ಮತಗಳ್ಳತನ ವಿರುದ್ಧ ಸಹಿ ಸಂಗ್ರಹ

| Published : Nov 11 2025, 01:30 AM IST

ಸಾರಾಂಶ

ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಎ.ಐ.ಸಿ.ಸಿ. ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೇಶದ್ದುಗಲಕ್ಕೂ ಮತ ಕಳ್ಳತನ ಅಕ್ರಮಗಳನ್ನು ಸಾಕ್ಷಿ ಸಮೇತ ಪುರಾವೆ ನೀಡಿದ್ದರೂ ನೈತಿಕತೆ ಇಲ್ಲದ ಬಿಜೆಪಿ ಸರ್ಕಾರವು ನಾಚಿಕೆ ಇಲ್ಲದೆ ಅಧಿಕಾರ ಮುಂದುವರೆಸಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ದೇಶದಲ್ಲಿ ಜನರ ಮತದಾರ ಹಕ್ಕನ್ನು ಕಸಿದು ಮತಗಳ್ಳತನದಿಂದ ಅಧಿಕಾರಕ್ಕೆ ಬಂದಿರುವ ಕೇಂದ್ರದ ಆಡಳಿತರೊಡ ಬಿಜೆಪಿ ಸರ್ಕಾರದ ಅನ್ಯಾಯ, ಅಕ್ರಮಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನಲ್ಲಿ ಮೂವತ್ತು ಸಾವಿರ ಸಹಿವುಳ್ಳ ದಾಖಲೆಯ ಸಂಗ್ರಹವನ್ನು ಪ್ರದೇಶ ಕಾಂಗ್ರೆಸ್‌ ಕಚೇರಿಗೆ ಕಳುಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರದಾಧ್ಯಂತ ಸಹಿ ಸಂಗ್ರಹ

ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಎ.ಐ.ಸಿ.ಸಿ. ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೇಶದ್ದುಗಲಕ್ಕೂ ಮತ ಕಳ್ಳತನ ಅಕ್ರಮಗಳನ್ನು ಸಾಕ್ಷಿ ಸಮೇತ ಪುರಾವೆ ನೀಡಿದ್ದರೂ ನೈತಿಕತೆ ಇಲ್ಲದ ಬಿಜೆಪಿ ಸರ್ಕಾರವು ನಾಚಿಕೆ ಇಲ್ಲದೆ ಅಧಿಕಾರ ಮುಂದುವರೆಸಿದೆ ಎಂದು ಟೀಕಿಸಿದರು.

ಈ ದಿಸೆಯಲ್ಲಿ ಕಾಂಗ್ರೆಸ್‌ ದೇಶಾದ್ಯಂತ ಓಟ್‌ ಚೂರಿ, ಗದ್ದಿ ಚೋಡ್‌ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದು ,ಮಾಲೂರು ವಿಧಾನಸಭೆ ಕ್ಷೇತ್ರದ ಮಾಲೂರು ಮತ್ತು ಮಾಸ್ತಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ವತಿಯಿಂದ ಮೂವತ್ತು ಸಾವಿರ ಸಹಿ ಸಂಗ್ರಹ ಮಾಡಲಾಗಿದ್ದು ,ಇದನ್ನು ಕೆಪಿಸಿಸಿ ಕಚೇರಿಗೆ ಕಳುಹಿಸಲಾಗುತ್ತದೆ ಎಂದರು.ಮಾಸ್ತಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್.ಜಿ.ರಾಮಮೂರ್ತಿ,ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎ.ಅಶ್ವಥ ರೆಡ್ಡಿ ,ತಾಲೂಕು ಅಧ್ಯಕ್ಷ ಎಂ.ಅಂಜಿನಪ್ಪ,ಮುಖಂಡರಾದ ಬಸ್‌ ಸಂತೋಷ್‌, ಎ.ನಾಗರಾಜ ರೆಡ್ಡಿ, ಚಂದ್ರಶೇಖರ್‌ ಯಾದವ್‌, ವಪ್ಪಚ್ಚಹಳ್ಳಿ ಮುನಿರಾಜು ಇನ್ನಿತರರು ಇದ್ದರು.