ಸಾರಾಂಶ
ಬಸವನಬಾಗೇವಾಡಿ: ಪಟ್ಟಣದ ನಾಗೂರ ರಸ್ತೆಯಲ್ಲಿರುವ ಬಸವನಕಟ್ಟೆ ಸಮೀಪ ಮಾಳಿ ಸಮಾಜ ಬಾಂಧವರು ಗುರುವಾರ ಮಹಾತ್ಮ ಜ್ಯೋತಿಭಾ ಪುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾತ್ಮ ಜ್ಯೋತಿಬಾ ಫುಲೆ ಅವರ ೧೯೭ನೇ ಜಯಂತಿ ಆಚರಿಸಿದರು
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಪಟ್ಟಣದ ನಾಗೂರ ರಸ್ತೆಯಲ್ಲಿರುವ ಬಸವನಕಟ್ಟೆ ಸಮೀಪ ಮಾಳಿ ಸಮಾಜ ಬಾಂಧವರು ಗುರುವಾರ ಮಹಾತ್ಮ ಜ್ಯೋತಿಭಾ ಪುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾತ್ಮ ಜ್ಯೋತಿಬಾ ಫುಲೆ ಅವರ ೧೯೭ನೇ ಜಯಂತಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾಳಿ ಸಮಾಜ ಯುವ ಮುಖಂಡ ಜಟ್ಟಿಂಗರಾಯ ಮಾಲಗಾರ ಮಾತನಾಡಿ, ದೇಶದಲ್ಲಿ ಶಿಕ್ಷಣದ ಮಹತ್ವ ಗುರುತಿಸುವಲ್ಲಿ ಜ್ಯೋತಿಬಾ ಫುಲೆ ಅವರು ನೀಡಿದ ಕೊಡುಗೆ ಅನನ್ಯ ಮತ್ತು ಶ್ರೇಷ್ಠವಾಗಿದೆ. ಧರ್ಮ, ಪಂಥ, ಸಂಪ್ರದಾಯ ಮೊದಲಾದ ಸಂಕುಚಿತ ಭಾವನೆಗಳಿಗೆ ಮರುಳಾಗದೇ ಮಾನವ ಧರ್ಮವನ್ನು ಅಂಗೀಕರಿಸಬೇಕು ಎಂದು ಹೇಳಿದ್ದರು. ಇಂತಹ ಮಹನೀಯರ ಜೀವನವನ್ನು ಯುವಜನಾಂಗ ಅರಿತುಕೊಳ್ಳಬೇಕೆಂದರು.ಸಾಮಾಜಿಕ ಕ್ರಾಂತಿಕಾರಿ ಹೋರಾಟಗಾರರಾಗಿ ಜೋತಿಬಾ ಫುಲೆ ಅವರು ಸಮಾಜ ಸುಧಾರಕರಾಗಿ ಸಮಾನತೆಯ ಹರಿಕಾರರಾಗಿ ದೀನದಲಿತ ಹಿಂದುಳಿದ ಸೇರಿದಂತೆ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಧೀಮಂತ ಹೋರಾಟಗಾರರಾಗಿ ಇತಿಹಾಸ ಪುಟದಲ್ಲಿ ದಾಖಲಾಗಿದ್ದಾರೆ. ಇವರು ಸ್ಥಾಪಿಸಿದ ಸತ್ಯ ಶೋಧಕ ಸಮಾಜ ಸಂಘವು ಜಾತಿಗಳ ಮೇಲು-ಕೀಳು ಭಾವನೆ, ಶೂದ್ರ ಭಾವನೆ ಹೋಗಲಾಡಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿ ಸಾಮಾಜಿಕ ಚೌಕಟ್ಟನ್ನು ತೀವ್ರ ಬದಲಾಯಿಸಲು ಸಾಕಷ್ಟು ಕಾರ್ಯನಿರ್ವಹಿಸಿತು. ಇಂತಹ ಮಹನೀಯರ ಆದರ್ಶ ಎಂದಿಗೂ ಪ್ರಸ್ತುತವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಗು ಮಾಲಗಾರ, ಪಾವಡೆಪ್ಪ ಮಾಲಗಾರ, ಸಿದ್ದಣ್ಣ ಕಲ್ಲೂರ, ಅಪ್ಪುಶ ಮಾಲಗಾರ, ಮುತ್ತು ಮಾಲಗಾರ, ಸಂಜು ಪವಾರ, ಈರಣ್ಣ ಮಠಪತಿ, ಮಂಜು ಮಾಲಗಾರ, ಸಂಗಪ್ಪ ತೋಟದ, ರವಿ ಮಾಲಗಾರ, ರಮೇಶ ಮಾಲಗಾರ ಇತರರು ಇದ್ದರು.