ಸಾರಾಂಶ
ಮಡಿಕೇರಿ: 2024ನೇ ಸಾಲಿನ ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಮಡಿಕೇರಿ ನಗರದ ದಸರಾ ಸಮಿತಿ ಕಚೇರಿಯಲ್ಲಿ ನಡೆಯಿತು.
ಅಲಂಕಾರ ಸಮಿತಿ ಅಧ್ಯಕ್ಷರಾದ ಮುನೀರ್ ಮಾಚರ್ ಎಂ.ಎ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಸಲಹೆಗಾರರಾಗಿ ಮಂಜುನಾಥ್, ಪಿ. ಜಿ. ಉಪಾಧ್ಯಕ್ಷರಾಗಿ ರವಿಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಭರತ್ ಜಿ ಎನ್. ಕಾರ್ಯದರ್ಶಿಯಾಗಿ ಲಿಲ್ಲಿಗೌಡ, ಸಹ ಕಾರ್ಯದರ್ಶಿಯಾಗಿ ಪುನೀತ್ ಜಿ.ಎನ್., ಖಜಾಂಜಿ ರಫೀಕ್ ( ದಾದಾ ) ಸಂಘಟನಾ ಕಾರ್ಯದರ್ಶಿ ಹರ್ಷಿತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರವಿಗೌಡ ಸ್ವಾಗತಿಸಿದರು. ಭರತ್ ವಂದಿಸಿದರು.
ಭಗಂಡೇಶ್ವರ, ತಲಕಾವೇರಿ ದೇವಾಲಯಗಳಲ್ಲಿ ಪವಿತ್ರ ತೀಥೋದ್ಭವ, ವಿವಿಧ ಕಾರ್ಯಕ್ರಮ
ಮಡಿಕೇರಿ : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಭಾಗಮಂಡಲ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವತಿಯಿಂದ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆಯ ಪ್ರಯುಕ್ತ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಸೆ. 26 ರಂದು ಬೆಳಗ್ಗೆ 8.35 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು. ಅ. 4 ರಂದು ಬೆಳಗ್ಗೆ 10.21 ನಿಮಿಷಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ‘ಆಜ್ಞಾ ಮುಹೂರ್ತ’, ಅ. 14 ರಂದು ಬೆಳಗ್ಗೆ 11.35 ನಿಮಿಷಕ್ಕೆ ಸಲ್ಲುವ ಧನು ಲಗ್ನದಲ್ಲಿ ‘ಅಕ್ಷಯ ಪಾತ್ರೆ ಇರಿಸುವುದು, ಅ. 14 ರಂದು ಸಂಜೆ 4.15 ನಿಮಿಷಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ‘ಕಾಣಿಕೆ ಡಬ್ಬಿ ಇಡುವುದು’. ಅ. 17 ರಂದು ಬೆಳಗ್ಗೆ 7.40 ಗಂಟೆಗೆ ಸಲ್ಲುವ ತುಲಾ ಲಗ್ನದಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜರುಗಲಿದೆ.