ಸಾರಾಂಶ
ಕರಡಿ ಮುಂಗಾಲುಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಶಕ್ತಿ ಇಲ್ಲವಾಗಿದೆ. ಅಲ್ಲಲ್ಲಿ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಅಸ್ವಸ್ಥವಾದ ಕರಡಿ ಇರುವ ಸ್ಥಳದ ಸುತ್ತಲೂ ಬೇಲಿಹಾಕಿ ಅರವಳಿಕೆ ನೀಡಿದ್ದಾರೆ. ನಂತರ ಅದನ್ನು ರಕ್ಷಣಾ ಬೋನಿನಲ್ಲಿರಿಸಿ ಜಿಯೋಲೋಜಿಕಲ್ ಪಾರ್ಕ್‌ಗೆ ಕಳುಹಿಸಲಾಗಿದೆ.
ಕನಕಗಿರಿ:
ಅಸ್ವಸ್ಥಗೊಂಡಿರುವ ಮೂರು ವರ್ಷದ ಕರಡಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕಮಲಾಪುರದ ಅಟಲ್ ಬಿಹಾರಿ ಜಿಯೋಲೋಜಿಕಲ್ ಪಾರ್ಕ್‌ಗೆ ಕಳಿಸಿದ್ದಾರೆ.ತಾಲೂಕಿನ ಚಿಕ್ಕವಡ್ರಕಲ್ ಗುಡ್ಡದ ಪ್ರದೇಶದ ಪೋದೆಯಲ್ಲಿ ಕರಡಿ ಅಸ್ವಸ್ಥವಾಗಿರುವ ಕುರಿತು ಕುರಿಗಾಯಿಗಳು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅಧಿಕಾರಿ ಸುಭಾಶ್ಚಂದ್ರ ನಾಯಕ ನೇತೃತ್ವದ ತಂಡ ಭೇಟಿ ನೀಡಿ ಕರಡಿ ಸಂರಕ್ಷಿಸಿದೆ. ಮುಂಗಾಲುಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಶಕ್ತಿ ಇಲ್ಲವಾಗಿದೆ. ಅಲ್ಲಲ್ಲಿ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವ ಆಗಿದೆ ವೈದ್ಯರಾದ ಪ್ರಕೃತಿ ತಿಳಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ಅಸ್ವಸ್ಥವಾದ ಕರಡಿ ಇರುವ ಸ್ಥಳದ ಸುತ್ತಲೂ ಬೇಲಿಹಾಕಿ ಅರವಳಿಕೆ ನೀಡಿದ್ದಾರೆ. ನಂತರ ಅದನ್ನು ರಕ್ಷಣಾ ಬೋನಿನಲ್ಲಿರಿಸಿ ಜಿಯೋಲೋಜಿಕಲ್ ಪಾರ್ಕ್‌ಗೆ ಕಳುಹಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದು ಚೇತರಿಕೆಗೆ ಕೆಲ ದಿನ ಬೇಕಾಗುತ್ತದೆ. ಆದರೆ, ಮುಂಗಾಲುಗಳಲ್ಲಿ ಶಕ್ತಿ ಕಳೆದುಕೊಂಡಿದ್ದರಿಂದ ಬದುಕುಳಿವುದು ಅನುಮಾನವಿದೆ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ವೈದ್ಯರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಉಪವಲಯದ ಅರಣ್ಯಾಧಿಕಾರಿ ಚಂದ್ರಶೇಖರ ರಾಠೋಡ, ಅರಣ್ಯ ಇಲಾಖೆಯ ಗುಂಡಪ್ಪ, ಬಸವರಾಜ, ಗ್ಯಾನನಗೌಡ, ಶಿವಾನಂದ, ಮಂಜುನಾಥ, ಈರಪ್ಪ ಹಾದಿಮನಿ, ಶ್ರೀನಿವಾಸ, ಅಂಜಲಿ ಸೇರಿದಂತೆ ಇತರರಿದ್ದರು.