ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಸರ್ಕಾರ ಎಟಿಎಂ ಇದ್ದಂತೆ

| Published : Mar 08 2024, 01:54 AM IST

ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಸರ್ಕಾರ ಎಟಿಎಂ ಇದ್ದಂತೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಟಿಎಂ ಇದ್ದಂತೆ. ಭ್ರಷ್ಟಾಚಾರದ ಮೂಲಕಗಳಿಸಲಾದ ಹಣ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಕಳಿಸುತ್ತಿದ್ದಾರೆ.

ಚಿತ್ರದುರ್ಗ: ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಟಿಎಂ ಇದ್ದಂತೆ. ಭ್ರಷ್ಟಾಚಾರದ ಮೂಲಕಗಳಿಸಲಾದ ಹಣ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಕಳಿಸುತ್ತಿದ್ದಾರೆ. ಅವರಿಗೆ ಕರ್ನಾಟಕದಿಂದಲೇ ಅತೀ ಹೆಚ್ಚು ಹಣ ಸಂದಾಯ ಆಗುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಆರೋಪಿಸಿದ್ದಾರೆ.

ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಪ್ರಮುಖರ ಸಮಾವೇಶ ಹಾಗೂ ಪ್ರಬುದ್ಧರ ಸಭೆಯ ಉದ್ಘಾಟಿಸಿ ಮಾತನಾಡಿದ ಅವರು 10 ವರ್ಷದ ಹಿಂದೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ ಸರ್ಕಾರ ಅಂದಿನಿಂದ ಇಂದಿನವರೆಗೆ ಎಲ್ಲ ಗ್ಯಾರೆಂಟಿಗಳ ಶೇ.100ರಷ್ಟು ಈಡೇರಿಸಿದ್ದಾರೆ. ಕಾಂಗ್ರೆಸ್ ಒಂದೇ ಒಂದು ಗ್ಯಾರಂಟಿ ಪೂರ್ಣ ಪ್ರಮಾಣದಲ್ಲಿ ಈಡೇರಿಸಿಲ್ಲ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ 500ಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನ್ಯಾಯ ಕೊಡಲು ಸಿದ್ದರಾಮಯ್ಯ ಅವರಿಗೆ ಆಗಿಲ್ಲ. ಆದರೆ ಪ್ರಧಾನಿ ಮೋದಿ ಅವರ ಹಣ ನೇರವಾಗಿ ರೈತರ ಖಾತೆಗೆ ಬರುತ್ತಿದೆ ಎಂದರು.

ಮಹಿಳೆಯರಿಗೆ ಮೀಸಲು ಕಲ್ಪಿಸಲು ಪ್ರಧಾನಿ ಮುಂದಾಗಿದ್ದು ಅವರ ಸಬಲೀಕರಣಕ್ಕೆ ಮತ್ತೊಮ್ಮೆಮೋದಿ ಪ್ರಧಾನಿ ಆಗಬೇಕಿದೆ. ಹೆಣ್ಣು ಗಂಡು ಒಂದೇ ಎಂದು ಸಾರಲು ಮೋದಿ ಯೋಜನೆಗಳ ರೂಪಿಸಿದ್ದಾರೆ. ಪ್ರತಿ ಮನೆಗೆ ಕುಡಿವ ನೀರು, ವಿದ್ಯುತ್ ಸೌಲಭ್ಯ, ಅಡುಗೆ ಅನಿಲ ಪೂರೈಕೆ ಮಾಡಿದ್ದಾೆ. ಮುದ್ರಾ ಯೋಜನೆಯಿಂದ ಸಣ್ಣ ಕೈಗಾರಿಕೆ ಸಾಲ ಸೌಲಭ್ಯ ಪಡೆಯಲು ಅನುವು ಮಾಡಿದ್ದಾರೆ. ವಿಶ್ವಕರ್ಮ ಯೋಜನೆಯಿಂದ ಸಾಲ ಸೌಲಭ್ಯ ಹಾಗೂ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸಲು ತಲಾಖ್ ರದ್ದು ಮಾಡಿದ್ದಾರೆ ಎಂದರು.

