ಕಟೀಲು ದೇವಳದಲ್ಲಿ 74 ಜೋಡಿಗಳಿಗೆ ಸರಳ ವಿವಾಹ

| Published : Apr 29 2024, 01:30 AM IST

ಕಟೀಲು ದೇವಳದಲ್ಲಿ 74 ಜೋಡಿಗಳಿಗೆ ಸರಳ ವಿವಾಹ
Share this Article
  • FB
  • TW
  • Linkdin
  • Email

ಸಾರಾಂಶ

ರಥಬೀದಿ ಬಸ್ಸು ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಪೊಲೀಸರು ಸೂಕ್ತ ವ್ಯವಸ್ಥೆ ಮಾಡಲಾಗಿದ್ದರೂ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ರಥ ಬೀದಿಯಲ್ಲಿ ಬಸ್ ನಿಲುಗಡೆ ಇರಲಿಲ್ಲ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ 74 ಜೋಡಿಗಳಿಗೆ ಸರಳ ರೀತಿಯಲ್ಲಿ ವಿವಾಹ ನಡೆಯಿತು.

ಭಾನುವಾರ ಬೆಳಗ್ಗೆ 8ರಿಂದ ಆರಂಭವಾದ ವಿವಾಹಗಳು ಅಪರಾಹ್ನ 1 ಗಂಟೆಯ ತನಕ ನಡೆದಿದೆ. ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು ಸುಮಾರು 10 ಸಾವಿರ ಜನರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ದೇವಸ್ಥಾನದಲ್ಲಿ ದಿನ ಎರಡು ಹೊತ್ತು ಅನ್ನಪ್ರಸಾದ ಭೋಜನ ವ್ಯವಸ್ಥೆ ಇದ್ದು ಭಾನುವಾರ ಮದುವೆಗೆ ನಾಲ್ಕು ಕೌಂಟರ್ ವ್ಯವಸ್ಥೆ ಮಾಡಿದ್ದು ಸುವ್ಯಸ್ಥಿತವಾಗಿ ಮದುವೆ ಮುಹೂರ್ತ ನಡೆಯುವ ನಿಟ್ಟಿನಲ್ಲಿ ಮದುವೆ ವ್ಯವಸ್ಥೆ ಗೆ 8 ಜನ ಅರ್ಚಕ ಪುರೋಹಿತರು, ನಾಲ್ಕು ಕೌಂಟರ್ ನಲ್ಲಿ ನೋಂದಣಿಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿತ್ತು.

ಟ್ರಾಫಿಕ್ ಜಾಮ್ : ಭಾನುವಾರ ರಜಾದಿನವಾಗಿರುವುದರಿಂದ ಮದುವೆಯ ಬಂದ ದಿಬ್ಬಣ ಹಾಗೂ ಭಕ್ತರಿಂದಾಗಿ ಕಟೀಲು ಪೇಟೆ ಹಾಗೂ ರಥಬೀದಿ ಬಸ್ಸು ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಪೊಲೀಸರು ಸೂಕ್ತ ವ್ಯವಸ್ಥೆ ಮಾಡಲಾಗಿದ್ದರೂ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ರಥ ಬೀದಿಯಲ್ಲಿ ಬಸ್ ನಿಲುಗಡೆ ಇರಲಿಲ್ಲ. ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಲಾಗಿದ್ದು ಪಕ್ಕದ ಸಿತ್ಲ ಬೈಲು , ಕಾಲೇಜು ಅವರಣ ಹಾಗೂ ಉಳ್ಳಂಜೆ ಹೋಗುವ ರಸ್ತೆಯ ಪಕ್ಕದ ಗದ್ದೆಗಳಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ----

ಉಳೆಪಾಡಿ ದೇವಳ ಸಾಮೂಹಿಕ ವಿವಾಹ

ಕನ್ನಡಪ್ರಭವಾರ್ತೆ ಮೂಲ್ಕಿದೇವಳಗಳಲ್ಲಿ ನಡೆಯುವ ಸಮಾಜಮುಖಿ ಕಾರ್ಯಕ್ರಮಗಳಿಂದ ದೇವಸ್ಥಾನದ ಅಭಿವೃದ್ಧಿ ಜೊತೆಗೆ ಸಾನ್ನಿಧ್ಯ ವೃದ್ಧಿ ಯಾಗುತ್ತದೆ ಎಂದು ಮೂಲ್ಕಿಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತ ಹೇಳಿದರು.

ಕಿನ್ನಿಗೋಳಿ ಸಮೀಪದ ಉಳೆಪಾಡಿಯ ಶ್ರೀ ದುರ್ಗಾಪರಮೇಶ್ವರಿ ಮಹಾಮ್ಮಯಿ ದೇವಸ್ಥಾನದಲ್ಲಿ ಜರುಗಿದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಂದರ್ಭ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇವಳದಲ್ಲಿ ಸುಮಾರು 6 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ , ವೇ. ಮೂ. ಕೃಷ್ಣರಾಜ ಎಸ್. ಭಟ್ ಬಪ್ಪನಾಡು ಅವರಿಂದ ಸಾತ್ವಿಕಾನಂದನೆ ಕಾರ್ಯಕ್ರಮ ನಡೆಯಿತು. ಬೆಂಗಳೂರು ಸತ್ಯವಾಣಿ ವಿದ್ಯಾಪೀಠದ ಡಾ.ಎನ್. ವಿ. ಪ್ರಸಾದ್ ಶೆಟ್ಟಿ ಅವರು ವಿಶ್ಲೇಷಣಾ ನುಡಿಗೈದರು. ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಉದ್ಯಮಿ ಡಾ.ವಿರಾರ್ ಶಂಕರ ಶೆಟ್ಟಿ ಬಳ್ಕುಂಜೆ ಗುತ್ತು, ಡಾ.ಕೃಷ್ಣ ಕುಮಾರ್ ಶೆಟ್ಟಿ ಮುಂಬೈ, ಉದ್ಯಮಿ ಬಿ. ಶ್ರೀನಿವಾಸ ಪ್ರಭು ಬ್ರಹ್ಮಾವರ, ಸುಧಾಕರ ಆಳ್ವ ಮಂಗಳೂರು, ರಾಜೇಂದ್ರ ಎಸ್ ಕುಡ್ವ ಮಣಿಪಾಲ, ಕೆ. ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಹೇಮಾಚಾರ್ಯ ಮೂರು ಕಾವೇರಿ , ದೇವಸ್ಥಾನದ ಧರ್ಮದರ್ಶಿ, ಮೋಹನ್ ದಾಸ್ ಸುರತ್ಕಲ್, ಸುಧಾಕರ್ ಮೆಸ್ಕಾಂ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು

ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಧಾ ಮತ್ತು ನಮ್ರತಾ ಕಾರ್ಯಕ್ರಮ ನಿರೂಪಿಸಿದರು.-------------------------------------------------------

ಚಿತರ:28ಉಳೆಪಾಡಿ ವಿವಾಹ