ಸರ್‌ ಎಂವಿ ಸಾಮಾಜಿಕ ಬದ್ಧತೆ ಅನುಕರಣೀಯ

| Published : Sep 23 2024, 01:34 AM IST / Updated: Sep 23 2024, 01:35 AM IST

ಸಾರಾಂಶ

ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿದವರು ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಇಂದಿನ ಸಾಮಾಜಿಕ ಮೌಲ್ಯಗಳ ಅವನತಿಯ ಕಾಲದಲ್ಲಿ ಎಲ್ಲರೂ ಸರ್ ಎಂ. ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್‌ ಎಂ. ವಿಶ್ವೇಶ್ವರಯ್ಯುನವರು ಕೇವಲ ವ್ಯಕ್ತಿಯಲ್ಲ, ಸಾಮಾಜಿಕ ಬದ್ಧತೆಯ ಸಂಸ್ಥೆಯಂತೆ ಇದ್ದವರು. ಶಿಸ್ತು ಮತ್ತು ಮೌಲ್ಯಯುತ ಬದುಕನ್ನು ಕಟ್ಟಿಕೊಂಡಿದ್ದರು. ಇಂದಿನ ಸಾಮಾಜಿಕ ಮೌಲ್ಯಗಳ ಅವನತಿಯ ಕಾಲದಲ್ಲಿ ಎಲ್ಲರೂ ಸರ್ ಎಂ. ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಹೇಳಿದರು.

ನಗರದ ಶಾಂತಿನಿಕೇತನ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಂತಿನಿಕೇತನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಎನ್.ಕುಮಾರ್ ಮಾತನಾಡಿ, ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿದವರು ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದರು.ಸಾಧಕರಿಗೆ ಸನ್ಮಾನ

ಇದೇ ವೇಳೆ ಕಸಾಪ ವತಿಯಿಂದ ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್.ಅನಿಲ್ ಕುಮಾರ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೇಶಕ ರವಿಕುಮಾರ್,ರಾಜ್ಯ ಮಟ್ಟದ ಅತ್ಯುತ್ತ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ಹರೀಶ್ ರಾಜ್ ಅರಸ್,ಸುಶೀಲಾ ಮಂಜುನಾಥ್, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅನುಪಮ,ಗೋವಿಂದರಾಜ್ ಯಾದವ್,ಕೆ.ಎಸ್.ಕಸ್ತೂರಿ,ಹರೀಶ್ ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್‌, ಬೆಂಗಳೂರು ಉತ್ತರ ವಿ.ವಿ. ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ಲೋಕನಾಥ್,ಕಸಾಪ ಗೌರವ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ,ಕಸಾಪ ಪದಾಧಿಕಾರಿಗಳಾದ ಸರ್ಧಾರ್ ಚಂದ್ ಪಾಷ, ಸರಸಮ್ಮ, ಅಮೃತ್ ಕುಮಾರ್, ಪ್ರೇಮಲೀಲಾ ವೆಂಕಟೇಶ್, ಮತ್ತಿತರರು ಇದ್ದರು.