ಯುವಸಮೂಹಕ್ಕೆ ಸ್ಕಿಲ್ ಇಂಡಿಯಾ ಯೋಜನೆ ತಂದಿದ್ದ ಮೋದಿ: ಕಿಸಾನ್ ಫಸಲ್‌ ವಿಮಾ, ಬ್ಯಾಂಕ್ ಸಾಲ ಸೇರಿ ಅನೇಕ ಮೋದಿ ಗ್ಯಾರಂಟಿ ಯೋಜನೆಗಳಿವೆ.ದೇಶಾದ್ಯಂತ ಗರೀಬ್ ಕಲ್ಯಾಣಕ್ಕಾಗಿ 5ಕೆಜಿ ಅಕ್ಕಿ ಉಚಿತ ಪಡಿತರ ಯೋಜನೆ ಜಾರಿಗೆ ಬಂದಿದೆ. ಅಂತ್ಯೋದಯ, ಗ್ರಾಮೋದಯ, ಸರ್ವೋದಯ ಮೋದಿ ತತ್ವ.

ಯುಪಿಎ ಅವಧಿಯಲ್ಲಾದ ಒಂದೇ ಒಂದು ಅಭಿವೃದ್ಧಿಯ ಕರ್ನಾಟಕ ಸರ್ಕಾಲ ತೋರಿಸಲಿ ಎಂದು ಪ್ರಮೋದ್ ಸಾವಂತೆ ಸವಾಲು ಹಾಕಿದರು.

ಶಿವಮೊಗ್ಗ ಶಾಸಕ ಚನ್ನಬಸಪ್ಪ ಮಾತನಾಡಿ, ಭಾರತ ರಾಷ್ಟ್ರವಾಗಿಯೇ ಉಳಿಯಬೇಕು ಅಂದ್ರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ವಿಶ್ವಗುರುವಾಗುವುದ ಇಡೀ ಜಗತ್ತೇ ಬಯಸುತ್ತಿದೆ. ಮೋದಿ ಸರ್ಕಾರ 109 ಯೋಜನೆಗಳನ್ನು ಕೊಟ್ಟಿದೆ.5 ಯೋಜನೆ ಕೊಟ್ಟು ಗಾಂಚಾಲಿ ಮಾಡ್ತಿರೋದು ಯಾರು ಎಂದು ಪ್ರಶ್ನೆ ಪ್ರಶ್ನೆ ಮಾಡಿದರು. ಕಾಂಗ್ರೆಸ್ ಹುಟ್ಟು ಅಡಗಿಸಬೇಕೆಂದು ಕರೆ ನೀಡಿದರು.

ರಾಷ್ಟ್ರಕ್ಕೆ ಕೊಟ್ಟ ಮಾತಿನಂತೆ ಮೋದಿ ಸರ್ಕಾರ ನಡೆದುಕೊಂಡಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಎಂದು ಕರೆದುಕೊಂಡರೂ ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಶಕ್ತಿ ತುಂಬುತ್ತಿದೆ. ದೇಶದಲ್ಲಿ ಭಯೋತ್ಪಾದನೆ ಬೀಜವ ಕಾಂಗ್ರೆಸ್ ಬಿತ್ತಿದೆ. ಬಿಂದ್ರನ್ ವಾಲೆ ಮೂಲಕ ಇಂದಿರಾಗಾಂಧಿ ಹತ್ಯೆ ಆಗಿದ್ದನ್ನು ಕಾಂಗ್ರೆಸ್ ಮರೆತಿದೆ. ಭಯೋತ್ಪಾದಕರ ಹುಟ್ಟನ್ನು ಅಡಗಿಸೋದು ಮೋದಿ ನೇತೃತ್ವದ ಸರ್ಕಾರವೆಂದು ಚನ್ನಬಸಪ್ಪ ಹೇಳಿದರು.

ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಚಿದಾನಂದ ಗೌಡ, ಅನಿಲ್ ಕುಮಾರ್, ಮಾಜಿ ಸಚಿವ ಭೈರತಿ ಬಸವರಾಜು, ಮಾಜಿ ಶಾಸಕರಾದ ನೇರ್ಲಗುಂಟೆ ತಿಪ್ಪೇಸ್ವಾಮಿ, ಜಿಲ್ಲಾದ್ಯಕ್ಷ ಎ ಮುರಳಿ ಭಾಗವಹಿಸಿದ್ದರು.

--------

--7 ಸಿಟಿಡಿ8--

ಚಿತ್ರದುರ್ಗದ ಕಮ್ಮಾರೆಡ್ಡಿ ಭವನದಲ್ಲಿ ಗುರುವಾರ ನಡೆದ ಬಿಜೆಪಿ ಬಿಜೆಪಿ ಬೂತ್ ಪ್ರಮುಖರ ಸಮಾವೇಶದಲ್ಲಿ ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಮಾತನಾಡಿದರು.