: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಂಗಳೂರು ಯೋಜನಾ ಕಚೇರಿಯಲ್ಲಿ ಸಿ.ಎಸ್.ಸಿ. ಸೇವಾದಾರರ ಕಾರ್ಯಗಾರ ನಡೆಯಿತು.

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಂಗಳೂರು ಯೋಜನಾ ಕಚೇರಿಯಲ್ಲಿ ಸಿ.ಎಸ್.ಸಿ. ಸೇವಾದಾರರ ಕಾರ್ಯಗಾರ ನಡೆಯಿತು.

ಕೇಂದ್ರ ಕಚೇರಿಯ ಸಿ.ಎಸ್.ಸಿ. ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಕೇಂದ್ರದ ಮೂಲಕ ಸರ್ಕಾರದ ಆನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ನೇರವಾಗಿ ಅತ್ಯಂತ ಪಾರದರ್ಶಕ ವ್ಯವಸ್ಥೆಯಲ್ಲಿ ಉಚಿತ ಮತ್ತು ನಿಗದಿತ ಸರ್ಕಾರಿ ದರದಲ್ಲಿ ಸೇವೆಗಳನ್ನು ಜನಸಾಮಾನ್ಯರಿಗೆ ಒದಗಿಸಲಾಗುತ್ತಿದೆ ಎಂದರು.

ಕಾರ್ಯಗಾರದಲ್ಲಿ ಭಾರತ ಸರ್ಕಾರದ ಐಟಿ ಸಚಿವಾಲಯದಿಂದ ಸಿ.ಎಸ್.ಸಿ. ಈ ಗವರ್ನೆನ್ಸ್ ಮೂಲಕ ನಡೆಸಲ್ಪಡುವ 3 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಆಯ್ದ ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಹಾಗೂ ಶೈಕ್ಷಣಿಕ ಮತ್ತು ಕೌಶಲ್ಯ ವಿಷಯಗಳಂತಹ ಇತರ ವಿಷಯಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಸಾಮಾರ್ಥ್ಯವನ್ನು ಹೆಚ್ಚಿಸಲು ಸಿ.ಎಸ್.ಸಿ ಒಲಂಪಿಯಾಡ್ ಪರೀಕ್ಷೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಕೆ ಟ್ರಸ್ಟ್ ಮಂಗಳೂರು ಸಿ.ಎಸ್.ಸಿ. ಕೇಂದ್ರದಲ್ಲಿ 2025-26ನೇ ಸಾಲಿನಲ್ಲಿ ಒಲಂಪಿಯಾಡ್ ನೋಂದಾವಣೆ ಮಾಡಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಿ ಅಭಿನಂದಿಸಲಾಯಿತು. ಪ್ರಸ್ತುತ ವರ್ಷದ ಒಲಂಪಿಯಾಡ್ ನೋಂದಾವಣೆ ಪ್ರಾರಂಭಗೊಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ. 1 ಜಿಲ್ಲಾ ನಿರ್ದೇಶಕ ದಿನೇಶ್ ಡಿ, ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್ ಎಸ್, ಎಮ್.ಐ.ಎಸ್. ಯೋಜನಾಧಿಕಾರಿಗಳಾದ ಪ್ರೇಮನಾಥ್, ಗೋಪಾಲ್ ಆಚಾರ್ಯ, ಸಿ.ಎಸ್.ಸಿ. ನೋಡಲ್ ಅಧಿಕಾರಿ ಪ್ರಶಾಂತ್ ಪೂರ್ಜೆ, ನಗದು ಮೇಲ್ವಿಚಾರಕ ಕೃಷ್ಣ, ತಾಲೂಕು ಸಿ.ಎಸ್.ಸಿ ಸೇವಾದಾರರು ಇದ್ದರು.