ಜಾತಿಗಣತಿ ವಿರೋಧಿಸುವುದು ಸರಿಯಲ್ಲ

| Published : Dec 01 2023, 12:45 AM IST

ಜಾತಿಗಣತಿ ವಿರೋಧಿಸುವುದು ಸರಿಯಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿಗಣತಿ ವಿರೋಧಿಸುವುದು ಸರಿಯಲ್ಲ

ಕನ್ನಡಪ್ರಭ ವಾರ್ತೆ ಜಮಖಂಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಕನಕದಾಸ ಇದ್ದಂತೆ. ಅವರು ರಾಜ್ಯದ ಸರ್ವ ಜನಾಂಗದ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ ಹೇಳಿದರು.

ನಗರದ ಭಕ್ತ ಕನಕದಾಸ ಶಾಲೆ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ, ಶ್ರೀ ಭಕ್ತ ಕನಕದಾಸ ವಿದ್ಯಾವರ್ಧಕ ಸಂಘ, ತಾಲೂಕು ಕುರುಬ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕನಕದಾಸರ 536ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಬಾರಿ ಅಧಿಕಾರಕ್ಕೆ ಬಂದರೆ ಸಾಕು, ಕೋಟಿ ಕೋಟಿ ಹಣ ಮಾಡಿಕೊಳ್ಳುವವರು ಇದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಯಾದರೂ ಕೂಡ ಅವರ ಖಾತೆಯಲ್ಲಿ ಹಣ ಇಲ್ಲ. ಅವರು ಅಹಿಂದ ಜನರ ಅಭಿವೃದ್ಧಿಗಾಗಿ ಕಾರ್ಯ ಮಾಡುತ್ತಿದ್ದಾರೆ ಎಂದರು.

ಜಾತಿ ಗಣತಿ ವರದಿಯಿಂದ ರಾಜ್ಯದಲ್ಲಿ ಯಾವ ಸಮಾಜದವರು ಎಷ್ಟು ಜನ ಇದ್ದಾರೆ, ಅವರ ಶೈಕ್ಷಣಿಕ, ಆರ್ಥಿಕವಾಗಿ ಹೇಗೆ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹಿಂದುಳಿದವರ ಅಭಿವೃದ್ಧಿಗೆ ಇದು ಪೂರಕವಾಗಿದೆ. ಆದರೆ ಕೆಲವರು ಇದನ್ನು ವಿರೋಧ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿ, ಮುಖ್ಯಮಂತ್ರಿ ಅಹಿಂದ ನಾಯಕ, ತುಳಿತಕ್ಕೆ ಒಳಗಾದವರ ಅಭಿವೃದ್ಧಿ ಮಾಡಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಸಂಗಮೇಶ ಮಟೋಳಿ ಉಪನ್ಯಾಸ ನೀಡಿದರು. ರುದ್ರಪೇಠದ ಕೃಷ್ಣಾನಂದ ಶ್ರೀಗಳು, ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಕರಿಸಿದ್ದೇಶ್ವರ ಗದ್ದುಗೆ ಪೂಜಾರಿ ಸಾನ್ನಿಧ್ಯವಹಿಸಿದ್ದರು. ವೇದಿಕೆಯಲ್ಲಿ ಅಲ್ಪಸಂಖ್ಯಾತರ ಘಟಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಫೀಕ್‌ ಬಾರಿಗಡ್ಡಿ, ರವಿ ಬಬಲೇಶ್ವರ, ಹೆಸ್ಕಾಂ ಇಇ ಸಂತೋಷ ಪಾಟೀಲ, ಬಿಆರ್‌ಸಿಒ ರಮೇಶ ಅವಟಿ, ಭೀಮಶಿ ನಡುವಿನಮನಿ, ಅರ್ಜುನ ದಳವಾಯಿ, ಎನ್.ಬಿ.ಗಸ್ತಿ, ಎಲ್.ಎಸ್.ಜೋಗಿ, ಧರ್ಮಣ್ಣ ಪಡಸಲಗಿ, ಕಾಸಪ್ಪ ಸನದಿ, ಸಂಜು ಕುರಣಿ, ಎಸ್.ಡಿ.ದಳವಾಯಿ, ಡಾ.ಪಾರ್ವತಿ ದೇಮನ್ನವರ, ಡಾ.ಜ್ಯೋತಿ ಜಡಿಪೂಜಾರಿ, ಡಾ.ವಿವೇಕಾನಂದ ದಳವಾಯಿ, ಸಚಿನ ಸನದಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲು ಮೆಳಿ, ಸಿದ್ದಪ್ಪ ಎಣ್ಣಿ, ಈಶ್ವರ ವಾಳೆನ್ನವರ, ನಾಗಪ್ಪ ಸನದಿ, ಸುಮಿತ್ರಾ ಗುಳಬಾಳ, ಇತರರು ಇದ್ದರು.

ಸರಸ್ವತಿ ಸಬರದ ನಾಡಗೀತೆ ಹಾಡಿದರು, ತಹಸೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿದರು. ಮಂಜು ದನಗರ ನಿರೂಪಿಸಿದರು. ಪುಂಡಲೀಕ ಸಲಗರ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಅಮೋಘ ಸಿದ್ದೇಶ್ವರ ದೇವಸ್ಥಾನ ಆವರಣದಿಂದ ಭಕ್ತ ಕನಕದಾಸ ಶಾಲೆವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಸೇರಿದಂತೆ ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆ ನಡೆಯಿತು. 500ಕ್ಕೂ ಅಧಿಕ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಜೆಕೆಡಿ 30-1