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ ಮೂಲ್ಕಿ ಸಮೀಪದ ಕೊಲಕಾಡಿ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ 13ನೇ ವರ್ಷದ ಶ್ರೀ ರಾಮನವಮಿ ಉತ್ಸವವು ವೇ.ಮೂ. ಕೊಲಕಾಡಿ ಶ್ರೀ ವಾದಿರಾಜ ಉಪಾಧ್ಯಾಯ ಮಾರ್ಗದರ್ಶನದಲ್ಲಿ ನಡೆಯಿತು

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಧಾನ ಅರ್ಚಕ ಸಂತೋಷ್ ಶಾಂತಿ ಕುದ್ರೋಳಿ ಹಾಗೂ ಅರ್ಚಕ ಪ್ರದೀಪ್ ಸಾಲ್ಯಾನ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಕಾಕಡ ಆರತಿ ಹಾಗೂ ಪೂಜೆ ನಡೆಯಿತು. ಬೆಳಗ್ಗೆ ಉದ್ಯಮಿ ಕಮಲಾಕ್ಷ ಬಡಗುಹಿತ್ಲು ದೀಪಾರಾಧನೆ ಹಾಗೂ ಭಜನಾ ಜ್ಯೋತಿಗೆ ಚಾಲನೆ ನೀಡಿದರು. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಗುರುಪಾದುಕಾ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ, ಪಾಲಕಿ ಉತ್ಸವ, ರಾತ್ರಿ ಶೇಜಾರತಿ ನಡೆಯಿತು. ಈ ಸಂದರ್ಭ ಅತಿಕಾರಿಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಮಂದಿರದ ಗೌರವಾಧ್ಯಕ್ಷ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ,ಅಧ್ಯಕ್ಷ ಈಶ್ವರ ಎಲ್. ಶೆಟ್ಟಿ, ಮುನ್ನಾಲಯ ಗುತ್ತು, ಕೋಶಾಧಿಕಾರಿ ರಂಗನಾಥ ಶೆಟ್ಟಿ, ಕಾರ್ಯದರ್ಶಿ ಶ್ರೀಧರ ಕೋಟ್ಯಾನ್, ಮಾಲತಿ ಸುವರ್ಣ, ಜಯಶ್ರೀ ಶ್ರೀಧರ ಕೋಟ್ಯಾನ್, ಚಿದಾನಂದ ಕೊಲಕಾಡಿ ಮತ್ತಿತರರು ಉಪಸ್ಥಿತರಿದ್ದರು. ಭಾಸ್ಕರ ಕಾಂಚನ್‌ ಬಳಗದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು.

ಚಿತ್ರಾಪು ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ರಾಮನವಮಿ ಉತ್ಸವ

ಮೂಲ್ಕಿ: ಮೂಲ್ಕಿಯ ಚಿತ್ರಾಪುವಿನ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ ಸಂದರ್ಭದಲ್ಲಿ 76ನೇ ಮಂಗಲೋತ್ಸವ ಹಾಗೂ 5ನೇ ಏಕಾಹ ಭಜನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಹೊಯ್ಗೆಗುಡ್ಡೆ ವೇದಮೂರ್ತಿ ರಂಗನಾಥ ಭಟ್ ಪೌರೋಹಿತ್ಯದಲ್ಲಿ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ಗಣ ಹೋಮ, ಶ್ರೀರಾಮ ದೇವರಿಗೆ ಕಲಶಾಭಿಷೇಕ, ಮಹಾಪೂಜೆ ನಡೆಯಿತು.

ಬಳಿಕ ಚಿತ್ರಾಪು ಮೊಗವೀರ ಸಭಾ ಅಧ್ಯಕ್ಷ ಪ್ರವೀಣ್ ಕರ್ಕೇರ ರವರು ದೀಪ ಪ್ರಜ್ವಲನೆ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.