ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಂಬಿಕೆದ್ರೋಹ, ವಿಶ್ವಾಸ ದ್ರೋಹಕ್ಕೆ ಮತ್ತೊಂದು ಹೆಸರು ಸಿಎಂ ಸಿದ್ದರಾಮಯ್ಯ. ಖಜಾನೆ ಲೂಟಿ ಮಾಡೋ ಕಾಯಕದಲ್ಲಿ ಸರ್ಕಾರ ಮಗ್ನವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ವಾರಗಟ್ಟಲೇ, ಇಲ್ಲಿಗೆ ಬಂದು ಪ್ರಚಾರ ಮಾಡುತ್ತಿರುವುದು ಕೇವಲ ಅವರ ಸಮಾಜದ ವ್ಯಕ್ತಿ ಇಲ್ಲಿ ಸ್ಪರ್ಧೆ ಮಾಡಿದ್ದಾರಂತ, ಹೀಗಾಗಿ ಇಲ್ಲಿಗೆ ಬಂದು ಪ್ರಚಾರ ಮಾಡ್ತಿದ್ದಾರೆ. ಆದರೆ ನಮ್ಮ ಅಭ್ಯರ್ಥಿ ಭಾರೀ ಅಂತರದಿಂದ ಗೆಲ್ಲುವವರಿದ್ದಾರೆ ಎಂದು ವಿಸ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವ್ರಿಗೆ ಭರವಸೆ ಕೊಡುತ್ತೇನೆ. ನಿಮ್ಮ ಕಾರ್ಯಕರ್ತರ ಉತ್ಸಹದಿಂದ ದಾವಣಗೆರೆ ಹಾಗೂ ಬಾಗಲಕೋಟೆ ಎರಡೂ ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಜನರಿಂದಲೂ ಒಳ್ಳೆಯ ಸ್ಪಂದನೆ ಸಿಗುತ್ತಿದೆ, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬಂದು ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರೋದು ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದು ಹೇಳಿದರು.ಸೂಟ್ಕೇಸ್ ನಲ್ಲಿ ಹಣ ತುಂಬಿಕೊಂಡು, ಹಣ ಹೆಂಡದ ಬಲದ ಮೇಲೆ ಚುನಾವಣೆ ಗೆಲ್ತೀವಿ ಎಂದು ತಿಳ್ಕೊಂಡಿದ್ದಾರೆ. ನಿಮ್ಮ ಹಣ, ಹೆಂಡಕ್ಕೆ ಈ ಜನರು ಸೊಪ್ಪು ಹಾಕಲ್ಲ, ಜನ ನಮಗೆ ಓಟ್ ಹಾಕುವ ಮೂಲಕ ಕಾಂಗ್ರೆಸ್‌ಗೆ ಪಾಠ ಕಲಿಸುತ್ತಾರೆ ಎಂದರು.