ಲಯನ್ಸ್ ಕ್ಲಬ್‌ನ ಸಾಮಾಜಿಕ ಕಾರ್ಯ ಶ್ಲಾಘನೀಯ

| Published : Feb 19 2024, 01:39 AM IST

ಸಾರಾಂಶ

ಲಯನ್ಸ್ ಕ್ಲಬ್ ವಿಶ್ವದ ಎಲ್ಲ ಕಡೆ ಉಚಿತ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜನಾನುರಾಗಿ ಸೇವೆ ಸಲ್ಲಿಸುತ್ತಿದೆ ಎಂದು ದಿ ನೇಚರ್ ಗ್ರೋವ್ ಮೋರ್ ಫೌಂಡೇಶನ್ ಅಧ್ಯಕ್ಷರೂ ಮತ್ತು ಲಯನ್ ಸದಸ್ಯೆ ಸಂಗೀತಾ ನಾಡ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಲಯನ್ಸ್ ಕ್ಲಬ್ ವಿಶ್ವದ ಎಲ್ಲ ಕಡೆ ಉಚಿತ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜನಾನುರಾಗಿ ಸೇವೆ ಸಲ್ಲಿಸುತ್ತಿದೆ ಎಂದು ದಿ ನೇಚರ್ ಗ್ರೋವ್ ಮೋರ್ ಫೌಂಡೇಶನ್ ಅಧ್ಯಕ್ಷರೂ ಮತ್ತು ಲಯನ್ ಸದಸ್ಯೆ ಸಂಗೀತಾ ನಾಡ ಗೌಡ ಹೇಳಿದರು.

ಪಟ್ಟಣದ ಲಯನ್ಸ್ ಕ್ಲಬ್, ದಿ ನೇಚರ್ ಗ್ರೋವ್ ಮೋರ್ ಫೌಂಡೇಶನ್ ಹಾಗೂ ಬಿಎಲ್‌ಡಿ ಈ ಕಣ್ಣಿನ ಆಸ್ಪತ್ರೆ ವಿಜಯಪುರ ಇವರ ಸಹಯೋಗದಲ್ಲಿ ದಿ.ಶಹಾ ಛಗನ್ ಲಾಲ್ ವೀರ ಚಂದ ಓಸ್ವಾಲ್ ಇವರ ಪುಣ್ಯಸ್ಮರಣೆ ನಿಮಿತ್ತ ನಡೆದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಲೆನ್ಸ್ ಅಳವಡಿಕೆ ಕಾರ್ಯಕ್ರಮ ದಲ್ಲಿ ಬಾಗವಹಿಸಿ ಅವರು ಮಾತನಾಡಿ, ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಸುಮಾರು ೧೦೫ ವರ್ಷ ಗಳಿಗು ಮೇಲ್ಪಟ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು ಅದರಲ್ಲಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಕಿತ್ಸೆ ಮತ್ತು ಲೆನ್ಸ್ ಅಳವಡಿಕೆ ಮುಖ್ಯವಾಗಿದೆ. ಲಯನ್ಸ್‌ ಕ್ಲಬ್‌ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಈ ವೇಳೆ ಒಟ್ಟು ೧೬೭ ಜನರಲ್ಲಿ ೯೯ ಗಂಡು ಹಾಗು ೬೮ ಹೆಣ್ಣು ಮಕ್ಕಳು ತಪಾಸಣೆಗೆ ಒಳಪಟ್ಟರು. ಅವರಲ್ಲಿ ೬೪ ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿದ್ದು. ೩೩ ಗಂಡು ಹಾಗೂ ೩೧ ಹೆಣ್ಣು ಜನರು ಇರುವರು. ಇದೇ ಫೆ೨೬ ರಂದು ಆಯ್ಕೆ ಆದ ಒಟ್ಟು ೬೪ ಜನರನ್ನು ಹಾಗೂ ಪ್ರತಿ ರೋಗಿಯೊಂದಿಗೆ ಒಬ್ಬರು ಸಹಾಯಕರನ್ನು ಹೀಗೆ ಬಸ್‌ನಲ್ಲಿ ಕರೆದು ಕೊಂಡು ಹೋಗಲಾಗುವದು ಎಂದು ಡಾ. ಅರ್ಕ್ ಪ್ರವ್ ರಾಯ್ ತಿಳಿಸಿದರು.

ಶಿಬಿರದ ನೇತೃತ್ವವನ್ನು ಡಾ.ಆರ್ಕಪ್ರವ ರಾಯ್, ಆಶಾ ಜ್ಯೋತಿ, ಸಿದ್ಧೇಶ ವಾಘ ವಹಿಸಿದ್ದರು. ಅವರಿಗೆ ಸಹಾಯಕರಾಗಿ ಡಾ.ಅರ್ಚನಾ, ಜೈ ಕಿಶನ್, ಸಾನಿಯಾ, ಶೀತಲ್, ಗಿರಿಜಾ , ಸುರೇಶ ಮತ್ತು ಮಲ್ಲಿಕಾರ್ಜುನ ಹಾಗೂ ೬ ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದರು. ಅಧ್ಯಕ್ಷೆ ಲಯನ್ ದೀಪಾ ರಾವ್ ಸಾಹೇಬ ದೇಸಾಯಿ, ರಜನಿ ಒಸವಾಲ್, ಸಂಗೀತಾ ನಾಡಗೌಡ, ಶಿಬಿರದ ದಾನಿಗಳಾದ ನಾರಂಗಿಬಾಯಿ ಛಗನ ಲಾಲ್ ಒಸವಾಲ್, ಸಂಜೀವಕುಮಾರ ಒಸ ವಾಲ್ ಹಾಗೂ ವೈದ್ಯರ ತಂಡ ಉಪಸ್ಥಿತರಿದ್ದರು.

ಲಯನ್ ಶರಣಯ್ಯ ಹಿರೇಮಠ, ಮಲ್ಲಿಕಾರ್ಜುನ ಬಿದರಕುಂದಿ, ಮಹೇಂದ್ರ ಒಸವಾಲ್, ವೀರುಪಾಕ್ಷಿ ಪತ್ತಾರ, ವೆಂಕನಗೌಡ ಪಾಟೀಲ್, ಸುಬ್ರಹ್ಮಣ್ಯಂ ಹೆಬ್ಬಾರ್, ಸಂಜೀವ ಒಸವಾಲ್, ಬಸವರಾಜ ಸಿದರಡ್ಡಿ ಹಾಗೂ ಬ್ರಾಂಚ್ ಕ್ಲಬ್‌ನ ಸದಸ್ಯರಾದ ಲೇಡಿ ಲಯನ್ ಸುಶೀಲಾ ಒಸವಾಲ್, ಮಂಜುಳಾ ಒಸ್ವಾಲ್, ಪ್ರಭಾವತಿ ಹೆಬ್ಬಾರ್, ರಂಜನಾ ಹಿರೇಮಠ, ಡಿಂಪಲ್ ಒಸ ವಾಲ್ ಹಾಗೂ ಲಯನ್ಸ್ ಪ್ರಾಥಮಿಕ ಶಾಲೆ ಸಿಬ್ಬಂದಿಗಳು ಉಪಸ್ಥಿತರಿದ್ದರು.