ಜಾತಿ, ಮತ ನೋಡದೆ ಎಲ್ಲರಿಗೂ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರು ಶಿಕ್ಷಣ, ಅನ್ನ ದಾಸೋಹ ನೀಡಿದ್ದಾರೆ. ನಿಜವಾದ ವಿಶ್ವಗುರು ಅವರು. ಅವರಿಗೆ ಭಾರತ ರತ್ನ ನೀಡಬೇಕು. ಆದರೆ ಭಾರತ ರತ್ನಕ್ಕಿಂತ ಮಿಗಿಲಾದ ಜೀವನವನ್ನು ಸಾಗಿಸಿ, ಸಾಧಿಸಿ ಅವರು ಹೋಗಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರು ನಿಜವಾದ ವಿಶ್ವಗುರು ಇಂದು ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಬಣ್ಣಿಸಿದರು.ಜೆ.ಪಿ. ನಗರದ ಶಿವಶಕ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಟ್ರಸ್ಟ್ ನಗರದ ಶ್ರೀ ರಾಜೇಂದ್ರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಥೆಯ 2ನೇ ವಾರ್ಷಿಕೋತ್ಸವ, ಬಸವ, ಅಕ್ಕಮಹಾದೇವಿ ಹಾಗೂ ಶಿವಕುಮಾರ ಸ್ವಾಮೀಜಿ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಮತ ನೋಡದೆ ಎಲ್ಲರಿಗೂ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರು ಶಿಕ್ಷಣ, ಅನ್ನ ದಾಸೋಹ ನೀಡಿದ್ದಾರೆ. ನಿಜವಾದ ವಿಶ್ವಗುರು ಅವರು. ಅವರಿಗೆ ಭಾರತ ರತ್ನ ನೀಡಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಆದರೆ ಭಾರತ ರತ್ನಕ್ಕಿಂತ ಮಿಗಿಲಾದ ಜೀವನವನ್ನು ಸಾಗಿಸಿ, ಸಾಧಿಸಿ ಅವರು ಹೋಗಿದ್ದಾರೆ ಎಂದರು.ಬಸವಣ್ಣನವರು ಸಮಾಜದಲ್ಲಿದ್ದ ತಪ್ಪುಗಳನ್ನು ತಿದ್ದಿ ಸಮ ಸಮಾಜ ನಿರ್ಮಿಸಲು ಯತ್ನಿಸಿದರು. ಬಸವಣ್ಣ ಅವರ ಚಿಂತನೆಗಳು ಸರ್ವರೂ ಒಪ್ಪುವಂತಿದೆ. ಬಸವಣ್ಣ ನಮ್ಮ ನಾಡಿನವರು ಎಂಬುದು ಹೆಮ್ಮೆಯ ವಿಚಾರ. 12ನೇ ಶತಮಾನದ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಮೂಢನಂಬಿಕೆ, ಮಡಿವಂತಿಕೆ ತೀವ್ರವಾಗಿದ್ದ ವೇಳೆ ಜಗಜ್ಯೋತಿ ಬಸವಣ್ಣ ಅವರು ಎಲ್ಲಾ ವರ್ಗದ ದಾರ್ಶನಿಕರಿರನ್ನು ಒಟ್ಟುಗೂಡಿಸಿ ಸಮಾಜ ಪರಿವರ್ತಿಸಲು ಪ್ರಯತ್ನಿಸಿದ್ದಾಗಿ ಅವರು ಹೇಳಿದರು.
ಶ್ರೀ ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಂಜನಗೂಡಿನ ಅನುರಾಗ ಮಕ್ಕಳ ಮನೆ ಅಧ್ಯಕ್ಷ ಸೋಮಶೇಖರಮೂರ್ತಿ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಣುಕಾರಾಜು, ಸಮಾಜ ಸೇವಕಿ ಶಾರದಾ ಸತ್ಯನಾರಾಯಣ ಮೊದಲಾದವರು ಇದ್ದರು.ಊಟಿಯಲ್ಲಿ ಜೀವನೋತ್ಸಾಹ ಶಿಬಿರಕನ್ನಡಪ್ರಭ ವಾರ್ತೆ ಮೈಸೂರು
ಸುತ್ತೂರು ಶ್ರೀಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ವತಿಯಿಂದ ಊಟಿಯಲ್ಲಿ ಜೀವನೋತ್ಸಾಹ ಶಿಬಿರವನ್ನು ಮೇ 6 ರಿಂದ 11ರವರೆಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ.ನಿವೃತ್ತ ಐಜಿಪಿ ಡಿ.ಎನ್. ಮುನಿಕೃಷ್ಣ ಅವರು ಶಿಬಿರ ಉದ್ಘಾಟಿಸುವರು. ಭಾರತೀಯ ಸೇನೆಯ ಸೇನಾ ಪದಕ ಪುರಸ್ಕೃತ ಪಿ.ಎಲ್. ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ. ವಿರೂಪಾಕ್ಷ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.ಶಿಬಿರದಲ್ಲಿ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಮಹೇಶ್ ಮಾಶಾಳ, ಡಾ.ಹಿ.ಚಿ. ಬೋರಲಿಂಗಯ್ಯ, ವಿಶ್ವನಾಥ್ ಎಂ. ಹಿರೇಮಠ, ಎಂ.ಡಿ. ಶರತ್, ಡಾ. ಶರತ್ ಚಂದ್ರ ಸ್ವಾಮೀಜಿ, ಡಾ. ರಾಹುಲ್ ದೇವರಾಜ್, ವಿಶ್ವೇಶ್ವರ ಭಟ್, ಕುಸುಮ ಆಯರಹಳ್ಳಿ, ಶೋಭಾ ಮಳವಳ್ಳಿ ಮತ್ತು ಬೇಲೂರು ರಾಮಮೂರ್ತಿ ಅವರು ಕ್ರಮವಾಗಿ ಶಿವಯೋಗ, ಸಹನಶೀಲತೆ, ಜಾನಪದ ಬದುಕು, ಕೂಡುಕುಟುಂಬ, ಅಂತರ್ಜಾಲದ ಆತಂಕಗಳು, ಲೌಕಿಕದಿಂದ ಲೌಕಿಕದೆಡೆಗೆ, ಭಾರತೀಯ ಸಂಸ್ಕೃತಿ, ಬದುಕು ಹೇಗಿದ್ದರೆಚೆಂದ, ವಚನ ಸಂಸ್ಕೃತಿ, ನೈಜ ಸುದ್ದಿಗಳು ಮತ್ತು ನಕ್ಕರೆ ಸ್ವರ್ಗ ವಿಷಯ ಕುರಿತು ಉಪನ್ಯಾಸ ನೀಡುವರು. 11 ರಂದು ಶಿಬಿರದ ಸಮಾರೋಪ ಏರ್ಪಡಿಸಲಾಗಿದೆ.ಶಿಬಿರದಲ್ಲಿ ಪ್ರತಿದಿನ ಸಾಮೂಹಿಕ ಪ್ರಾರ್ಥನೆ, ಯೋಗ ಮತ್ತು ಧ್ಯಾನ, ದೇಸಿ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.