ಸಾರಾಂಶ
ಕೊಳ್ಳೇಗಾಲದ ಬಸ್ತೀಪುರ ಬಡಾವಣೆಯಲ್ಲಿ ಗುರುವಾರ ಬೆಳಗ್ಗೆ ಸಿದ್ದಪ್ಪಾಜಿ ದೇವಾಲಯಕ್ಕೆ ಭೇಟಿ ನೀಡಿದ್ದ ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಇಂದಿನಿಂದ ಎರಡು ದಿನ ಕಾಲ ನಡೆಯುವ ಸಿದ್ದಪ್ಪಾಜಿ ಕೊಂಡೋತ್ಸವಕ್ಕೆ ಗುರುವಾರ ಅದ್ಧೂರಿಯಾಗಿ ಚಾಲನೆ ನೀಡಿದರು.ಬಡಾವಣೆಯ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಮೂರು ಕೋಮಿನ ಯಜಮಾನರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಸ್ತೀಪುರ ಬಡಾವಣೆಯ ಹೊರವಲಯದ ಶನೇಶ್ವರ ದೇವಾಲಯದ ಬಳಿ ಮಧ್ಯಾಹ್ನ ಕುರುಬನಕಟ್ಟೆ ಕಂಡಾಯಗಳಿಗೆ ಹೂಹೊಂಬಾಳೆ ಧರಿಸಿ ಬಳಿಕ ಮೆರವಣಿಗೆಯ ಮೂಲಕ ದೇವಸ್ಥಾನದಲ್ಲಿ ಭಕ್ತರ ಹಾಗೂ ಯಜಮಾನರ ಸಮ್ಮುಖದಲ್ಲಿ ತಂದಿರಿಸಲಾಯಿತು.
ಬಳಿಕ ಬಡಾವಣೆಯ ಹೊರಭಾಗದ ಎರಡು ಕಡೆಗಳಲ್ಲಿ ಧೂಳುಮರಿ ಪೂಜೆ ನಡೆಸಿ ನಂತರ ರಾತ್ರಿ 8 ಗಂಟೆ ಕೊಂಡೋತ್ಸವಕ್ಕೆ ಅಗ್ನಿಸ್ಪರ್ಶ ಮಾಡಿದರು. ನಾಳೆ ಬೆಳಿಗ್ಗೆ 6 ಗಂಟೆಗೆ ಕುರುಬನ ಕಟ್ಟೆ ತಂಬಡಿಗಳಾದ ಮಹಲಿಂಗ, ಗಂಗಮಲ್ಲ, ಗಿರೀಶ, ನಿಂಗರಾಜು, ರಾಜಣ್ಣ, ಕುಮಾರ ರವರು ಕಂಡಾಯವನ್ನು ಹೊತ್ತು ಕೊಂಡವನ್ನು ಹಾಯಲಿದ್ದಾರೆ. ಗುರುವಾರ ಬೆಳಗ್ಗೆ ಸಿದ್ದಪ್ಪಾಜಿ ದೇವಾಲಯಕ್ಕೆ ಭೇಟಿ ನೀಡಿದ್ದ ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರನ್ನು ಯಜಮಾನರು ಸನ್ಮಾನಿಸಿದರು.ಕೊಂಡೋತ್ಸವದ ಹಿನ್ನಲೆ ಸಿದ್ದಪ್ಪಾಜಿ ದೇವಸ್ಥಾನ ಹಾಗೂ ಬಡಾವಣೆಯಲ್ಲಿ ಹಸಿರು ತೋರಣ, ಹೂವಿನ ಅಲಂಕಾರ ಹಾಗೂ ವಿದ್ಯುತ್ ದೀಪಾಂಲಕರ ಮಾಡಲಾಗಿದೆ. ದೇವಸ್ಥಾನದ ಪೂಜಾಕೈಕರ್ಯವನ್ನು ಪೂಜಾರಿ ರಾಚೇಗೌಡ ನಡೆಸಿಕೊಟ್ಟರು.
ಕೊಂಡೋತ್ಸವದಲ್ಲಿ ದಲಿತ ಜನಾಂಗದ ಯಜಮಾನರು ಪುಟ್ಟಮಾದಯ್ಯ, ಸಿದ್ದರಾಜು , ಶಿವಕುಮಾರ್, ಟಿ.ನಂಜಯ್ಯ, ಸೋಮಣ್ಣ, ಮಾದೇಶ, ಮುದ್ದುಮಾದ, ಮಾದೇಶ, ಸಿದ್ದರಾಜು ಬತ್ತಯ್ಯ, ಮಹೇಶ, ನಾಯಕ ಜನಾಂಗದ ಯಜಮಾನರು ಸಿದ್ದನಾಯಕ, ಗೋವಿಂದನಾಯಕ, ವೆಂಕಟೇಶ ನಾಯಕ, ಶಿವಕುಮಾರ್, ಬಸವರಾಜು ನಾಯಕ, ನಂಜನಾಯಕ, ಕುರುಬ ಜನಾಂಗದ ಯಜಮಾನರು ಬೋಳೆಗೌಡ, ಲಿಂಗೇಗೌಡ, ಶಿವಣ್ಣೇಗೌಡ, ತಮ್ಮಯ್ಯಗೌಡ, ಪುಟ್ಟೇಗೌಡ, ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ಬಸ್ತೀಪುರ ರವಿ, ಮುಖಂಡರಾದ ಮಲ್ಲಿಕಾರ್ಜುನ, ಹಾಗೂ ಯುವಕರು, ಗ್ರಾಮಸ್ಥರು ಮುಖಂಡರು ಹಾಗೂ ಇತರರು ಇದ್ದರು.