ಕುಕ್ಕೆ ಸುಬ್ರಹ್ಮಣ್ಯ: ಆರು ಜೋಡಿಗೆ ಸಾಮೂಹಿಕ ವಿವಾಹ ಭಾಗ್ಯ

| Published : Feb 01 2024, 02:00 AM IST

ಕುಕ್ಕೆ ಸುಬ್ರಹ್ಮಣ್ಯ: ಆರು ಜೋಡಿಗೆ ಸಾಮೂಹಿಕ ವಿವಾಹ ಭಾಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಆವಶ್ಯಕ ವ್ಯವಸ್ಥೆಗಳನ್ನು ದೇವಳದಿಂದ ವಿಸೇಷವಾಗಿ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಸರ್ಕಾರದ ಆದೇಶದಂತೆ ಮಾಂಗಲ್ಯ ಭಾಗ್ಯ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ಬುಧವಾರ ನಡೆಸಲಾಯಿತು. ಬೆಳಗ್ಗೆ ೧೧.೨೦ ರಿಂದ ೧೨.೨೦ರ ವರೆಗೆ ನೆರವೇರುವ ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ ನಡೆದ ವಿವಾಹದಲ್ಲಿ ಆರು ಜೋಡಿಗಳು ಹಸೆಮಣೆ ಏರಿ ಸರಳ ಸಾಮೂಹಿಕ ವಿವಾಹವಾದರು.

ಸುಳ್ಯ ತಾಲೂಕಿನ ಸುಳ್ಯ ಕಸಬ ಗ್ರಾಮದ ಜಟ್ಟಿಪಳ್ಳ ನಿವಾಸಿ ಪ್ರಮೋದ್ ಜೆ ಮತ್ತು ಸುಳ್ಯ ತಾಲೂಕಿನ ಬಾಳುಗೋಡು ಪುನೇರಿ ಮನೆ ವಿದ್ಯಾ ಪಿ, ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ನೂಚಿಲ ಲೋಕೇಶ್ ಎನ್ ಮತ್ತು ಕಡಬ ತಾಲೂಕಿನ ಆಲಂತಾಯ ಗ್ರಾಮದ ಶಿವಾರ್ ಮನೆ ಸುಮಲತಾ ಎಸ್.ವಿ, ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಕುಂಟಿಕಾನ ಲೋಕೇಶ ಮತ್ತು ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ಮೈರಳ ಮನೆ ನವ್ಯ ಎಂ, ಸುಳ್ಯ ತಾಲೂಕು ಉಬರಡ್ಕ ಗ್ರಾಮ ಕುತ್ತಮೊಟ್ಟೆ ಜಯಂತ ಮತ್ತು ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮ ಗುಂಡಿಯಡ್ಕ ಮನೆ ಸರಸ್ವತಿ, ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ರೂಪ ನಗರ ನಿವಾಸಿ ವಿನಯ ಎಸ್.ನಾಯ್ಕ್ ಮತ್ತು ವಿಜಯಪುರ ಜಿಲ್ಲೆ ಹೊಸಪೇಟೆ ತಾಲೂಕು ಕಲ್ಲಹಳ್ಳಿ ಗ್ರಾಮದ ಪೆರಿ ಬಾಯಿ, ಕಡಬ ತಾಲೂಕು ಬಳ್ಪ ಗ್ರಾಮ ಎಣ್ಣೆ ಮಜಲು ದಿವಾಕರ ಎ ಮತ್ತು ಸುಳ್ಯ ತಾಲೂಕು ನಾಲ್ಕೂರು ಗ್ರಾಮ ಚತ್ರಪ್ಪಾಡಿ ಮನೆ ವಿದ್ಯಾ ಸಿ.ಎಲ್ ಹಸೆಮಣೆ ಏರಿದ ಜೋಡಿಗಳು.

ವಧು-ವರರಿಗೆ ಸಹಾಯಹಸ್ತ:

ಸರಳ ಸಾಮೂಹಿಕ ವಿವಾಹವಾಗುವ ವರನಿಗೆ ಶ್ರೀ ದೇವಳದಿಂದ ಹೂವಿನ ಹಾರ, ಪಂಚೆ, ಶಲ್ಯ, ಶರ್ಟ್, ಪೇಟ, ಬಾಸಿಂಗಕ್ಕಾಗಿ ಪ್ರೋತ್ಸಾಹ ಧನವಾಗಿ ರು.೫ ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರ ಇತ್ಯಾದಿಗಳಿಗೆ ರು.೧೦ ಸಾವಿರ ನೀಡಲಾಯಿತು. ಸುಮಾರು ರು. ೪೦ ಸಾವಿರ ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ಖರೀದಿಸಿ ಒದಗಿಸಲಾಯಿತು.

ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಆವಶ್ಯಕ ವ್ಯವಸ್ಥೆಗಳನ್ನು ದೇವಳದಿಂದ ವಿಸೇಷವಾಗಿ ಮಾಡಲಾಯಿತು. ಸರಳ ಸಾಮೂಹಿಕ ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ರು.೧೦ ಸಾವಿರ ನಿಶ್ಚಿತ ಠೇವಣಿ ಮತ್ತು ವಿವಾಹವಾಗುವ ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ ರು.೫೦ ಸಾವಿರಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಆಡಳಿತ ಮಂಡಳಿ ಸದಸ್ಯರಾದ ಪ್ರಸನ್ನ ದರ್ಬೆ, ಶೀವತ್ಸ ಬೆಂಗಳೂರು, ಪಿ.ಜಿ.ಎಸ್.ಎನ್ ಪ್ರಸಾದ್, ವನಜಾ ವಿ.ಭಟ್, ಶೋಭಾ ಗಿರಿಧರ್, ಮನೋಹರ್ ರೈ, ದೇವಳದ ಕಚೇರಿ ಮುಖ್ಯಸ್ಥ ಎನ್ ಪದ್ಮನಾಭ ಶೆಟ್ಟಿಗಾರ್, ಸಿಬ್ಬಂದಿ ಶಿವ ಸುಬ್ರಹ್ಮಣ್ಯ, ಎಂ.ಕೆ ಮೋಹನ್, ,ಶ್ರೀಮಂತ ಜೋಳದಪ್ಪಗೆ, ಮಹಾಬಲೇಶ್ವರ, ದಾಮೋಧರ ಡಿ.ಎಸ್, ಯೋಗೀಶ್, ಎಂ, ಮಾಜಿ ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆ, ಗ್ರಾಮ ಆಡಳಿತಾಧಿಕಾರಿ ರವಿಚಂದ್ರ ಪಿ, ಗ್ರಾಮ ಸಹಾಯಕ ಪುರುಷೋತ್ತಮ ಮತ್ತಿತರರಿದ್ದರು.