ಕಲೆಮನೆ ಉತ್ಸವ ಮತ್ತು ಪ್ರಶಸ್ತಿ ಪ್ರದಾನ

| Published : Jul 21 2024, 01:25 AM IST

ಸಾರಾಂಶ

ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳನ್ನು ಕಲೆಮನೆ ಸಭಾಂಗಣದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಹಮ್ಮಿಕೊಂಡಿದೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕುಮಾರ್‌ ಪ್ರದರ್ಶಕ ಕಲೆಗಳ ಕೇಂದ್ರವು ಜು. 20 ರಂದು 41ನೇ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವದಡಿ 2ನೇ ಅಂತಾರಾಷ್ಟ್ರೀಯ ಕಲೆಮನೆ ಭರತನಾಟ್ಯ ನೃತ್ಯ ಸ್ಪರ್ಧೆ, ಕಲೆಮನೆ ಪ್ರಶಸ್ತಿಪ್ರದಾನ ಸಮಾರಂಭ ಆಯೋಜಿಸಿದೆ ಎಂದು ಡಾ.ಕೆ. ಕುಮಾರ್‌ ತಿಳಿಸಿದ್ದಾರೆ.

ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳನ್ನು ಕಲೆಮನೆ ಸಭಾಂಗಣದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಹಮ್ಮಿಕೊಂಡಿದೆ. ಖ್ಯಾತ ನೃತ್ಯಗುರು ಡಾ.ಪಿ.ಕೆ. ನಾಗಲಕ್ಷ್ಮೀ ನಾಗರಾಜನ್‌, ಜ್ಯೋತಿ ಎನ್‌. ಹೆಗಡೆ ನೃತ್ಯ ಸ್ಪರ್ಧೆ ಉದ್ಘಾಟಿಸುವರು.

ಮಿತ್ರ ನವೀನ್‌, ಸ್ಮೃತಿ ರಮೇಶ್‌ ಕೌಶಿಕ್‌, ಕೆ.ಎಸ್‌. ಶೈಲಾ, ಬೈಜರಾಣಿ ಲೆಜಿನ್‌ ಅತಿಥಿಯಾಗಿ ಪಾಲ್ಗೊಳ್ಳುವರು. 2024ರ ಅಂತಾರಾಷ್ಟ್ರೀಯ ಕಲೆಮನೆ ಪ್ರಶಸ್ತಿ ಸ್ವೀಕರಿಸಲು ಮಾದರಿ ದಂಪತಿಗಳಾದ ಪಿ.ಎಸ್‌. ನಂದಿನಿ ಮತ್ತು ಡಾ.ವಿ. ರಂಗನಾಥ್‌ ಆಗಮಿಸುವರು. ರಕ್ಷಿತಾ ರಘುನಾಥನ್‌ ವಿಶೇಷ ನೃತ್ಯ ಕಾರ್ಯಕ್ರಮ ನಡೆಸಿಕೊಡುವರು.

ಜು. 21ರಂದು ಮಧ್ಯಾಹ್ನ 2.30 ರಿಂದ ಸಂಜೆ 6 ರವರೆಗೆ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಕಲೆಮನೆ ಪ್ರಶಸ್ತಿ ಸ್ವೀಕರಿಸಲು ಹಾಗೂ ಉತ್ಸವ ಉದ್ಘಾಟಿಸಲು ವಿದ್ವಾನ್‌ವಿ. ನಂಜುಂಡಸ್ವಾಮಿ ಮತ್ತು ಎಚ್‌.ಎಸ್‌. ಉಮಾದೇವಿ ದಂಪತಿ ಆಗಮಿಸುವರು. ಬಳಿಕ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮ ಇರುತ್ತದೆ. ನೃತ್ಯ ಗುರುಗಳಾದ ರೂಪಾ ಗಿರೀಶ್‌, ಲಕ್ಷ್ಮೀ, ಸ್ಮೃತಿ ರಮೇಶ್‌ ಕೌಶಿಕ್‌ ಮತ್ತು ತಂಡದರು ನೃತ್ಯ ಕಾರ್ಯಕ್ರಮ ನಡೆಸಿಕೊಡುವರು.